ಕಳೆದ ಏಷ್ಯಾಕಪ್ ಟೂರ್ನಿಯಿಂದಲೂ ಭಾರತ ತಂಡದ ನಂ.4ನೇ ಕ್ರಮಾಂಕದಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದ ರಾಯುಡು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ವಿಶ್ವಕಪ್ ತಂಡ ಪ್ರಕಟವಾದಾಗ ರಾಯುಡು ಆಯ್ಕೆಗಾರರ ಮನಗೆಲ್ಲುವಲ್ಲಿ ವಿಫಲವಾಗಿದ್ದಾರೆ.

ನವದೆಹಲಿ[ಏ.16]: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಿದಾಗ, ಆಂಧ್ರ ಮೂಲದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಅಂಬಟಿ ರಾಯುಡುಗೆ ಆಘಾತ ಕಾದಿತ್ತು. 4ನೇ ಕ್ರಮಾಂಕಕ್ಕೆ ರಾಯುಡು ಬದಲು ವಿಜಯ್ ಶಂಕರ್’ಗೆ ಅವಕಾಶ ನೀಡುವ ಮೂಲಕ ರಾಯುಡು ವಿಶ್ವಕಪ್ ಕನಸಿಗೆ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ತಣ್ಣೀರೆರಚಿದೆ.

ವಿಜಯ್ ಶಂಕರ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ- 4 ಕಾರಣ!

ಕಳೆದ ಏಷ್ಯಾಕಪ್ ಟೂರ್ನಿಯಿಂದಲೂ ಭಾರತ ತಂಡದ ನಂ.4ನೇ ಕ್ರಮಾಂಕದಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದ ರಾಯುಡು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ವಿಶ್ವಕಪ್ ತಂಡ ಪ್ರಕಟವಾದಾಗ ರಾಯುಡು ಆಯ್ಕೆಗಾರರ ಮನಗೆಲ್ಲುವಲ್ಲಿ ವಿಫಲವಾಗಿದ್ದಾರೆ.

ವಿಶ್ವಕಪ್ 2019: ಇವರಲ್ಲಿ ಯಾರಾಗಬಹುದು ಮ್ಯಾಚ್ ವಿನ್ನರ್ಸ್?

ಇದೀಗ ಆಯ್ಕೆ ಸಮಿತಿಯ ಬಗ್ಗೆ ವಿಡಂಬನಾತ್ಮಕವಾಗಿ ಟ್ವೀಟ್ ಮಾಡಿರುವ ರಾಯುಡು, ’ವಿಶ್ವಕಪ್ ಮ್ಯಾಚ್ ನೋಡಲು ಈಗಷ್ಟೇ ಹೊಸ 3d ಕನ್ನಡಕದ ಸೆಟ್’ವೊಂದನ್ನು ಆರ್ಡರ್ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಕಳೆದ ವರ್ಷ ವಿಂಡೀಸ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ರಾಯುಡು ಗಮನಾರ್ಹ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್’ಗೆ ಟಿಕೆಟ್ ಬಹುತೇಕ ಖಚಿತ ಪಡಿಸಿಕೊಂಡಿದ್ದರು. ಆದರೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದ ರಾಯುಡು ಇದೀಗ ಮನೆಯಲ್ಲೇ ಕುಳಿತು ಕ್ರಿಕೆಟ್ ನೋಡುವಂತಾಗಿದೆ.