ಆ್ಯಂಟಿಗಾ[ಆ.29]: ಭಾರತ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರಕಟಿಸಲಾಗಿದ್ದು ಕೀಮೋ ಪೌಲ್‌ ಸ್ಥಾನ ಪಡೆದಿದ್ದಾರೆ. ಆದರೆ ಎರಡನೇ ಪಂದ್ಯದಲ್ಲಾದರೂ ತಂಡದಲ್ಲಿ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕ್ರಿಸ್ ಗೇಲ್’ಗೆ ವಿಂಡೀಸ್ ಆಯ್ಕೆ ಸಮಿತಿ ಆಘಾತ ನೀಡಿದೆ. 

ಇನ್ನೂ ಮುಗಿದಿಲ್ಲ ಅಂತಾರಾಷ್ಟ್ರೀಯ ಕರಿಯರ್ , ಪ್ರತಿಕ್ರಿಯೆ ನೀಡಿದ ಗೇಲ್!

ಗಾಯಗೊಂಡ ವೇಗದ ಬೌಲರ್‌ ಮಿಗುಯೆ​ಲ್‌ ಕಮಿನ್ಸ್‌ ಬದಲಿಗೆ ಕೀಮೋ ಪೌಲ್ ತಂಡ ಸೇರಿ​ಕೊಂಡಿದ್ದು, ಆಡುವ ಹನ್ನೊಂದರ ಬಳ​ಗ​ದಲ್ಲಿ ಸ್ಥಾನ ಪಡೆ​ಯುವ ನಿರೀಕ್ಷೆ ಇದೆ. ಆದರೆ 103 ಟೆಸ್ಟ್ ಪಂದ್ಯಗಳನ್ನಾಡಿರುವ ಗೇಲ್ ತವರಿನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಲು ಆಸೆ ವ್ಯಕ್ತಪಡಿಸಿದ್ದರು. ಆದರೆ ವಿಂಡೀಸ್ ಕ್ರಿಕೆಟ್ ಮಂಡಳಿ ಗೇಲ್ ಮನವಿಯನ್ನು ಪುರಸ್ಕರಿಸಿಲ್ಲ. 2014ರಲ್ಲಿ ವಿಂಡೀಸ್ ಪರ ಕಡೆಯ ಟೆಸ್ಟ್ ಪಂದ್ಯವಾಡಿರುವ ಗೇಲ್ ಇದುವರೆಗೂ 7,214 ರನ್ ಬಾರಿಸಿದ್ದಾರೆ. 

ಒಂದು ಗೆಲುವು: 3 ಅಪರೂಪದ ರೆಕಾರ್ಡ್, ಕಿಂಗ್ ಕೊಹ್ಲಿ ಕಿರೀಟಕ್ಕೆ ಮತ್ತಷ್ಟು ಗರಿ..!

ಶುಕ್ರವಾರ ಜಮೈಕಾದಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್‌ಗೆ 13 ಸದಸ್ಯರ ವೆಸ್ಟ್‌ ಇಂಡೀಸ್‌ ತಂಡ ಪ್ರಕಟವಾಗಿದೆ. ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರಿಂದ ಪೌಲ್‌ ಮೊದಲ ಟೆಸ್ಟ್‌ ಆಡಿರಲಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 318 ರನ್’ಗಳ ಭಾರೀ ಅಂತರದ ಜಯ ಸಾಧಿಸಿ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.