Asianet Suvarna News Asianet Suvarna News

ವಿಜಯ್ ಶಂಕರ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ- 4 ಕಾರಣ!

9 ಏಕದಿನ ಪಂದ್ಯ ಆಡಿ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರೋ ವಿಜಯ್ ಶಂಕರ್ ಇದೀಗ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. 28ರ ಹರೆಯದ ವಿಜಯ್ ಶಂಕರ್ ವಿಶ್ವಕಪ್ ತಂಡಕ್ಕೆ ಆಯ್ಕೆ ಯಾಗಿದ್ದು ಹೇಗೆ? ಇಲ್ಲಿದೆ ಕಾರಣ.

Four reason why vijay shankar got selected for team  india world cup squad
Author
Bengaluru, First Published Apr 15, 2019, 5:56 PM IST

ಮುಂಬೈ(ಏ.15): ಟೀಂ ಇಂಡಿಯಾ ವಿಶ್ವಕಪ್ ತಂಡ ಪ್ರಕಟಗೊಂಡಿದೆ. ಈ ತಂಡದಲ್ಲಿ ಯುವ ಕ್ರಿಕೆಟಿಗ, ತಮಿಳುನಾಡು ಮೂಲದ ವಿಜಯ್ ಶಂಕರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 28ರ ಹರೆಯದ ಆಲ್ರೌಂಡರ್ ಆಯ್ಕೆ ಈ ವಿಶ್ವಕಪ್ ತಂಡದ ಆಯ್ಕೆಯ ಪ್ರಮುಖ ಆಕರ್ಷಣೆ. ಅನುಭವಿ ಅಂಬಾಟಿ ರಾಯುಡು ಕೈಬಿಟ್ಟು ಕೇವಲ 9 ಏಕದಿನ ಪಂದ್ಯ ಆಡಿರುವ ವಿಜಯ್ ಶಂಕರ್‌ಗೆ ಮಣೆ ಹಾಕಲು 4 ಕಾರಣಗಳಿವೆ.

ಆಲ್ರೌಂಡರ್:
ವಿಜಯ್ ಶಂಕರ್ ಭರವಸೆ ಮೂಡಿಸಿರುವ ಆಲ್ರೌಂಡರ್. ಸಂಕಷ್ಟದ ಸಂದರ್ಭದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ಶಂಕರ್ ನೆರವಾಗಿದ್ದಾರೆ.  ಆಸ್ಟ್ರೇಲಿಯಾ ವಿರುದ್ದದ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧ ಸಿಕ್ಕ ಅವಕಾಶದಲ್ಲಿ ವಿಜಯ್ ಶಂಕರ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. 

4ನೇ ಕ್ರಮಾಂಕಕ್ಕೆ ಸೂಕ್ತ:
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಹಲವು ಗೊಂದಲಗಳಿತ್ತು. ಅಂಬಾಟಿ ರಾಯುಡು ಕಳಪೆ ಪ್ರದರ್ಶನ, ಸ್ಥಿರ ಪ್ರದರ್ಶನದ ಸಮಸ್ಯೆ, ಫಿಟ್ನೆಸ್ ಸಮಸ್ಯೆಗಳಿಂದ 4ನೇ ಕ್ರಮಾಂಕಕ್ಕೆ ಸೂಕ್ತ ಆಯ್ಕೆ ಮಾಡಲು ಬಿಸಿಸಿಐ ಹುಡುಕಾಟ ನಡೆಸಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿದ್ದೇ ವಿಜಯ್ ಶಂಕರ್.

ಬ್ಯಾಟಿಂಗ್‌ಗೆ ಮತ್ತಷ್ಟು ಬಲ:
ವಿಜಯ್ ಶಂಕರ್ 9 ಏಕದಿನ ಪಂದ್ಯಗಳಿಂದ 165 ರನ್ ಸಿಡಿಸಿದ್ದಾರೆ. 33.00 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಕೆಲವೇ ಅವಕಾಶಗಳಲ್ಲಿ ಶಂಕರ್ ಆಯ್ಕೆ  ಸಮಿತಿ  ಗಮನಸೆಳೆದಿದ್ದಾರೆ. ಆದರೆ ರಾಯುಡು ಏಷ್ಯಾಕಪ್ ಟೂರ್ನಿಯ 10 ಪಂದ್ಯದಲ್ಲಿ 247 ರನ್ ಸಿಡಿಸಿ ಕಳಪೆಯಾದರು. ಇದು ವಿಜಯ್ ಶಂಕರ್ ಆಯ್ಕೆಗೆ ಸಹಕಾರಿಯಾಯಿತು. 

ಅದ್ಭುತ ಫೀಲ್ಡರ್- ಬೆಸ್ಟ್ ಫಿನೀಶರ್:
ವಿಜಯ್ ಶಂಕರ್ ಫೀಲ್ಡಿಂಗ್‌ನಲ್ಲೂ ಮಿಂಚಿದ್ದಾರೆ. ಇತ್ತ ಬ್ಯಾಟಿಂಗ್‌ನಲ್ಲಿ ಪಂದ್ಯ ಫಿನೀಶ್ ಮಾಡೋ ಸಾಮರ್ಥ್ಯ ಕೂಡ ಹೊಂದಿದ್ದಾರೆ. ಇತ್ತ ರಾಯುಡು ಫೀಲ್ಡಿಂಗ್‌ನಲ್ಲಿ ಕಳೆಪಯಾಗಿದ್ದಾರೆ. ಹೀಗಾಗಿ ಆಯ್ಕೆ  ಸಮಿತಿ ಯಾವುದೇ ವಿರೋಧವಿಲ್ಲದೆ ವಿಜಯ್ ಶಂಕರ್‌ಗೆ ಮಣೆ ಹಾಕಲಾಗಿದೆ. 

Follow Us:
Download App:
  • android
  • ios