ಕಾರ್ಡಿಫ್[ಮೇ.29]: ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ವಿಜಯ್ ಶಂಕರ್ ಆಯ್ಕೆ ಆರಂಭದಿಂದಲೂ ಚರ್ಚೆಗೆ ಗ್ರಾಸವಾಗಿದೆ. ಇದೀಗ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ವಿಜಯ್ ಶಂಕರ್ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ತಂಡ ತಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿ ಮಾಡಿದ್ದಾರೆ.

ವಿಜಯ್ ಶಂಕರ್ ಕೇವಲ 9 ಏಕದಿನ ಪಂದ್ಯವನ್ನಾಡಿ ವಿಶ್ವಕಪ್ ಟೂರ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದರು. ಇನ್ನು ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಆಡಲು ಶಂಕರ್ ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದಾರೆ. ಟೀಂ ಇಂಡಿಯಾ ಆರಂಭಿಕರಾದ ರೋಹಿತ್-ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದಾಗ ತಂಡದ ಮೊತ್ತ 83/3 ಆಗಿತ್ತು. ಈ ವೇಳೆ ಕ್ರೀಸ್ ಗಿಳಿದ ಶಂಕರ್ 7 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.  

ವಿಶ್ವಕಪ್’ನಿಂದ ಗೇಟ್’ಪಾಸ್: ಆಯ್ಕೆ ಸಮಿತಿಗೆ ಟಾಂಗ್ ಕೊಟ್ಟ ರಾಯಡು..!

ಅಂಬಟಿ ರಾಯುಡು ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಶಂಕರ್ ಮೇಲೆ ಟೀಂ ಇಂಡಿಯಾ ಸಾಕಷ್ಟು ನಿರೀಕ್ಷೆಯಿಟ್ಟಿದೆ. ಶಂಕರ್ ಸ್ಥಾನದ ಬಗ್ಗೆ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ಅವರೊಬ್ಬ 3d(ಮೂರು ಆಯಾಮ) ಕ್ರಿಕೆಟಿಗನಾಗಿರುವುದರಿಂದ ರಾಯುಡು ಕೈಬಿಟ್ಟು ಶಂಕರ್ ಗೆ ಮಣೆಹಾಕಲಾಯಿತು ಎಂದಿದ್ದರು.

ವಿಜಯ್ ಶಂಕರ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ- 4 ಕಾರಣ!

ಪ್ರಸಾದ್ ಹೇಳಿಕೆಯನ್ನು ಅಂಬಟಿ ರಾಯುಡು ತಮಾಷೆಯಾಗಿಯೇ ಟೀಕಿಸಿದ್ದರು. ಇದೀಗ ಟ್ವಿಟರಿಗರು ಕೂಡಾ ವಿಜಯ್ ಶಂಕರ್ ಅವರನ್ನು ಟ್ರೋಲ್ ಮಾಡಿದ್ದಾರೆ. ಅಷ್ಟಕ್ಕೂ ಏನಂದ್ರ ನೀವೇ ನೋಡಿ...

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...