ಸೆಂಟ್ ಜಾನ್ಸ್(ಏ.25): ಏಕದಿನ ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿರುವ ವಿಂಡೀಸ್ ಆಯ್ಕೆ ಸಮಿತಿ, ಗತವೈಭವ ಮರುಸೃಷ್ಟಿಸುವ ವಿಶ್ವಾಸದಲ್ಲಿದೆ.  ವಿಶ್ವಕಪ್ ತಂಡಕ್ಕೆ ಸ್ಫೋಟಕ  ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ಆ್ಯಂಡ್ರೆ ರಸೆಲ್‌ಗೆ ಸ್ಥಾನ ನೀಡಲಾಗಿದೆ. 

ಇದನ್ನೂ ಓದಿ: 2019ರ ವಿಶ್ವಕಪ್ ಫೈನಲ್ ಪ್ರವೇಶಿಸೋ ತಂಡ ಯಾವುದು?- ಭವಿಷ್ಯ ನುಡಿದ ದ್ರಾವಿಡ್!

 ಹಿರಿಯ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿಲ್ಲ. ಜೇಸನ್ ಹೋಲ್ಡರ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಕಾರ್ಲೋಸ್ ಬ್ರಾಥ್ವೈಟ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ರಾಯುಡು, ಪಂತ್’ಗೆ ಗುಡ್’ನ್ಯೂಸ್..!

ವಿಂಡೀಸ್ ತಂಡ:
ಜೇಸನ್ ಹೋಲ್ಡರ್(ನಾಯಕ), ಆ್ಯಂಡ್ರೆ ರಲೆಸ್, ಆ್ಯಶ್ಲೆ ನರ್ಸ್, ಕಾರ್ಲೋಸ್ ಬ್ರಾಥ್ವೈಟ್, ಕ್ರಿಸ್ ಗೇಲ್, ಡರೆನ್ ಬ್ರಾವೋ, ಎವಿನ್ ಲಿವಿಸ್, ಫ್ಯಾಬಿಯನ್ ಅಲೆನ್, ಕೆಮರ್ ರೋಚ್, ನಿಕೋಲಸ್ ಪೂರನ್, ಒಶಾನೆ ಥಾಮಸ್, ಶೈ ಹೋಪ್, ಶ್ಯಾನನ್ ಗೆಬ್ರಿಯಲ್, ಶೆಲ್ಡನ್ ಕಾಟ್ರೆಲ್, ಶಿಮ್ರನ್ ಹೆಟ್ಮೆಯರ್