2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಡ್ರಾ ಮೂಲಕ ತಂಡಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದೆ. ಅರ್ಜೆಂಟೀನಾ 'ಜೆ' ಗುಂಪಿನಲ್ಲಿ ಮತ್ತು ಬ್ರೆಜಿಲ್ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 48 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ.

ನ್ಯೂಯಾರ್ಕ್: 2026ರ ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂಬರುವ ಜೂನ್ 11ರಿಂದ ಜುಲೈ 19ರವರೆಗೆ ಪ್ರತಿಷ್ಠಿತ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ. ಈ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ ಜಗತ್ತಿನ 48 ಬಲಿಷ್ಠ ಫುಟ್ಬಾಲ್ ತಂಡಗಳು ಈ ಪ್ರತಿಷ್ಠಿತ ವಿಶ್ವಕಪ್‌ಗಾಗಿ ಕಾದಾಡಲಿವೆ.

2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನ ವೇಳಾಪಟ್ಟಿ ಹೊರಬಿದ್ದಿದೆ. ಡ್ರಾ ಮೂಲಕ ನಡೆದ ಆಯ್ಕೆಯಲ್ಲಿ ಅರ್ಜೆಂಟೀನಾ ಗ್ರೂಪ್ ಜೆ ಮತ್ತು ಬ್ರೆಜಿಲ್ ಗ್ರೂಪ್ ಸಿ ಯಲ್ಲಿ ಸ್ಥಾನ ಪಡೆದಿವೆ. ಫ್ರಾನ್ಸ್ ಗ್ರೂಪ್ ಐ, ಇಂಗ್ಲೆಂಡ್ ಗ್ರೂಪ್ ಎಲ್, ಬೆಲ್ಜಿಯಂ ಗ್ರೂಪ್ ಜಿ, ನೆದರ್ಲ್ಯಾಂಡ್ಸ್ ಗ್ರೂಪ್ ಎಫ್, ಜರ್ಮನಿ ಗ್ರೂಪ್ ಇ, ಪೋರ್ಚುಗಲ್ ಗ್ರೂಪ್ ಕೆ, ದಕ್ಷಿಣ ಕೊರಿಯಾ ಗ್ರೂಪ್ ಎ, ಜಪಾನ್ ಗ್ರೂಪ್ ಎಫ್, ಇರಾನ್ ಗ್ರೂಪ್ ಜಿ, ಉರುಗ್ವೆ ಗ್ರೂಪ್ ಎಚ್, ಕತಾರ್ ಗ್ರೂಪ್ ಬಿ, ದಕ್ಷಿಣ ಆಫ್ರಿಕಾ ಗ್ರೂಪ್ ಎ, ಮತ್ತು ಸೌದಿ ಅರೇಬಿಯಾ ಗ್ರೂಪ್ ಎಚ್‌ನಲ್ಲಿ ಸ್ಪರ್ಧಿಸಲಿವೆ. ಸ್ಪೇನ್, ಸೌದಿ ಅರೇಬಿಯಾ ಮತ್ತು ಉರುಗ್ವೆ ಜೊತೆಗೆ ಗ್ರೂಪ್ ಎಚ್‌ನಲ್ಲಿದೆ. ಆಸ್ಟ್ರಿಯಾ ಗ್ರೂಪ್ ಜೆ ಯಲ್ಲಿದೆ. ಗ್ರೂಪ್ ಎಚ್‌ನಲ್ಲಿ ಯುರೋಪ್, ಲ್ಯಾಟಿನ್ ಅಮೇರಿಕಾ ಮತ್ತು ಏಷ್ಯಾದ ದೈತ್ಯರು ಮುಖಾಮುಖಿಯಾಗಲಿದ್ದಾರೆ.

