ಓವಲ್(ಮೇ.26): ನ್ಯೂಜಿಲೆಂಡ್ ವಿರುದ್ದ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಟೀಂ  ಇಂಡಿಯಾ ಮುಗ್ಗರಿಸಿದೆ. ಆದರೆ ಈ ಪಂದ್ಯದಲ್ಲಿ ಕುತೂಹಲ ಘಟನೆ ನಡೆದಿದೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಎಂ.ಎಸ್.ಧೋನಿ ಕೀಪಿಂಗ್ ಬದಲು ಫೀಲ್ಡಿಂಗ್ ಮಾಡಿ ಗಮನಸೆಳೆದರು.

ಇದನ್ನೂ ಓದಿ: ವಿಶ್ವಕಪ್ 2019: ಆಟಗಾರರಿಗೆ ಗಾಯ -ಫೀಲ್ಡಿಂಗ್‌ಗಿಳಿದ ಕೋಚ್‌!

ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಧೋನಿ, ಕೀಪ್ಂಗ್ ಗ್ಲೌಸ್ ಕಳಚಿಟ್ಟರು. ದಿನೇಶ್ ಕಾರ್ತಿಕ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರೆ ಧೋನಿ ಫೀಲ್ಡಿಂಗ್‌ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಧೋನಿ ಪೀಲ್ಡಿಂಗ್ ವಿಡೀಯೋ ವೈರಲ್ ಆಗಿದೆ.

 

 

ಇದನ್ನೂ ಓದಿ: ವಿಶ್ವಕಪ್ ಅಭ್ಯಾಸ ಪಂದ್ಯ: ನ್ಯೂಜಿಲೆಂಡ್‌ಗೆ ಶರಣಾದ ಕೊಹ್ಲಿ ಬಾಯ್ಸ್!

28ರಂದು ಕಾರ್ಡಿಫ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಭಾರತ,  ಬಾಂಗ್ಲಾದೇಶವನ್ನು ಎದುರಿಸಲಿದೆ. 2 ಅಭ್ಯಾಸ ಪಂದ್ಯದ ಬಳಿಕ ಭಾರತ ಅಸಲಿ ಹೋರಾಟಕ್ಕೆ ರೆಡಿಯಾಗಲಿದೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಭಾರತದ ಹೋರಾಟ ಜೂನ್ 5 ರಿಂದ ಆರಂಭವಾಗಲಿದೆ.