ಬೆಂಗ​ಳೂ​ರು[ಸೆ.27]: 2019ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿ​ಯಲ್ಲಿ ಕರ್ನಾ​ಟಕ ಮೊದಲ ಜಯ ಕಂಡಿದೆ. ಗುರು​ವಾರ ಇಲ್ಲಿನ ಎಂ.ಚಿ​ನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯ​ದಲ್ಲಿ ಕರ್ನಾ​ಟಕ, ಜಾರ್ಖಂಡ್‌ ವಿರುದ್ಧ 123 ರನ್‌ಗಳ ಅಮೋಘ ಗೆಲುವು ಸಾಧಿ​ಸಿತು. ಹೈದ​ರಾ​ಬಾದ್‌ ವಿರುದ್ಧ ಮೊದಲ ಪಂದ್ಯ ರದ್ದಾ​ಗಿತ್ತು. 2 ಪಂದ್ಯ​ಗ​ಳಿಂದ ಕರ್ನಾ​ಟಕ, 6 ಅಂಕ ಸಂಪಾ​ದಿ​ಸಿದ್ದು ಅಂಕ​ಪ​ಟ್ಟಿ​ಯಲ್ಲಿ ಅಗ್ರ​ಸ್ಥಾ​ನ​ದ​ಲ್ಲಿದೆ.

ಯೋ-ಯೋ ಟೆಸ್ಟ್ ಪಾಸಾದ್ರೂ ಆಯ್ಕೆ ಮಾಡಲಿಲ್ಲ; ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ!

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾ​ಟಕ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 285 ರನ್‌ ಗಳಿ​ಸಿತು. ಕಠಿ​ಣ ಗುರಿ ಬೆನ್ನ​ತ್ತಿದ ಜಾರ್ಖಂಡ್‌ 97 ರನ್‌ ಗಳಿ​ಸು​ವ​ಷ್ಟ​ರಲ್ಲೇ 5 ವಿಕೆಟ್‌ ಕಳೆ​ದು​ಕೊಂಡು ಸೋಲಿ​ನತ್ತ ಮುಖ ಮಾಡಿತು. ಸ್ಪಿನ್ನರ್‌ಗಳಾದ ಕೆ.ಗೌ​ತಮ್‌ ಹಾಗೂ ಶ್ರೇಯಸ್‌ ಗೋಪಾಲ್‌, ಮಧ್ಯಮ ಕ್ರಮಾಂಕಕ್ಕೆ ನೆಲೆ​ಯೂ​ರಲು ಅವ​ಕಾಶ ನೀಡ​ಲಿಲ್ಲ. 37.5 ಓವರ್‌ಗಳಲ್ಲಿ ಜಾರ್ಖಂಡ್‌ 162 ರನ್‌ಗಳಿಗೆ ಆಲೌಟ್‌ ಆಯಿತು. ಗೌತಮ್‌ 5 ವಿಕೆಟ್‌ ಕಬ​ಳಿಸಿದರೆ, ಶ್ರೇಯಸ್‌ 2 ವಿಕೆಟ್‌ ಪಡೆ​ದರು.

ಧೋನಿ ಅಲಭ್ಯತೆಗೆ ಕಾರಣ ಬಹಿರಂಗ; ಆತಂಕದಲ್ಲಿ ಫ್ಯಾನ್ಸ್!

ರಾಜ್ಯಕ್ಕೆ ಉತ್ತಮ ಆರ​ಂಭ: ಮೊದ​ಲ ವಿಕೆಟ್‌ಗೆ 75 ರನ್‌ ಜೊತೆ​ಯಾಟ ಪಡೆ​ಯಿತು. ಭಾರತ ಟೆಸ್ಟ್‌ ತಂಡ​ದಿಂದ ಹೊರ​ಬಿ​ದ್ದಿ​ರುವ ಕೆ.ಎಲ್‌.ರಾ​ಹುಲ್‌ 51 ಎಸೆ​ತ​ಗ​ಳಲ್ಲಿ 29 ರನ್‌ ಗಳಿಸಿದರು. ದೇವ​ದತ್‌್ತ ಪಡಿ​ಕ್ಕಲ್‌ ಆಕ​ರ್ಷಕ 58 ರನ್‌ ಗಳಿಸಿ ಔಟಾದ ಬಳಿಕ, ನಾಯಕ ಮನೀಶ್‌ ಪಾಂಡೆ ಎದು​ರಾಳಿ ಬೌಲರ್‌ಗಳ ಮೇಲೆ ಪ್ರಹಾರ ನಡೆ​ಸಿ​ದರು. ಕೆ.ವಿ.​ಸಿ​ದ್ಧಾಥ್‌ರ್‍ 22 ರನ್‌ಗಳ ಕೊಡುಗೆ ನೀಡಿ ಪೆವಿ​ಲಿ​ಯನ್‌ ಸೇರಿ​ದ​ರು.

44 ಎಸೆ​ತ​ಗ​ಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಪಾಂಡೆ 52 ರನ್‌ ಸಿಡಿಸಿ, ತಂಡದ ಮೊತ್ತ​ವನ್ನು 200ರ ಗಡಿ ದಾಟಿ​ಸಿ​ದರು. ಪವನ್‌ ದೇಶ​ಪಾಂಡೆ ಅಮೋಘ ಆಟಕ್ಕೆ ಜಾರ್ಖಂಡ್‌ ತಬ್ಬಿ​ಬ್ಬಾ​ಯಿತು. 59 ಎಸೆ​ತ​ಗ​ಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ ಪವನ್‌ 70 ರನ್‌ ಗಳಿ​ಸಿ​ದರು. ಕೆಳ ಕ್ರಮಾಂಕ ಕುಸಿತ ಕಂಡ ಕಾರಣ, ಕರ್ನಾ​ಟಕ 300 ರನ್‌ ತಲು​ಪಲು ಸಾಧ್ಯ​ವಾ​ಗ​ಲಿಲ್ಲ. ಜಾರ್ಖಂಡ್‌ ಪರ ರಾಹುಲ್‌ ಶುಕ್ಲಾ ಹಾಗೂ ಆನಂದ್‌ ಸಿಂಗ್‌ ತಲಾ 4 ವಿಕೆಟ್‌ ಕಬ​ಳಿ​ಸಿ​ದರು.

ಕರ್ನಾ​ಟಕ ತನ್ನ ಮುಂದಿನ ಪಂದ್ಯ​ವನ್ನು ಶನಿ​ವಾರ ಛತ್ತೀಸ್‌ಗಢ ವಿರುದ್ಧ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ಆಡ​ಲಿದೆ.

ಸ್ಕೋರ್‌: ಕರ್ನಾ​ಟಕ 50 ಓವ​ರಲ್ಲಿ 285/9

(ಪ​ವನ್‌ 70, ದೇವ​ದತ್‌್ತ 58, ಮನೀಶ್‌ 52, ರಾಹುಲ್‌ ಶುಕ್ಲಾ 4-43),

ಜಾರ್ಖಂಡ್‌ 37.5 ಓವರಲ್ಲಿ 162/10

(ಸೌ​ರಭ್‌ 43, ಆನಂದ್‌ 32, ಗೌತಮ್‌ 5-43, ಶ್ರೇಯಸ್‌ 2-39)