ಬೆಂಗಳೂರು[ಆ.26]: ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಕ್ಯಾಪ್ಟನ್ಸಿಯಲ್ಲೂ ಅಪರೂಪದ ದಾಖಲೆ ಬರೆದಿದ್ದಾರೆ.

ಬುಮ್ರಾ ಏಷ್ಯಾ ಸಾಮ್ರಾಟ: ದಿಗ್ಗಜರು ಮಾಡಲಾಗದ ಸಾಧನೆ ಇದೀಗ ಬುಮ್ರಾ ತೆಕ್ಕೆಗೆ

ಹೌದು, ವೆಸ್ಟ್ ಇಂಡೀಸ್ ವಿರುದ್ಧ ಆ್ಯಂಟಿಗದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 318 ರನ್’ಗಳ ಗೆಲುವು ಸಾಧಿಸಿದೆ. ಈ ಮೂಲಕ ವಿದೇಶಿ ನೆಲದಲ್ಲಿ ಭಾರತ ತಂಡವು ಟೆಸ್ಟ್ ಕ್ರಿಕೆಟ್’ನಲ್ಲಿ ಅತಿ ದೊಡ್ಡ ರನ್’ಗಳ ಅಂತರದ ಗೆಲುವು ದಾಖಲಿಸಿದ ಸಾಧನೆ ಮಾಡಿತು. ಇದರೊಂದಿಗೆ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಪೂರ್ಣ 60 ಅಂಕಗಳನ್ನು ಕಲೆಹಾಕಿದ ಸಾಧನೆ ಮಾಡಿದೆ. ಇದರ ಜತೆಗೆ ವಿರಾಟ್ ಕೊಹ್ಲಿ ಕೂಡಾ 3 ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ.

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

ದಾಖಲೆಗಳ ಪಟ್ಟಿ:

*ವಿದೇಶಿ ನೆಲದಲ್ಲಿ ಅತಿಹೆಚ್ಚು ಪಂದ್ಯ ಗೆಲ್ಲಿಸಿದ ಭಾರತದ ನಾಯಕ:

ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ, ವಿದೇಶಿ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯವನ್ನು ಗೆಲ್ಲಿಸಿಕೊಟ್ಟ ಭಾರತದ ನಾಯಕ ಎನ್ನುವ ದಾಖಲೆ ಬರೆದಿದ್ದಾರೆ. ಈ ಮೊದಲು ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾ ವಿದೇಶದಲ್ಲಿ 11 ಬಾರಿ ಗೆಲುವಿನ ಕೇಕೆ ಹಾಕಿತ್ತು. ಇದೀಗ 12 ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ದಾದಾ ದಾಖಲೆ ಹಿಂದಿಕ್ಕಿ ವಿರಾಟ್ ಮೊದಲ ಸ್ಥಾನಕ್ಕೇರಿದ್ದಾರೆ.

* ಧೋನಿ ದಾಖಲೆ ಸರಿಗಟ್ಟಿದ ವಿರಾಟ್:

ವಿಂಡೀಸ್ ವಿರುದ್ಧದ ಮೊದಲ ಗೆಲುವಿನೊಂದಿಗೆ ಭಾರತದ ಪರ ಅತಿಹೆಚ್ಚು ಟೆಸ್ಟ್ ಪಂದ್ಯ[ತವರು&ತವರಿನಾಚೆ] ಗೆಲ್ಲಿಸಿಕೊಟ್ಟ ನಾಯಕರ ಪಟ್ಟಿಯಲ್ಲಿ ಧೋನಿ ಜತೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 60 ಪಂದ್ಯಗಳನ್ನಾಡಿ 27 ಪಂದ್ಯಗಳಲ್ಲಿ ಜಯಸಾಧಿಸಿದರೆ, ವಿರಾಟ್ ನಾಯಕತ್ವದಲ್ಲಿ ಕೇವಲ 47 ಪಂದ್ಯಗಳನ್ನಾಡಿ 27 ಪಂದ್ಯಗಳನ್ನು ಜಯಿಸಿದೆ. ಇನ್ನೊಂದು ಪಂದ್ಯ ಜಯಿಸಿದರೆ ಭಾರತ ಪರ ಗರಿಷ್ಠ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದ ನಾಯಕ ಎನ್ನುವ ದಾಖಲೆ ವಿರಾಟ್ ಪಾಲಾಗಲಿದೆ.

* 100 ಗೆಲುವು ತಂದುಕೊಟ್ಟ ನಾಯಕ

ಭಾರತಕ್ಕೆ ನೂರು ಗೆಲುವು ತಂದುಕೊಟ್ಟ ಭಾರತದ ಮೂರನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎನ್ನುವ ಗೌರವಕ್ಕೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಟೆಸ್ಟ್, ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಇದುವರೆಗೂ 152 ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನಡೆಸಿರುವ ವಿರಾಟ್, ತಂಡವನ್ನು 100 ಬಾರಿ ಗೆಲುವಿನತ್ತ ಮುನ್ನಡೆಸಿದ್ದಾರೆ. ರಿಕಿ ಪಾಂಟಿಂಗ್[134], ಸ್ಟೀವ್ ವಾ[150] ಹ್ಯಾನ್ಸಿ ಕ್ರೋನೆ[151] ಬಳಿಕ ಅತಿ ಕಡಿಮೆ ಪಂದ್ಯಗಳಲ್ಲಿ 100 ಗೆಲುವು ತಂದುಕೊಟ್ಟ ಏಷ್ಯಾದ ನಾಯಕ ಎನ್ನುವ ಶ್ರೇಯವು ವಿರಾಟ್ ಪಾಲಾಗಿದೆ. ವಿರಾಟ್ ನಾಯಕತ್ವದಲ್ಲಿ ಟೆಸ್ಟ್[27], ಏಕದಿನ[58] ಹಾಗೂ ಟಿ20[15] ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಇನ್ನು ಭಾರತ ಪರ ಅತಿಹೆಚ್ಚು ಪಂದ್ಯ ಗೆಲ್ಲಿಸಿಕೊಟ್ಟ ನಾಯಕ ಎನ್ನವ ದಾಖಲೆ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿದ್ದು, ಧೋನಿ 178 ಬಾರಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ. ನಂತರದ ಸ್ಥಾನದಲ್ಲಿ ಮೊಹಮ್ಮದ್ ಅಜರುದ್ದೀನ್[104] ಇದ್ದಾರೆ.