ನವದೆಹಲಿ: ವಿಕೆಟ್ ಕೀಪರ್ ರಿಷಭ್ ಪಂತ್, ಬ್ಯಾಟ್ಸ್'ಮನ್ ಅಂಬಟಿ ರಾಯುಡು ಹಾಗೂ ವೇಗಿ ನವದೀಪ್ ಸೈನಿ ಅವರನ್ನು ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡದ ಮೀಸಲು ಆಟಗಾರರನ್ನಾಗಿ ಬಿಸಿಸಿಐ ಬುಧವಾರ ಆಯ್ಕೆ ಮಾಡಿದೆ. 

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್

ಒಂದೊಮ್ಮೆ ವಿಶ್ವಕಪ್‌ಗೆ ಆಯ್ಕೆಯಾಗಿರುವ 15 ಆಟಗಾರರ ಪೈಕಿ ಯಾರಾದರೂ ಗಾಯಗೊಂಡರೆ ಈ ಆಟಗಾರರು ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಇದರೊಂದಿಗೆ ವಿಶ್ವಕಪ್‌ಗೆ ಆಯ್ಕೆಗೊಳ್ಳಲಿಲ್ಲ ಎಂಬ ಬೇಸರದಲ್ಲಿದ್ದ ಪಂತ್ ಹಾಗೂ ರಾಯುಡುಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಕ್ಕಿದಂತಾಗಿದೆ. ನಾಲ್ವರು ನೆಟ್ಸ್ ಬೌಲರ್‌ಗಳ ಪೈಕಿ ಸೈನಿ ಕೂಡ ಒಬ್ಬರಾಗಿದ್ದಾರೆ. ಇದೀಗ ಮೀಸಲು ಆಟಗಾರನಾಗಿಯೂ ಸೈನಿ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಸೋಮವಾರ ವಿರಾಟ್ ಕೊಹ್ಲಿ ನೇತೃತ್ವದ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿತ್ತು. ಈ ವೇಳೆ ಯುವ ಕ್ರಿಕೆಟಿಗ ರಿಷಭ್ ಪಂತ್‌ಗೆ ಅವಕಾಶ ನೀಡದ್ದಕ್ಕೆ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ‘ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಆಯ್ಕೆ ಮಾಡಿದಂತೆ, ವಿಶ್ವಕಪ್‌ಗೂ ಮೂವರು ಮೀಸಲು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಕೀಪರ್, ಬ್ಯಾಟ್ಸ್‌ಮನ್ ಹಾಗೂ ಬೌಲರ್ ಇದ್ದಾರೆ.