Asianet Suvarna News Asianet Suvarna News

ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ಸಂಭಾವ್ಯ ತಂಡ ಪ್ರಕಟ; ಕೊಹ್ಲಿಗೆ ಸ್ಥಾನ!

ಮುಂಬರುವ ವಿಜಯ್ ಹಜಾರೆ ದೇಸಿ ಟೂರ್ನಿಗೆ ದೆಹಲಿ ಕ್ರಿಕೆಟ್ ಸಂಸ್ಛೆ ಸಂಭವನೀಯ ತಂಡ ಪ್ರಕಟಿಸಿದೆ. ವಿಶೇಷ ಅಂದರೆ ಟೀಂ ಇಂಡಿಯಾ ಆಡುತ್ತಿರುವ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶಿಖರ್ ಧವನ್ ಸೇರಿದಂತೆ ಹಲವು ಕ್ರಿಕೆಟಿಗರಿಗೆ ಸ್ಛಾನ ನೀಡಲಾಗಿದೆ.

Vijay Hazare Trophy 2019 delhi cricket announces probable squad virat kohli named
Author
Bengaluru, First Published Sep 2, 2019, 7:08 PM IST
  • Facebook
  • Twitter
  • Whatsapp

ದೆಹಲಿ(ಸೆ.02): ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್ನರ್ ಅಪ್ ಆಗಿರುವು ದೆಹಲಿ ಈ ಬಾರಿ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ 2019-20ರ ವಿಜಯ್ ಹಜಾರೆ ಟ್ರೋಫಿಗೆ ಬಲಿಷ್ಠ ಸಂಭಾವ್ಯ ತಂಡ ಪ್ರಕಟಿಸಿದೆ. 50 ಆಟಗಾರರ ಸಂಭವನೀಯ ತಂಡ ಪ್ರಕಟಿಸಿರುವ ದೆಹಲಿ ಕ್ರಿಕೆಟ್ ಸಂಸ್ಥೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರಿಗೆ ಸ್ಥಾನ ನೀಡಿದೆ.

ಇದನ್ನೂ ಓದಿ: ಕೊಹ್ಲಿ ನೆರವಿಲ್ಲದಿದ್ದರೆ, ನಾನೇನಾಗುತ್ತಿದ್ದೆ ಗೊತ್ತಿಲ್ಲ; ಸುಮಿತ್ ನಗಾಲ್!

ದೆಹಲಿ ಕ್ರಿಕೆಟ್ ಸಂಸ್ಛೆ ಪ್ರಕಟಿಸಿರುವ ಸಂಭಾವ್ಯ ತಂಡದಲ್ಲಿ ದೆಹಲಿಯ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರಿಷಬ್ ಪಂತ್, ಶಿಖರ್ ಧವನ್, ಹಾಗೂ ಇಶಾಂತ್ ಶರ್ಮಾಗೆ ಸ್ಥಾನ ನೀಡಿದೆ. 2012-13ರಲ್ಲಿ ದೆಹಲಿ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಆಗಿತ್ತು. ತಮಿಳುನಾಡು ಗರಿಷ್ಠ ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ತಮಿಳು ನಾಡು 5 ಬಾರಿ ಟ್ರೋಫಿ ಗೆದ್ದಿದೆ. ದೆಹಲಿ 3 ಬಾರಿ ಗೆದ್ದಿದ್ದರೆ, ಸದ್ಯ ಮುಂಬೈ ಹಾಲಿ ಚಾಂಪಿಯನ್ ಆಗಿದೆ.

ದೆಹಲಿ ಸಂಭಾವ್ಯ ತಂಡ ಇಲ್ಲಿದೆ:

Vijay Hazare Trophy 2019 delhi cricket announces probable squad virat kohli named
 

Follow Us:
Download App:
  • android
  • ios