ಬೆಂಗ​ಳೂ​ರು[ಅ.02]: 2019ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿ​ಯಲ್ಲಿ ಕರ್ನಾ​ಟಕ ತಂಡ ಮೊದಲ ಸೋಲಿನ ರುಚಿ ಕಂಡಿತು. ಮಂಗಳವಾರ ಇಲ್ಲಿನ ಆಲೂರು ಮೈದಾನದಲ್ಲಿ ನಡೆದ ‘ಎ’ ಗುಂಪಿನ ಪಂದ್ಯ​ದಲ್ಲಿ ಆತಿ​ಥೇಯ ಕರ್ನಾಟಕ, ಹೈದ​ರಾಬಾದ್‌ ವಿರುದ್ಧ 21 ರನ್‌ ಸೋಲುಂಡಿತು. ಆಡಿರುವ 3 ಪಂದ್ಯಗಳಲ್ಲಿ ಕರ್ನಾಟಕ 2 ಗೆಲುವು 1 ಸೋಲಿನೊಂದಿಗೆ 8 ಅಂಕಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

4 ರನ್‌ಗೆ 2 ವಿಕೆಟ್‌ ಪತನ:

ಹೈದ್ರಾಬಾದ್‌ ನೀಡಿದ 199 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ಕೇರಳ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಾಹುಲ್‌, ಈ ಪಂದ್ಯದಲ್ಲಿ ಕೇವಲ 4 ರನ್‌ಗಳಿಗೆ ಔಟಾದರು. ಕರುಣ್‌ ನಾಯರ್‌ (0) ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ವೇಗಿ ಮೊಹಮದ್‌ ಸಿರಾಜ್‌ ಅವರ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಇಬ್ಬರು ಔಟಾಗಿದ್ದು ಮನೀಶ್‌ ಪಡೆಗೆ ದೊಡ್ಡ ಪೆಟ್ಟು ನೀಡಿತು. ಕೇವಲ 4 ರನ್‌ ಅಂತರದಲ್ಲಿ 2 ವಿಕೆಟ್‌ ಉರುಳಿದವು.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸುಲಭ ಜಯ

3ನೇ ವಿಕೆ​ಟ್‌ಗೆ ದೇವ​ದತ್‌್ತ ಹಾಗೂ ನಾಯಕ ಮನೀಶ್‌ ಪಾಂಡೆ 85 ರನ್‌ ಜೊತೆ​ಯಾಟ ಆಡಿ​ದರು. ಆದರೆ 48 ರನ್‌ ಮಾಡಿದ್ದ ಮನೀಶ್‌ ವಿಕೆಟ್‌ ಸಂದೀಪ್‌ ಕಿತ್ತರು. ದೇವ​ದ​ತ್‌್ತ 60 ರನ್‌ ಗಳಿಸಿದ್ದು, ಸಂದೀ​ಪ್‌ಗೆ ವಿಕೆಟ್‌ ಒಪ್ಪಿ​ಸಿ​ದರು. ಭಾರೀ ಕುಸಿತ ಕಂಡ ಕರ್ನಾ​ಟಕ 45.2 ಓವ​ರಲ್ಲೇ 177 ರನ್‌​ಗ​ಳಿಗೆ ಆಲೌ​ಟಾ​ಯಿ​ತು.

ವಿಜಯ್‌ ಹಜಾರೆ ಟ್ರೋಫಿ: ಜಾರ್ಖಂಡ್‌ ವಿರುದ್ಧ ಕರ್ನಾ​ಟಕ ಜಯ​ಭೇ​ರಿ!

ರಾಯುಡು ಆಸರೆ:

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಹೈದ​ರಾ​ಬಾದ್‌ ನಿಗ​ದಿತ 50 ಓವ​ರಲ್ಲಿ 9 ವಿಕೆಟ್‌ ಕಳೆ​ದು​ಕೊಂಡು 198 ರನ್‌ ಪೇರಿ​ಸಿ​ತು. ಆಯ್ಕೆ​ಗಾ​ರರ ಗಮನ ಸೆಳೆ​ಯಲು ಯತ್ನಿ​ಸು​ತ್ತಿ​ರುವ ಅಂಬಾಟಿ ರಾಯುಡು ಅಜೇಯ 87 ರನ್‌ ಹೊಡೆ​ದರು. ಪ್ರಸಿದ್ಧ ಕೃಷ್ಣ ಎಸೆ​ತ​ವೊಂದು ಬಲ ಮೊಣ​ಕೈಗೆ ಬಡಿ​ದಿ​ದ್ದು, ಗಾಯ​ಗೊಂಡ ರಾಯುಡು ಕ್ರೀಸ್‌​ನಿಂದ ಹೊರ​ನ​ಡೆ​ದ​ರು. ಕರ್ನಾ​ಟಕ ಪರ ಬೌಲಿಂಗ್‌​ನಲ್ಲಿ ಅಭಿ​ಮನ್ಯು ಮಿಥುನ್‌, ಪ್ರಸಿದ್ಧ ಹಾಗೂ ಮೋರೆ ತಲಾ 2 ವಿಕೆಟ್‌ ಕಿತ್ತ​ರು.

ಸ್ಕೋರ್‌:

ಹೈದ​ರಾ​ಬಾದ್‌ 198/9 (50)

ಕರ್ನಾ​ಟಕ 177 (45.2)