Asianet Suvarna News Asianet Suvarna News

ವಿಜಯ್‌ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ಪರ ಧವನ್‌, ಸೈನಿ ಕಣ​ಕ್ಕೆ

ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿಯಲು ರೆಡಿ ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ವೇಗಿ ನವದೀಪ್ ಸೈನಿ ಡೆಲ್ಲಿ ತಂಡಕ್ಕೆ ತಿಳಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Vijay Hazare Trophy 2019 Navdeep Saini and Shikhar Dhawan confirm their availability for the tournament
Author
New Delhi, First Published Sep 18, 2019, 3:13 PM IST
  • Facebook
  • Twitter
  • Whatsapp

ನವದೆಹಲಿ(ಸೆ.18): 2019ರ ವಿಜಯ್‌ ಹಜಾರೆ ಟ್ರೋಫಿಯಲ್ಲಿ ದೆಹ​ಲಿ ತಂಡಕ್ಕೆ ತಾರಾ ಆಟ​ಗಾ​ರರ ಬಲ ಸಿಗ​ಲಿದೆ. ಶಿಖರ್‌ ಧವನ್‌, ರಿಷಭ್‌ ಪಂತ್‌ ಹಾಗೂ ನವ್‌ದೀಪ್‌ ಸೈನಿ ಆಯ್ಕೆಗೆ ಲಭ್ಯ​ರಿ​ದ್ದಾರೆ ಎಂದು ದೆಹಲಿ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರಜತ್‌ ಶರ್ಮಾ ತಿಳಿ​ಸಿ​ದ್ದಾರೆ. 

ವಿಜಯ್ ಹಜಾರೆ ಟ್ರೋಫಿ: ರಾಜ್ಯ​ದ ವೇಳಾ​ಪಟ್ಟಿ ಪ್ರಕಟ

ದ.ಆ​ಫ್ರಿಕಾ ವಿರುದ್ಧದ ಟಿ20 ಸರಣಿ ಸೆ.22ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದ್ದು, ವಿಜಯ್‌ ಹಜಾರೆ ಟ್ರೋಫಿ ಸೆ.24ರಿಂದ ಆರಂಭ​ಗೊ​ಳ್ಳ​ಲಿದೆ. ಧವನ್‌ ಎಲ್ಲಾ ಪಂದ್ಯ​ಗ​ಳಿಗೆ ಲಭ್ಯ​ರಾ​ಗ​ಲಿದ್ದು, ದ.ಆ​ಫ್ರಿಕಾ ವಿರುದ್ಧ ಟೆಸ್ಟ್‌ ಸರ​ಣಿ​ಗೂ ಆಯ್ಕೆಯಾಗಿ​ರುವ ಪಂತ್‌, ಆರಂಭದ ಕೆಲ ಪಂದ್ಯ​ಗ​ಳನ್ನು ತಪ್ಪಿ​ಸಿ​ಕೊ​ಳ್ಳ​ಲಿ​ದ್ದಾರೆ. ದೆಹಲಿ ತನ್ನ ಮೊದಲ ಪಂದ್ಯ​ದಲ್ಲಿ ವಿದರ್ಭ ತಂಡ​ವನ್ನು ಎದು​ರಿ​ಸ​ಲಿದೆ. ಧವನ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರಿಂದ, ವಿಜಯ್ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ.  

ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ಸಂಭಾವ್ಯ ತಂಡ ಪ್ರಕಟ; ಕೊಹ್ಲಿಗೆ ಸ್ಥಾನ!

ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಇಶಾಂತ್ ಶರ್ಮಾ ಕೂಡ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದು, ಸಾಧ್ಯವಾದರೆ ವಿಜಯ್ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 
 

Follow Us:
Download App:
  • android
  • ios