ನಾಗ್ಪುರ[ಮಾ.05]: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಪ್ರತಿಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ನಿರ್ಮಿಸುತ್ತಿರುವ ಕೊಹ್ಲಿ ಇಂದು ನಾಯಕನಾಗಿ ಅಪರೂಪದ ದಾಖಲೆ ಬರೆದಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ನಿರ್ಮಾಣವಾದ 4 ಅಪರೂಪದ ಕ್ರಿಕೆಟ್ ವಿಶ್ವದಾಖಲೆಗಳಿವು..!

ಆಸಿಸ್ ಪ್ರವಾಸದ ವೇಳೆಯೇ ಟೀಂ ಇಂಡಿಯಾ ನಾಯಕ ಕೊಹ್ಲಿ ಅತಿವೇಗವಾಗಿ[399 ಇನ್ನಿಂಗ್ಸ್] ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 19 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು. ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಏಷ್ಯಾದ ಮೊದಲ ನಾಯಕ ಎನ್ನುವ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದರು. ಇದೀಗ ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ.

ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿ ಟೀಂ ಇಂಡಿಯಾ..!

ಹೌದು, ನಾಯಕನಾಗಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿವೇಗವಾಗಿ[159 ಇನ್ನಿಂಗ್ಸ್] 9 ಸಾವಿರ ರನ್ ಪೂರೈಸಿದ ಮೊದಲ ಹಾಗೂ ಒಟ್ಟಾರೆ 6ನೇ ನಾಯಕ ಎನ್ನುವ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಇದೀಗ ಅತಿವೇಗವಾಗಿ 7,8 ಹಾಗೂ 9 ಸಾವಿರ ರನ್ ಬಾರಿಸಿದ ನಾಯಕ ಎನ್ನುವ ಶ್ರೇಯ ಕೊಹ್ಲಿ ಪಾಲಾಗಿದೆ. ಈ ಮೊದಲು ವೆಸ್ಟ್ ಇಂಡೀಸ್’ನ ಬ್ರಿಯಾನ್ ಲಾರಾ 164 ಇನ್ನಿಂಗ್ಸ್’ಗಳಲ್ಲಿ ನಾಯಕನಾಗಿ 7000 ರನ್ ಬಾರಿಸಿದ್ದರು.

ಇದೀಗ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ 25 ಓವರ್ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 124 ರನ್ ಬಾರಿಸಿದೆ. ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ 50ನೇ ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.