ನಾಗ್ಪುರ[ಮಾ.05]:  ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ ಮತ್ತೊಂದು ಸುಲಭ ಜಯದ ನಿರೀಕ್ಷೆಯಲ್ಲಿದೆ.

ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ: ಈ ಇಬ್ಬರಿಗೆ ಮತ್ತೊಂದು ಚಾನ್ಸ್..?

ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಹಾಲಿ ಚಾಂಪಿಯನ್ ಎದುರು ಕೊನೆಯ ಏಕದಿನ ಸರಣಿ ಆಡುತ್ತಿರುವ ಭಾರತ, ಹೈದರಾಬಾದ್’ನಲ್ಲಿ ನಡೆದ ಮೊದಲ ಪಂದ್ಯವನ್ನು ಆರಂಭಿಕ ಆಘಾತದ ಹೊರತಾಗಿಯೂ ಜಯದ ನಗೆ ಬೀರಿತ್ತು. ಒಂದು ಹಂತದಲ್ಲಿ 99 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಧೋನಿ-ಜಾಧವ್ ಜೋಡಿ 5ನೇ ವಿಕೆಟ್’ಗೆ ಮುರಿಯದ 141 ರನ್’ಗಳ ಜತೆಯಾಟವಾಡುವ ಮೂಲಕ ಗೆಲುವಿನ ದಡ ಸೇರಿಸಿದ್ದರು. ಇದೀಗ ವಿರಾಟ್ ಪಡೆ ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಟೀಂ ಇಂಡಿಯಾ 500 ಏಕದಿನ ಪಂದ್ಯ ಜಯಿಸಿದ ಏಷ್ಯಾದ ಮೊದಲ ಹಾಗೂ ಜಗತ್ತಿನ ಎರಡನೇ ತಂಡ ಎನ್ನುವ ಕೀರ್ತಿಗೆ ಭಾಜನವಾಗಲಿದೆ.

ಇಂಡೋ-ಆಸಿಸ್ 2ನೇ ಏಕದಿನ: ಸಂಭನೀಯ ಭಾರತ ತಂಡ ಪ್ರಕಟ!

ಹೌದು, ಭಾರತ ತಂಡವು 1974ರಲ್ಲಿ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದು, ಇದುವರೆಗೂ 962 ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ 499 ಗೆಲುವು ಹಾಗೂ 414 ಸೋಲುಗಳನ್ನು ಕಂಡಿದೆ. ಇನ್ನು 9 ಪಂದ್ಯಗಳು ಟೈ ಆಗಿದ್ದು, 40 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಇದುವರೆಗೂ 923 ಪಂದ್ಯಗಳನ್ನು ಆಡಿದ್ದು, 558 ಗೆಲುವು ಹಾಗೂ 322 ಸೋಲು ಕಂಡಿದೆ. ಇನ್ನುಳಿದಂತೆ 9 ಟೈ ಹಾಗೂ 34 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಕಾಣದೆ ಪಂದ್ಯ ಮುಗಿದಿದೆ. 

ಇಂಗ್ಲೆಂಡ್’ನಲ್ಲಿ ಜರುಗಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಭರ್ಜರಿ ಫಾರ್ಮ್’ನಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧ [2-1] ಹಾಗೂ ನ್ಯೂಜಿಲೆಂಡ್ ಎದುರು[4-1] ಏಕದಿನ ಸರಣಿ ಜಯಿಸಿ ಹೊಸ ಇತಿಹಾಸ ಬರೆದಿತ್ತು.