ಬೆಂಗ​ಳೂ​ರು[ಸೆ.15]: ಸೆ.24ರಿಂದ ಆರಂಭ​ಗೊ​ಳ್ಳ​ಲಿ​ರುವ ವಿಜಯ್‌ ಹಜಾರೆ ಟ್ರೋಫಿಯ ವೇಳಾ​ಪಟ್ಟಿ ಪ್ರಕಟಗೊಂಡಿದ್ದು, ‘ಎ’ ಗುಂಪಿ​ನ​ಲ್ಲಿ​ರುವ ಕರ್ನಾ​ಟಕ ತನ್ನ ಮೊದಲ ಪಂದ್ಯ​ದಲ್ಲಿ ಹೈದ​ರಾ​ಬಾದ್‌ ವಿರುದ್ಧ ಸೆಣ​ಸ​ಲಿದೆ. 

ಕರ್ನಾಟಕ ಕ್ರಿಕೆಟ್‌ಗೆ ವಿನಯ್‌ ಕುಮಾರ್ ಗುಡ್‌ಬೈ!

ಸೆ.26ಕ್ಕೆ ಜಾರ್ಖಂಡ್‌, ಸೆ.28ಕ್ಕೆ ಛತ್ತೀಸ್‌ಗಢ, ಸೆ.29ಕ್ಕೆ ಮುಂಬೈ, ಅ.3ಕ್ಕೆ ಸೌರಾಷ್ಟ್ರ, ಅ.27ಕ್ಕೆ ಗೋವಾ, ಅ.9ಕ್ಕೆ ಆಂಧ್ರ, ಅ.13ಕ್ಕೆ ಕೇರಳ ವಿರುದ್ಧ ಆಡ​ಲಿದೆ. ಎಲ್ಲಾ ಪಂದ್ಯ​ಗಳು ಬೆಂಗ​ಳೂ​ರಿನ ವಿವಿಧ ಮೈದಾ​ನ​ಗ​ಳಲ್ಲಿ ನಡೆ​ಯ​ಲಿದೆ. ಅ.20ರಿಂದ ಕ್ವಾರ್ಟರ್‌ ಫೈನಲ್‌ ನಡೆ​ಯ​ಲಿದ್ದು, ಅ.25ಕ್ಕೆ ಫೈನಲ್‌ ನಿಗ​ದಿ​ಯಾ​ಗಿದೆ.

ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕದ ಸಂಭಾವ್ಯ ತಂಡ ಪ್ರಕಟ

ಕರ್ನಾಟಕ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ. ಈ ಬಾರಿ ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ ಅವರಿಲ್ಲದೇ ರಾಜ್ಯ ತಂಡ ಕಣಕ್ಕಿಳಿಯಲಿದೆ. ವಿನಯ್ ಕುಮಾರ್ ರಾಜ್ಯ ತಂಡ ತೊರೆದು ಈ ಬಾರಿ ಪಾಂಡಿಚೆರಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಸ್ಟುವರ್ಟ್ ಬಿನ್ನಿ ನಾಗಲ್ಯಾಂಡ್ ಪರ ಆಡಲಿದ್ದಾರೆ.