ಓವಲ್(ಮೇ.26): ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ನ್ಯೂಜಿಲೆಂಡ್ ವಿರುದ್ದದ ಸೋಲಿನ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ತಂಡದ ಆಟಗಾರರು ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳಬೇಕಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಫೀಲ್ಡಿಂಗ್ ಪ್ರತಿ ಪಂದ್ಯದಲ್ಲಿ ಪ್ರಮುಕ ಪಾತ್ರ ನಿರ್ವಹಿಸಲಿದೆ. ಹೀಗಾಗಿ ಒಂದು ಸಣ್ಣ ತಪ್ಪು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಬಿಟ್ಟು ರಾಹುಲ್ ಗಾಂಧಿ ಟ್ರೋಲ್ ಮಾಡಿದ ಸಂಜಯ್ ಮಂಜ್ರೇಕರ್!

ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲು ಕಷ್ಟವಾಗಿತ್ತು. ಆದರೆ 2ನೇ ಇನ್ನಿಂಗ್ಸ್ ವೇಳೆ ಪಿಚ್ ಬದಲಾಗಿತ್ತು. ಕಠಿಣ ಸಂದರ್ಭದಲ್ಲಿ ರವೀಂದ್ರ ಜಡೇಜಾ ಅದ್ಬುತ ಇನ್ನಿಂಗ್ಸ್ ಕಟ್ಟಿದರು. ಪ್ರತಿಷ್ಠಿತ ಟೂರ್ನಿಗಳಲ್ಲಿ ಕೆಳ ಕ್ರಮಾಂಕವೂ ಕೂಡ ನೆರವು ನೀಡಬೇಕು.  ಇದೀಗ ಜಡೇಜಾ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಅಭ್ಯಾಸ ಪಂದ್ಯ: ವಿಕೆಟ್ ಕೀಪಿಂಗ್ ಬದಲು ಫೀಲ್ಡಿಂಗ್ ಮಾಡಿದ ಧೋನಿ!

ಎಂ.ಎಸ್.ಧೋನಿ ಒತ್ತಡವನ್ನು ನಿಭಾಯಿಸಿದರು. ಇನ್ನು ಹಾರ್ದಿಕ್ ಪಾಂಡ್ಯ  ಕೂಡ  ಸಾಥ್ ನೀಡಿದರು. ಆದರೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ರನ್ ಹರಿದು ಬರ್ಲಿಲ್ಲ ಎಂದಿದ್ದಾರೆ. ಸಂಪೂರ್ಣ ತಂಡ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ ಎಂದಿದ್ದಾರೆ.