Formula 1 ರೇಸ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಯುವ ರೇಸರ್ ಜೆಹಾನ್ ದಾರುವಾಲಾ
* ಫಾರ್ಮುಲಾ 1 ಕಾರು ಚಲಾಯಿಸಲು ಸಿದ್ಧರಾಗಿರುವ ಯುವ ರೇಸರ್ ಜೆಹಾನ್ ದಾರುವಾಲಾ
* 23 ವರ್ಷದ ಮುಂಬೈನ ಜೆಹಾನ್ ಸದ್ಯ ಫಾರ್ಮುಲಾ 2ರಲ್ಲಿ 3 ಆವೃತ್ತಿಗಳಲ್ಲಿ ಆಡಿದ್ದಾರೆ
* ಈ ಮೊದಲು ಭಾರತೀಯರ ಪೈಕಿ ನರೇನ್ ಕಾರ್ತಿಕೇಯನ್ ಹಾಗೂ ಕರುಣ್ ಚಂದೋಕ್ ಮಾತ್ರ ಫಾರ್ಮುಲ್ 1 ಕಾರು ಚಾಲನೆ ಮಾಡಿದ್ದಾರೆ
ನವದೆಹಲಿ(ಜೂ.22): ಭಾರತದ ಯುವ ರೇಸರ್ ಜೆಹಾನ್ ದಾರುವಾಲಾ (Jehan Daruvala) ಅವರು ಇದೇ ಮೊದಲ ಬಾರಿ ಫಾರ್ಮುಲಾ 1 (Formula 1) ಕಾರು ಚಲಾಯಿಸಲು ಸಿದ್ಧರಾಗಿದ್ದು, ಈ ಸಾಧನೆ ಮಾಡಿದ 3ನೇ ಭಾರತೀಯ ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ. 23 ವರ್ಷದ ಮುಂಬೈನ ಜೆಹಾನ್ ಸದ್ಯ ಫಾರ್ಮುಲಾ 2ರಲ್ಲಿ 3 ಆವೃತ್ತಿಗಳಲ್ಲಿ ಆಡಿದ್ದು, 8 ಬಾರಿ ಫಾರ್ಮುಲಾ 1 ಚಾಂಪಿಯನ್ ಮೆಕ್‌ಲಾರೆನ್ ಎಂಸಿಎಲ್ 35 ಕಾರನ್ನು ಚಾಲನೆ ಮಾಡಲಿದ್ದಾರೆ.
ಇದು ಮೆಕ್‌ಲಾರೆನ್ ಕಾರಿನ ಟೆಸ್ಟಿಂಗ್ ಕಾರ‍್ಯಕ್ರಮದ ಭಾಗವಾಗಿದ್ದು, ಫಾರ್ಮುಲಾ 1ನಲ್ಲಿ ಸ್ಪರ್ಧಿಸುವ ಜೆಹಾನ್ ಕನಸಿಗೆ ಹೊಸ ಅನುಭವವನ್ನು ನೀಡಲಿದೆ. ಅಲ್ಲದೇ ಟ್ರ್ಯಾಕ್ ಪೂರ್ತಿಗೊಳಿಸುವ ಸಮಯವು ಅವರಿಗೆ ಸೂಪರ್ ಲೈಸನ್ಸ್ (ಫಾರ್ಮುಲಾ 1 ಚಲಾಯಿಸಲು ಬೇಕಾದ ಪರವಾನಿಗೆ) ದೊರಕಿಸಿಕೊಡಲು ಸಹಕಾರಿಯಾಗಲಿದೆ. ‘ಮುಂದಿನ ವರ್ಷ ಫಾರ್ಮುಲಾ 1 ಚಲಾಯಿಸಲು ಅವಕಾಶ ಸಿಗುತ್ತೋ ಗೊತ್ತಿಲ್ಲ. ಅದಕ್ಕಾಗಿ ತುಂಬಾ ಸ್ಪರ್ಧೆಗಳಿವೆ. ಆದರೆ ಈಗ ಟೆಸ್ಟಿಂಗ್ ಅವಕಾಶಕ್ಕಾಗಿ ಸಿಕ್ಕಿದ್ದಕ್ಕೆ ಖುಷಿಯಾಗುತ್ತಿದೆ. ಎಫ್2 ಚಾಂಪಿಯನ್‌ಶಿಪ್ ಗೆಲ್ಲುವುದು ಈಗ ನನ್ನ ಮುಂದಿರುವ ಗುರಿ’’ ಎಂದು ಜೆಹಾನ್ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಭಾರತೀಯರ ಪೈಕಿ ಕೇರಳದ ನರೇನ್ ಕಾರ್ತಿಕೇಯನ್ ಹಾಗೂ ಚೆನ್ನೈನ ಕರುಣ್ ಚಂದೋಕ್ ಮಾತ್ರ ಫಾರ್ಮುಲ್ 1 ಕಾರು ಚಾಲನೆ ಮಾಡಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಬುಗಾಟಿ ಕಾರು ಅಪಘಾತ
