Asianet Suvarna News Asianet Suvarna News

ಯೋ-ಯೋ ಟೆಸ್ಟ್ ಪಾಸಾದ್ರೂ ಆಯ್ಕೆ ಮಾಡಲಿಲ್ಲ; ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ!

ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ದಿಢೀರ್ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದರು. ಆದರೆ ಯುವಿ  ಆತುರದ ನಿರ್ಧಾರ ತೆಗೆದುಕೊಂಡಿರಲಿಲ್ಲ. ಯುವಿ ವಿದಾಯದ ಹಿಂದೆ ನೋವಿನ ಕತೆಯಿದೆ.

Cricketer Yuvraj singh reveals his retirement secret
Author
Bengaluru, First Published Sep 26, 2019, 8:03 PM IST

ನವದೆಹಲಿ(ಸೆ.26): ಟೀಂ ಇಂಡಿಯಾ ಆಲ್ರೌಂಡರ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ವಿದಾಯ ಹೇಳಿ ದಿನಗಳು ಉರುಳಿದರೂ ಅಭಿಮಾನಿಗಳಿಗೆ ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಯುವರಾಜ್ ಸಿಂಗ್ ವಿದಾಯದ ಹಿಂದಿನ ರಹಸ್ಯ ಬಹಿರಂಗ ಪಡಿಸಿದ್ದಾರೆ. ಬಿಸಿಸಿಐ ದ್ವಂದ ನೀತಿಯಿಂದಲೇ ವಿದಾಯ ಹೇಳಿದ್ದೇನೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್ 2007: ಟ್ರೋಫಿ ಗೆಲ್ಲಿಸಿಕೊಟ್ಟ ಟಾಪ್ 5 ಹೀರೋಗಳಿವರು..!

2017ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡ ಯುವಿ ತಂಡದಿಂದ ಡ್ರಾಪ್ ಆಗಿದ್ದರು. ಇಂಜುರಿಗೆ ತುತ್ತಾಗಿದ್ದ ನನಗೆ, ಶ್ರೀಲಂಕಾ ಪ್ರವಾಸಕ್ಕೆ ಸಜ್ಜಾಗಲು ಸೂಚಿಸಿದ್ದರು. ದಿಢೀರ್ ಯೋ-ಯೋ ಟೆಸ್ಟ್ ಕಡ್ಡಾಯವಾಗಿ ಜಾರಿಯಾಯಿತು. 36ರ ಹರೆಯದ ನನಗೆ ಯೋಯೋ ಟೆಸ್ಟ್ ಸವಾಲಾಗಿತ್ತು. ಮತ್ತೆ ಯೋ-ಯೋ ಟೆಸ್ಟ್ ಪಾಸಾಗಲು ನಾನು ಕಠಿಣ ಪರಿಶ್ರಮ ಪಡಬೇಕಾಯಿತು.  ಯೋ ಯೋ ಟೆಸ್ಟ್ ಪಾಸಾದ ಬಳಿಕ , ದೇಸಿ ಟೂರ್ನಿ ಆಡಲು ಸೂಚಿಸಲಾಯಿತು. ಅಷ್ಟರಲ್ಲೇ ನನ್ನ ಆಯ್ಕೆಗೆ ಹಿಂದೇಟು ಹಾಕುತ್ತಿದ್ದಾರೆ ಅನ್ನೋದು ಅರ್ಥವಾಯಿತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಯುವರಾಜ್‌ಗಾಗಿ ಜರ್ಸಿ ನ.12ಕ್ಕೆ ವಿದಾಯ ಹೇಳಿ; BCCIಗೆ ಗಂಭೀರ್ ನುಡಿ!

15 ರಿಂದ 17 ವರ್ಷ ಕ್ರಿಕೆಟ್ ಆಡಿದ ಆಟಗಾರನ ಬಳಿ ಯಾರೂ ಕೂಡ ಸರಿಯಾಗಿ ಸಂವಹನ ಮಾಡಲಿಲ್ಲ. ಯುವಕರನ್ನು ಬೆಳಸಬೇಕಿದೆ.  ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರೆ, ಹಿರಿಯರು ತಮ್ಮದಾರಿ ನೋಡಿಕೊಳ್ಳಿ ಎಂದರ್ಥ. ಭಾರತೀಯ ಕ್ರಿಕೆಟ್‌ನಲ್ಲಿ ಹಿರಿಯ ಕ್ರಿಕೆಟಿಗರಿಗೆ ಈ ರೀತಿ ಆಗಬಾರದು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. 2019ರ ಜೂನ್ ತಿಂಗಳಲ್ಲಿ ಯುವರಾಜ್ ಸಿಂಗ್ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ವಿದಾಯ ಹೇಳಿದರು. 

Follow Us:
Download App:
  • android
  • ios