Scroll to load tweet…

ಗ್ರೂಪ್ ಎ ಫೈನಲ್ ಲೈನ್-ಅಪ್

ಮೆಕ್ಸಿಕೋ

ದಕ್ಷಿಣ ಕೊರಿಯಾ

ದಕ್ಷಿಣ ಆಫ್ರಿಕಾ

ಪ್ಲೇ-ಆಫ್ ಡಿ ವಿಜೇತರು

ಗ್ರೂಪ್ ಬಿ ಫೈನಲ್ ಲೈನ್-ಅಪ್

ಕೆನಡಾ

ಕತಾರ್

ಸ್ವಿಟ್ಜರ್ಲೆಂಡ್

ಪ್ಲೇ-ಆಫ್ ಎ ವಿಜೇತರು

ಗ್ರೂಪ್ ಸಿ ಫೈನಲ್ ಲೈನ್-ಅಪ್

ಬ್ರೆಜಿಲ್

ಮೊರಾಕೊ

ಸ್ಕಾಟ್ಲೆಂಡ್

ಹೈಟಿ

ಗ್ರೂಪ್ ಡಿ ಫೈನಲ್ ಲೈನ್-ಅಪ್

ಅಮೆರಿಕ

ಆಸ್ಟ್ರೇಲಿಯಾ

ಪರಾಗ್ವೆ

ಪ್ಲೇ-ಆಫ್ ಸಿ ವಿಜೇತರು

ಗ್ರೂಪ್ ಇ ಫೈನಲ್ ಲೈನ್-ಅಪ್

ಜರ್ಮನಿ

ಈಕ್ವೆಡಾರ್

ಐವರಿ ಕೋಸ್ಟ್

ಕುರಾಕೊ

ಗ್ರೂಪ್ ಎಫ್ ಫೈನಲ್ ಲೈನ್-ಅಪ್

ನೆದರ್ಲ್ಯಾಂಡ್ಸ್

ಜಪಾನ್

ಟುನೀಶಿಯಾ

ಪ್ಲೇ-ಆಫ್ ಬಿ ವಿಜೇತರು

ಗ್ರೂಪ್ ಜಿ ಫೈನಲ್ ಲೈನ್-ಅಪ್

ಬೆಲ್ಜಿಯಂ

ಈಜಿಪ್ಟ್

ಇರಾನ್

ನ್ಯೂಜಿಲೆಂಡ್

ಗ್ರೂಪ್ ಎಚ್ ಫೈನಲ್ ಲೈನ್-ಅಪ್

ಸ್ಪೇನ್

ಉರುಗ್ವೆ

ಸೌದಿ ಅರೇಬಿಯಾ

ಕ್ಯಾಬೊ ವರ್ಡೆ

ಗ್ರೂಪ್ ಐ ಫೈನಲ್ ಲೈನ್-ಅಪ್

ಫ್ರಾನ್ಸ್

ಸೆನೆಗಲ್

ನಾರ್ವೆ

ಪ್ಲೇ-ಆಫ್ 2 ವಿಜೇತರು

ಗ್ರೂಪ್ ಜೆ ಫೈನಲ್ ಲೈನ್-ಅಪ್

ಅರ್ಜೆಂಟೀನಾ

ಅಲ್ಜೀರಿಯಾ

ಆಸ್ಟ್ರಿಯಾ

ಜೋರ್ಡಾನ್

ಗ್ರೂಪ್ ಕೆ ಫೈನಲ್ ಲೈನ್-ಅಪ್

ಪೋರ್ಚುಗಲ್

ಉಜ್ಬೇಕಿಸ್ತಾನ್

ಕೊಲಂಬಿಯಾ

ಪ್ಲೇಆಫ್ ವಿಜೇತ

ಗ್ರೂಪ್ ಎಲ್ ಫೈನಲ್ ಲೈನ್-ಅಪ್

ಇಂಗ್ಲೆಂಡ್

ಕ್ರೊಯೇಷಿಯಾ

ಘಾನಾ

ಪನಾಮ

ಇತಿಹಾಸದಲ್ಲಿ ಮೊದಲ ಬಾರಿಗೆ 48 ತಂಡಗಳು ಭಾಗವಹಿಸುತ್ತಿರುವ ಫಿಫಾ ವಿಶ್ವಕಪ್‌ನ ಗ್ರೂಪ್ ಹಂತದ ಡ್ರಾ ವಾಷಿಂಗ್ಟನ್‌ನ ಕೆನಡಿ ಸೆಂಟರ್‌ನಲ್ಲಿ ನಡೆಯಿತು. ಅಮೆರಿಕದ ಅಧ್ಯಕ್ಷ ಮತ್ತು ಫಿಫಾ ಶಾಂತಿ ಪ್ರಶಸ್ತಿ ವಿಜೇತ ಡೊನಾಲ್ಡ್ ಟ್ರಂಪ್ ಡ್ರಾ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಿದ್ದರು. ಕಂಪ್ಯೂಟರ್ ಸಹಾಯದಿಂದ ಡ್ರಾ ನಡೆಸಲಾಯಿತು.