ಸ್ಪೇನ್: ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಒಡೆತನದ ಸುಮಾರು 17 ಕೋಟಿ ರು. ಬೆಲೆಬಾಳುವ ಐಷಾರಾಮಿ ಬುಗಾಟಿ ವೆರಾನ್ ಕಾರು ಅಪಘಾತಕ್ಕೀಡಾಗಿರುವುದಾಗಿ ವರದಿಯಾಗಿದೆ. ಸೋಮವಾರ ಬೆಳಗ್ಗೆ ಸ್ಪೇನ್‌ನ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶ ದ್ವಾರಕ್ಕೆ ಕಾರು ಢಿಕ್ಕಿ ಹೊಡೆದಿದೆ. ವರದಿಗಳ ಪ್ರಕಾರ ಅಪಘಾತದ ವೇಳೆ ರೊನಾಲ್ಡೋ ಕಾರಲ್ಲಿರಲಿಲ್ಲ. ಅವರ ಸಿಬ್ಬಂದಿಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು. ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಏಷ್ಯನ್ ಸೈಕ್ಲಿಂಗ್: 4ನೇ ದಿನ ಪದಕ ಗೆಲ್ಲದ ಭಾರತ
ನವದೆಹಲಿ: ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರೊನಾಲ್ಡೊ ಸಿಂಗ್ ಪುರುಷರ ಸ್ಟ್ರಿಂಟ್ ವಿಭಾಗದಲ್ಲಿ ಸೆಮಿಫೈನಲ… ಪ್ರವೇಶಿಸಿದ್ದಾರೆ. ಆದರೆ ಮಂಗಳವಾರ ನಡೆದ 6 ಫೈನಲ್‌ಗಳಲ್ಲಿ ಯಾವುದೇ ಪದಕ ಗೆಲ್ಲಲು ಭಾರತ ವಿಫಲವಾಗಿದೆ. ವಿಶ್ವ ಜೂನಿಯರ್ ಚಾಂಪಿಯನ್ ಮತ್ತು ಏಷ್ಯನ್ ದಾಖಲೆ ಹೊಂದಿರುವ ರೊನಾಲ್ಡೊ ಪ್ರಾಥಮಿಕ ಸುತ್ತಿನ ಹಣಾಹಣಿಯಲ್ಲಿ ಕೊರಿಯಾದ ಜೀ ಒನ್ ಪಾರ್ಕರ್‌ರನ್ನು ಮಣಿಸಿದರು.
ಮಹಿಳಾ ಹಾಕಿ ವಿಶ್ವಕಪ್: ಭಾರತಕ್ಕೆ ಸವಿತಾ ಪೂನಿಯಾ ನಾಯಕಿ
ಸೆಮೀಸ್‌ನಲ್ಲಿ ಅವರು ಕಜಕಸ್ತಾನದ ಆ್ಯಂಡ್ರೆ ಚುಗೇ ಸವಾಲು ಎದುರಿಸಲಿದ್ದಾರೆ. ಇನ್ನು, ಜೂನಿಯರ್ ವಿಭಾಗದ 7.5 ಕಿ.ಮೀ. ಸ್ಕ್ರಾಚ್ ರೇಸ್‌ನಲ್ಲಿ ಹಿಮಾಂಶಿ ಸಿಂಗ್ ಎರಡನೇ ಸ್ಥಾನ ಪಡೆದರೂ ಅಪಾಯಕಾರಿ ರೀತಿಯಲ್ಲಿ ಸೈಕ್ಲಿಂಗ್ ಮಾಡಿದ್ದಕ್ಕೆ ಅವರನ್ನು ಅನರ್ಹಗೊಳಿಸಲಾಯಿತು. ಭಾರತ 2 ಚಿನ್ನ, 5 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಟೂರ್ನಿ ಮುಂದೂಡಿಕೆ
ಬೆಂಗಳೂರು: ಕರ್ನಾಟಕ ಚೊಚ್ಚಲ ಆವೃತ್ತಿಯ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯು ಮುಂದೂಡಿಕೆಯಾಗಿದೆ. ಅಂತಾರಾಷ್ಟ್ರೀಯ ಟೂರ್ನಿಗಳ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಲೀಗ್ ಮುಂದೂಡಲಾಗಿದೆ ಎಂದು ಆಯೋಜಕರು ಮಂಗಳವಾರ ಮಾಹಿತಿ ನೀಡಿದ್ದಾರೆ. ಈ ಮೊದಲು 8 ತಂಡಗಳ ನಡುವಿನ ಟೂರ್ನಿ ಬೆಂಗಳೂರಿನಲ್ಲಿ ಜುಲೈ 1ರಿಂದ 10ರವರೆಗೆ ನಿಗದಿಯಾಗಿತ್ತು. ಅದನ್ನೀಗ ಆಗಸ್ಟ್ 12ರಿಂದ 21ಕ್ಕೆ ಮುಂದೂಡಲಾಗಿದೆ. ಲೀಗ್‌ನಲ್ಲಿ ಬೆಂಗಳೂರು ಲಯನ್ಸ್, ಮಂಗಳೂರು ಶಾರ್ಕ್ಸ್, ಮಂಡ್ಯ ಬುಲ್ಸ್, ಮೈಸೂರು ಪ್ಯಾಂಥರ್ಸ್, ಮಲ್ನಾಡ್ ಫಾಲ್ಕನ್ಸ್, ಬಂಡೀಪುರ ಟಸ್ಕರ್ಸ್, ಕೆಜಿಎಫ್ ವೋಲ್ಪ್ಸ್,ಕೊಡಗು ಟೈಗರ್ಸ್ ತಂಡಗಳು ಪಾಲ್ಗೊಳ್ಳಲಿವೆ.