ಲಂಡನ್(ಮೇ.24): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಸೇರಿದಂತೆ ಎದುರಾಳಿಗಳನ್ನು ಧೂಳೀಪಟ ಮಾಡಿದ ಬಿಜೆಪಿ ಇದೀಗ ಸತತ 2ನೇ ಬಾರಿಗೆ ಅಧಿಕಾರ ಗದ್ದುಗೆ ಏರಲು ಸಜ್ಜಾಗಿದೆ. ದೇಶದಲ್ಲೀಗ ಬಿಜೆಪಿ ಹಾಗೂ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ನರೇಂದ್ರ ಮೋದಿಯ ಭರ್ಜರಿ ಗೆಲುವಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ.

ಇದನ್ನೂ ಓದಿ: ಭರ್ಜರಿಯಾಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಗಂಭೀರ್

ಸದ್ಯ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ನಾಡಿನಲ್ಲಿ ಬೀಡುಬಿಟ್ಟಿದೆ. ಇತ್ತ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಭ್ಯಾಸ ನಡೆಸುತ್ತಿರುವ ಕೊಹ್ಲಿ, ನರೇಂದ್ರ ಮೋದಿಗೆ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಭಾರತ ಮತ್ತಷ್ಟು ಪ್ರಜ್ವಲಿಸೋ ವಿಶ್ವಾಸವಿದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ಗಂಭೀರ್ ಸಿಕ್ಸರ್, ವಿಜೇಂದರ್ ಪಂಚರ್ - ಚುನಾವಣೆಯಲ್ಲಿ ಕ್ರೀಡಾಪಟುಗಳಿಗೆ ಸಿಹಿ-ಕಹಿ

ಕೊಹ್ಲಿ ಮಾತ್ರವಲ್ಲ, ಸಚಿನ್ ತೆಂಡುಲ್ಕರ್, ಶಿಖರ್ ಧವನ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಮೋದಿಗೆ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಜೂನ್ 5 ರಂದು  ಟೀಂ ಇಂಡಿಯಾ ಮೊದಲ ಪಂದ್ಯ ಆಡಲಿದೆ.