ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ!
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ವೇಳಾಪಟ್ಟಿ ಪ್ರಕಟವಾಗಿದೆ. ಜಿಂಬಾಬ್ವೆ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇರೋ ಒಂದು ವಾರದ ಸಮಯದಲ್ಲಿ ಬಿಸಿಸಿಐ ಲಂಕಾ ಜೊತೆ ಕ್ರಿಕೆಟ್ ಸರಣಿ ಆಯೋಜಿಸಿದೆ.
ಮುಂಬೈ(ಸೆ.25): ಟೀಂ ಇಂಡಿಯಾ ಸದ್ಯ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೆಡಿಯಾಗುತ್ತಿದೆ. ಆಫ್ರಿಕಾ ಸರಣಿ ಬಳಿಕ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ವಿರುದ್ದ ಸರಣಿ ಆಡಲಿದೆ. 2020ರ ಟಿ20 ವಿಶ್ವಕಪ್ ಟೂರ್ನಿಗೂ ಭಾರತ ಸಜ್ಜಾಗಬೇಕಿದೆ. ಇದರ ನಡುವೆ ಇದೀಗ ಶ್ರೀಲಂಕಾ ತಂಡಕ್ಕೆ ಟಿ20 ಸರಣಿ ಆಡಲು ಬಿಸಿಸಿಐ ಅಹ್ವಾನಿಸಿದೆ. ಬಿಸಿಸಿಐ ಆಹ್ವಾನ ಒಪ್ಪಿರುವ ಲಂಕಾ, ಜನವರಿಯಲ್ಲಿ ಭಾರತ ಪ್ರವಾಸ ಮಾಡಲಿದೆ.
ಇದನ್ನೂ ಓದಿ: ಟೆಸ್ಟ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಮತ್ತೊಂದು ಹೊಡೆತ!
ಜನವರಿಯಲ್ಲಿ ಭಾರತ ಹಾಗೂ ಜಿಂಬಾಬ್ವೆ ನಡುವೆ ಸರಣಿ ಆಯೋಜನೆಯಾಗಿತ್ತು. ಆದರೆ ಐಸಿಸಿ ಜಿಂಬಾಬ್ವೆ ತಂಡವನ್ನು ಅಮಾನತು ಮಾಡಿದ ಕಾರಣ, ಬಿಸಿಸಿಐ ಶ್ರೀಲಂಕಾ ತಂಡಕ್ಕೆ ಆಹ್ವಾನ ನೀಡಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರತದ ಗೆಲುವಿಗೆ ಭಂಗ; ಸರಣಿ ಸಮಬಲ!
ಜನವರಿ 5 ರಿಂದ ಜನವರಿ 10ರ ವರೆಗೆ ಭಾರತ ಹಾಗೂ ಶ್ರೀಲಂಕಾ 3 ಪಂದ್ಯದ ಟಿ20 ಸರಣಿ ಆಡಲಿದೆ. ಗುವಹಾಟಿ, ಇಂದೋರ್ ಹಾಗೂ ಪುಣೆಯಲ್ಲಿ ಪಂದ್ಯ ಆಯೋಜಿಸಲಾಗಿದೆ.
ಭಾರತ-ಶ್ರೀಲಂಕಾ ಟಿ20 ಸರಣಿ - 2020
05, ಜನವರಿ -1ನೇ T20I, ಗುವಹಾಟಿ
07, ಜನವರಿ - 2ನೇ T20I, ಇಂದೋರ್
10, ಜನವರಿ - 3ನೇ T20I, ಪುಣೆ