ಉಡುಪಿ(ಏ.23): ಐಪಿಎಲ್ ಟೂರ್ನಿ ನಡುವೆಯೂ ಪ್ರತಿಷ್ಠಿತ  ವಿಶ್ವಕಪ್ ಟೂರ್ನಿ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಟೀಂ ಇಂಡಿಯಾ ಈಗಾಗಲೇ ವಿಶ್ವಕಪ್ ತಂಡ ಕೂಡ ಪ್ರಕಟಿಸಿದೆ. ಇದೀಗ ಈ ಬಾರಿ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಚರ್ಚೆ ಶುರುವಾಗಿದೆ. ಈ ಪ್ರಶ್ನೆಗೆ ಇದೀಗ ಟೀಂ ಇಂಡಿಯಾ ಎ ತಂಡದ ಕೋಚ್, ಮಾಜಿ ನಾಯಕ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕ್!

ಈ ಬಾರಿಯ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತದೊಂದಿಗೆ ಇಂಗ್ಲೆಂಡ್ ಅಥನಾ ಅಸ್ಟ್ರೇಲಿಯಾ ತಂಡಗಳು ಫೈನಲ್ ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ ಎಂದು ರಾಹುಲ್ ಡ್ರಾವಿಡ್ ಭವಿಷ್ಯ ನುಡಿದಿದ್ದಾರೆ.
 ಈ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್‌ ತಂಡದಲ್ಲಿ ಧೋನಿ; ವಿರಾಟ್ ಹೇಳಿದ್ದಿಷ್ಟು...

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ವಿ.ವಿ.ಯ ಒಳಾಂಗಣ ಕ್ರೀಡಾಂಗಣ ಮರೆನಾದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ರಾಹುಲ್ ದ್ರಾವಿಡ್, ವಿಶ್ವಕಪ್ ಟೂರ್ನಿ ಭವಿಷ್ಯ ಹೇಳಿದರು. ವಿಶ್ವಕಪ್ ಟೂರ್ನಿಗಂ ಇಂಗ್ಲೆಂಡ್ ಆತಿಥ್ಯ ವಹಿಸಿದೆ. ಹೀಗಾಗಿ  ಇಂಗ್ಲೆಂಡ್  ತಂಡಕ್ಕೆ ತವರು ಮೈದಾನದ ಲಾಭ ಇದೆ, ಜೊತೆಗೆ ಇಂಗ್ಲೆಂಡ್ ತಂಡದ ಆಟಗಾರರು ಕೂಡ ಚೆನ್ನಾಗಿ ಆಡುತ್ತಿದ್ದಾರೆ ಎಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ವಿರುದ್ದ ಏಕದಿನ ಸರಣಿ ಗೆದ್ದಿರುವ  ಆಸ್ಟ್ರೇಲಿಯಾ  ಕೂಡ ಗಮನಿಸಬೇಕಾದ ತಂಡವಾಗಿದೆ ಎಂದಿದ್ದಾರೆ.