Asianet Suvarna News Asianet Suvarna News

ಮತ್ತೊಮ್ಮೆ ಕನ್ನಡ ಮಾತಾಡಿದ ಎಬಿಡಿ..! ಹಾಡಂತೂ ಸೂಪರ್

ಕಳೆದ ವರ್ಷ ಕುಟುಂಬದ ಜತೆ ಆಟೋದಲ್ಲಿ ಪ್ರಯಾಣಿಸುವ ಮೂಲಕ ಬೆಂಗಳೂರನ್ನು ಎಂಜಾಯ್ ಮಾಡಿದ್ದ ಎಬಿಡಿ, ಬೆಂಗಳೂರಿನ ಬಗ್ಗೆ, ಇಲ್ಲಿನ ಟ್ರಾಫಿಕ್ ಬಗ್ಗೆಯೂ ಹೇಳಿದ್ದಾರೆ. ಅಷ್ಟಕ್ಕೂ ಎಬಿಡಿ ಏನೆಲ್ಲಾ ಮಾತನಾಡಿದ್ರು ಎನ್ನೋದನ್ನು ನೀವೂ ಒಮ್ಮೆ ಕೇಳಿ... ಎಂಜಾಯ್ ಮಾಡಿ...  

RCB Star Cricketer AB de Villiers once again talks in Kannada
Author
Bengaluru, First Published May 3, 2019, 6:37 PM IST
  • Facebook
  • Twitter
  • Whatsapp

ಬೆಂಗಳೂರು[ಮೇ.03]: 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಇದರೊಂದಿಗೆ ’ಈ ಸಲ ಕಪ್ ನಮ್ದೇ’ ಎನ್ನುವ ಮಾತು ಮತ್ತೊಮ್ಮೆ ಗಗನಕುಸಮವಾಗಿಯೇ ಉಳಿದಿದೆ.

ಟೂರ್ನಿಯ ಆರಂಭದಲ್ಲೇ ಸತತ 6 ಸೋಲು ಕಂಡು ನಿರಾಸೆ ಅನುಭವಿಸಿದ್ದ RCB, ಆ ಬಳಿಕ ಆಡಿದ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸುವ ಆಸೆ ಹುಟ್ಟಿಸಿತ್ತು. ಆದರೆ ಡೆಲ್ಲಿ ವಿರುದ್ಧ ಮುಗ್ಗರಿಸುವ ಮೂಲಕ ಮತ್ತೆ ಅಭಿಮಾನಿಗಳಿಗೆ ಆಘಾತ ನೀಡಿತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಮೈದಾನದಲ್ಲಿ ಹಾಗೂ ಮೈದಾನದಾಚೆ ಅಭಿಮಾನಿಗಳನ್ನು ಈ ಬಾರಿಯೂ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್‌ಸಿಬಿ ಪ್ಲೇ-ಆಫ್ ಕನಸು ಛಿದ್ರಗೊಳ್ಳಲು ಈ ಮೂವರು ಕಾರಣ!

ಮಿಸ್ಟರ್ ನ್ಯಾಗ್ಸ್ ಜತೆ ಎಬಿ ಡಿವಿಲಿಯರ್ಸ್ ಕೆಲವು ಕರ್ನಾಟಕದ ಕ್ರಿಕೆಟಿಗರನ್ನು ನಾಚಿಸುವಂತೆ ಕನ್ನಡ ಮಾತನಾಡಿದ್ದಾರೆ. ಕಳೆದ ವರ್ಷ ಕುಟುಂಬದ ಜತೆ ಆಟೋದಲ್ಲಿ ಪ್ರಯಾಣಿಸುವ ಮೂಲಕ ಬೆಂಗಳೂರನ್ನು ಎಂಜಾಯ್ ಮಾಡಿದ್ದ ಎಬಿಡಿ, ಬೆಂಗಳೂರಿನ ಬಗ್ಗೆ, ಇಲ್ಲಿನ ಟ್ರಾಫಿಕ್ ಬಗ್ಗೆಯೂ ಹೇಳಿದ್ದಾರೆ. ಇದರೊಂದಿಗೆ ಯುವಕರಿಗೆ ತೀವ್ರ ಒತ್ತಡಕ್ಕೆ ಸಿಲುಕಬೇಡಿ. ಭವಿಷ್ಯದ ಬಗ್ಗೆ ಜಾಸ್ತಿ ಯೋಚಿಸಬೇಡಿ, ಈ ದಿನ, ಈ ಕ್ಷಣವನ್ನು ಎಂಜಾಯ್ ಮಾಡಿ ಎನ್ನುವ ಕಿವಿಮಾತನ್ನು ಹೇಳಿದ್ದಾರೆ.

ಇದಷ್ಟೇ ಅಲ್ಲದೆ ಎಬಿ ಡಿವಿಲಿಯರ್ಸ್ ಮಂಡ್ಯದ ಗಂಡು ಹಾಡನ್ನು ನ್ಯಾಗ್ಸ್ ಶೈಲಿಯಲ್ಲಿ ಹಾಡುವ ಮೂಲಕ ಕನ್ನಡಿಗರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಎಬಿಡಿ ಏನೆಲ್ಲಾ ಮಾತನಾಡಿದ್ರು ಎನ್ನೋದನ್ನು ನೀವೂ ಒಮ್ಮೆ ಕೇಳಿ... ಎಂಜಾಯ್ ಮಾಡಿ...  
 

ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...

Follow Us:
Download App:
  • android
  • ios