ಬೆಂಗಳೂರು(ಮೇ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಂದು(ಮೇ.04) ಕೊನೆಯ ಲೀಗ್ ಪಂದ್ಯ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ RCB, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ RCB, ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಮತ್ತೊಮ್ಮೆ ಕನ್ನಡ ಮಾತಾಡಿದ ಎಬಿಡಿ..! ಹಾಡಂತೂ ಸೂಪರ್

RCB ಅಂತಿಮ ಲೀಗ್ ಪಂದ್ಯಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಸ್ಪೆಷಲ್ ಸಂದೇಶ ನೀಡಿದ್ದಾರೆ. ಸೋಲು ಗೆಲುವಿನಲ್ಲಿ RCB ಬೆಂಬಲಿಸಿದ ಎಲ್ಲಾಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಕಳೆದ ಪಂದ್ಯದ ವೇಳೆ ಮಳೆ ಇದ್ದರೂ, ಪಂದ್ಯ ರಾತ್ರಿ 12 ಗಂಟೆ ಕಳೆದರೂ ಅಭಿಮಾನಿಗಳು RCB ತಂಡವನ್ನು ಬೆಂಬಲಿಸಿದ್ದೀರ. ನಿಮ್ಮ ಪ್ರೀತಿಗೆ ಚಿರಋಣಿ ಎಂದಿದ್ದಾರೆ.

 

 

ಇದನ್ನೂ ಓದಿ: ಇದು ಧೋನಿಯ ಕೊನೆ ಐಪಿಎಲ್‌?: ಕುತೂಹಲ ಕೆರಳಿಸಿದ ಹೇಳಿಕೆ!

12ನೇ ಆವೃತ್ತಿ ಐಪಿಎಲ್ ಟೂರ್ನಿ RCB ಅಭಿಮಾನಿಗಳಿಗೆ ನಿರಾಸೆ ತಂದಿದೆ. ನಮ್ಮ ಕೈಲಾದ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಆದರೆ ಫಲಿತಾಂಶ ಭಿನ್ನವಾಗಿತ್ತು.  ಮುಂದಿನ ವರ್ಷ ಅಭಿಮಾನಿಗಳ ನಿರೀಕ್ಷೆ ತಕ್ಕಂತೆ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.