Asianet Suvarna News Asianet Suvarna News

ವಿಜಯ್‌ ಹಜಾರೆ ಟ್ರೋಫಿ: ರಾಜ್ಯಕ್ಕೆ ಮೊದಲ ಜಯದ ತವ​ಕ!

ವಿಜಯ್ ಹಜಾರೆ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಜಾರ್ಖಂಡ್ ತಂಡ ಪೀಲ್ಡಿಂಗ್ ಆಯ್ದುಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Vijay Hazare Trophy 2019 Jharkhand won the toss Choose to bowling First against Karnataka
Author
Bengaluru, First Published Sep 26, 2019, 9:33 AM IST

ಬೆಂಗ​ಳೂ​ರು[ಸೆ.26]: ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿಗೆ ಮಳೆ ಅಡ್ಡಿ​ಯಾ​ಗು​ತ್ತಿದ್ದು, ಆರಂಭಿಕ ಸುತ್ತಿನ ಬಹು​ತೇಕ ಪಂದ್ಯ​ಗಳು ರದ್ದಾ​ಗಿವೆ. ಹೈದ​ರಾ​ಬಾದ್‌ ವಿರುದ್ಧ ಮಂಗ​ಳ​ವಾರ ನಡೆ​ಯ​ಬೇ​ಕಿದ್ದ ಪಂದ್ಯ ಮಳೆಗೆ ಬಲಿ​ಯದ ಬಳಿಕ, ಗುರು​ವಾರ ಕರ್ನಾ​ಟಕ ತಂಡ ತನ್ನ 2ನೇ ಪಂದ್ಯ​ದಲ್ಲಿ ಜಾರ್ಖಂಡ್‌ ತಂಡ​ವನ್ನು ಎದು​ರಿಸುತ್ತಿದೆ. ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಜಾರ್ಖಂಡ್ ಬೌಲಿಂಗ್ ಆಯ್ದುಕೊಂಡಿದೆ.

ಈ ಪಂದ್ಯದ ಕ್ಷಣ-ಕ್ಷಣದ ಸ್ಕೋರ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಮೊದಲ ಪಂದ್ಯ ನಗ​ರದ ಹೊರ​ವ​ಲ​ಯ​ದ​ಲ್ಲಿ​ರುವ ಆಲೂರು ಕ್ರೀಡಾಂಗಣದಲ್ಲಿ ಆಯೋ​ಜನೆಗೊಂಡಿತ್ತು. ಆದರೆ ಗುರು​ವಾರದ ಪಂದ್ಯ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಿಗ​ದಿ​ಯಾ​ಗಿ​ರುವ ಕಾರಣ, ಪಂದ್ಯ ಆರಂಭ​ಗೊ​ಳ್ಳುವ ಅರ್ಧ ಗಂಟೆ ಮೊದಲು ಮಳೆ ನಿಂತರೂ ಆಟ ನಡೆ​ಯ​ಲಿದೆ. ಸಬ್‌-ಏರ್‌ ವ್ಯವಸ್ಥೆ ಇರುವ ಕಾರಣ, ಮಳೆ ನಿಂತು 20-30 ನಿಮಿಷಗಳಲ್ಲಿ ಆಟ ಆರಂಭಿ​ಸ​ಬ​ಹು​ದಾ​ಗಿದೆ.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ-ಹೈದರಾಬಾದ್ ಪಂದ್ಯ ಮಳೆಯಿಂದ ರದ್ದು

ಮನೀಶ್‌ ಪಾಂಡೆ ನೇತೃ​ತ್ವದ ಕರ್ನಾ​ಟಕ ತಂಡ ಬಲಿಷ್ಠ ಬ್ಯಾಟಿಂಗ್‌ ಪಡೆ ಹೊಂದಿದೆ. ಕೆ.ಎಲ್‌.ರಾ​ಹುಲ್‌ ಮೇಲೆ ಎಲ್ಲರ ಕಣ್ಣಿದೆ. ದೇವ​ದತ್ ಪಡಿ​ಕ್ಕಲ್‌, ಕೆ.ವಿ.ಸಿ​ದ್ಧಾರ್ಥ್ ಉತ್ತಮ ಲಯ​ದ​ಲ್ಲಿದ್ದು, ಅಭಿ​ಷೇಕ್‌ ರೆಡ್ಡಿ ಹಾಗೂ ಪವನ್‌ ದೇಶ​ಪಾಂಡೆ ಉಪ​ಸ್ಥಿ​ತಿ​ಯಿಂದ ತಂಡದ ಬ್ಯಾಟಿಂಗ್‌ ಬಲಿ​ಷ್ಠ​ವಾಗಿ ತೋರು​ತ್ತಿದೆ. ಶ್ರೇಯಸ್‌ ಗೋಪಾಲ್‌, ಜೆ.ಸು​ಚಿತ್‌, ಪ್ರವೀಣ್‌ ದುಬೆ ಸ್ಪಿನ್‌ ಬೌಲರ್‌ಗಳಾಗಿ ತಂಡ​ದಲ್ಲಿದ್ದಾರೆ. ರೋನಿತ್‌ ಮೋರೆ, ಪ್ರಸಿದ್ಧ್  ಕೃಷ್ಣ, ವಿ.ಕೌ​ಶಿಕ್‌ ಹಾಗೂ ಅಭಿ​ಮನ್ಯು ಮಿಥುನ್‌ ತಂಡ​ದ​ಲ್ಲಿ​ರುವ ವೇಗಿ​ಗಳು.

ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ!

ಜಾರ್ಖಂಡ್‌ ತಂಡ​ವನ್ನು ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಮುನ್ನ​ಡೆ​ಸ​ಲಿದ್ದು, ಹಿರಿಯ ವೇಗಿ ವರುಣ್‌ ಆ್ಯರೋನ್‌, ಸ್ಪಿನ್ನರ್‌ ಶಾಬಾಜ್‌ ನದೀಮ್‌ ತಂಡದ ಪ್ರಮುಖ ಆಟ​ಗಾ​ರ​ರೆ​ನಿ​ಸಿ​ದ್ದಾರೆ. ಜಾರ್ಖಂಡ್‌ ತಂಡದ ಮೊದಲ ಪಂದ್ಯ ಸಹ ಮಳೆಗೆ ಬಲಿ​ಯಾ​ಗಿತ್ತು.

ಕರ್ನಾಟಕ ತಂಡ ಹೀಗಿದೆ:

ಉಚಿತ ಪ್ರವೇಶ

ಪಂದ್ಯ ವೀಕ್ಷಣೆಗೆ ಸಾರ್ವ​ಜ​ನಿ​ಕ​ರಿಗೆ ಕೆಎಸ್‌ಸಿಎ ಉಚಿತ ಪ್ರವೇಶ ಕಲ್ಪಿ​ಸಿದ್ದು, ಗೇಟ್‌ ನಂ.14ರ ಮೂಲಕ ಕ್ರೀಡಾಂಗಣ ಪ್ರವೇ​ಶಿ​ಸ​ಬ​ಹು​ದಾ​ಗಿದೆ. ಪಂದ್ಯ ಬೆಳಗ್ಗೆ 9 ಗಂಟೆಗೆ ಆರಂಭ​ವಾ​ಗ​ಲಿದೆ.
 

Follow Us:
Download App:
  • android
  • ios