Asianet Suvarna News Asianet Suvarna News

ಯುಎಸ್‌ ಓಪನ್‌ ಟೆನಿಸ್‌: ಬೋಪಣ್ಣ, ಯೂಕಿ ಇಂದು ಕಣಕ್ಕೆ

ಯೂಕಿ ಬ್ರೆಜಿಲ್‌ನ ಮಾರ್ಕೆಲೊ ಡೆಮೊಲಿನರ್‌ ಜೊತೆಗೂಡಿ ಆಡಲಿದ್ದು, ಮೊದಲ ಸುತ್ತಿನಲ್ಲಿ ಪೋಲೆಂಡ್‌ನ ಜೀಲಿನ್ಸ್ಕಿ-ಮೊನಾಕೋದ ಹ್ಯೂಗೊ ನೈಸ್‌ ವಿರುದ್ಧ ಸೆಣಸಲಿದ್ದಾರೆ.

US Open 2023 All eyes on Rohan Bopanna Yuki Bhambri kvn
Author
First Published Aug 29, 2023, 11:47 AM IST

ನ್ಯೂಯಾರ್ಕ್‌(ಆ.29): ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಭಾರತ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ, ಯೂಕಿ ಬ್ಹಾಂಬ್ರಿ ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 43 ವರ್ಷದ ಬೋಪಣ್ಣ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಆಡಲಿದ್ದು, ಮೊದಲ ಸುತ್ತಿನಲ್ಲಿ ಬುಧವಾರ ಆಸ್ಟ್ರೇಲಿಯಾದ ಅಲೆಕ್ಸಾಂಡರ್‌ ವುಕಿಚ್‌-ಕ್ರಿಸ್ಟೋಫರ್‌ ಸವಾಲು ಎದುರಾಗಲಿದೆ. 6ನೇ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ ಇತ್ತೀಚೆಗಷ್ಟೇ ವಿಂಬಲ್ಡನ್‌ ಸೆಮಿಫೈನಲ್‌ಗೇರಿತ್ತು. ಇನ್ನು, ಯೂಕಿ ಬ್ರೆಜಿಲ್‌ನ ಮಾರ್ಕೆಲೊ ಡೆಮೊಲಿನರ್‌ ಜೊತೆಗೂಡಿ ಆಡಲಿದ್ದು, ಮೊದಲ ಸುತ್ತಿನಲ್ಲಿ ಪೋಲೆಂಡ್‌ನ ಜೀಲಿನ್ಸ್ಕಿ-ಮೊನಾಕೋದ ಹ್ಯೂಗೊ ನೈಸ್‌ ವಿರುದ್ಧ ಸೆಣಸಲಿದ್ದಾರೆ.

ಯುಎಸ್‌ ಓಪನ್‌ ಟೆನಿಸ್‌:ಸ್ವಿಯಾಟೆಕ್‌ ಶುಭಾರಂಭ

ನ್ಯೂಯಾರ್ಕ್‌:ಯುಎಸ್‌ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್‌ ಶುಭಾರಂಭ ಮಾಡಿದ್ದಾರೆ. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವೀಡನ್‌ನ ರೆಬೆಕಾ ಪೀಟರ್‌ಸನ್ ವಿರುದ್ದ 6-0, 6-1 ಸೆಟ್‌ನಲ್ಲಿ ಜಯಿಸಿದರು. 10ನೇ ಶ್ರೇಯಾಂಕಿತೆ ಜೆಕ್‌ ಗಣರಾಜ್ಯದ ಮುಕೋವಾ, 15ನೇ ಶ್ರೇಯಾಂಕಿತೆ ಸ್ವಿಜರ್‌ಲೆಂಡ್‌ನ ಬೆನ್ಚಿಚ್‌ ಸಹ 2ನೇ ಸುತ್ತಿಗೇರಿದರು. 8ನೇ ಶ್ರೇಯಾಂಕಿತೆ ಗ್ರೀಸ್‌ನ ಸಕ್ಕಾರಿ ಹೊರಬಿದ್ದರು.

Maharaja Trophy Final: ಹುಬ್ಬಳ್ಳಿ-ಮೈಸೂರು ಫೈನಲ್‌ ಫೈಟ್‌!

ಪುರುಷರ ಹಾಕಿ ಫೈವ್ಸ್‌: ಇಂದು ಭಾರತ-ಬಾಂಗ್ಲಾ

ಸಲಾಲ(ಒಮಾನ್‌): ಪುರುಷರ ಏಷ್ಯನ್ ಹಾಕಿ ಫೈವ್ಸ್‌ ವಿಶ್ವಕಪ್‌ ಅರ್ಹತಾ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಭಾರತ ಎಲೈಟ್‌ ಗುಂಪಿನಲ್ಲಿ ಮಲೇಷ್ಯಾ, ಪಾಕಿಸ್ತಾನ, ಜಪಾನ್‌, ಒಮಾನ್‌ ಹಾಗೂ ಬಾಂಗ್ಲಾ ತಂಡಗಳ ಜೊತೆ ಸ್ಥಾನ ಪಡೆದಿವೆ. ಭಾರತ ಆ.30ಕ್ಕೆ ಪಾಕ್‌ ಹಾಗೂ ಒಮಾನ್‌, ಆ.31ಕ್ಕೆ ಜಪಾನ್‌ ಹಾಗೂ ಮಲೇಷ್ಯಾ ವಿರುದ್ಧ ಸೆಣಸಾಡಲಿವೆ. 2024ರಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಟೂರ್ನಿಯಲ್ಲಿ ಭಾರತ ಅಗ್ರ-3ರಲ್ಲಿ ಸ್ಥಾನ ಪಡೆಯಬೇಕಿದೆ.

ಆರ್‌ಸಿಬಿ ಅಂದ್ರೆನೇ ಫೈರು..'ದೃಶ್ಯ ಬದಲಾಯಿಸಿ' ಎಂದು ತಮಿಳಿನ ಜೈಲರ್‌ ಸಿನಿಮಾಗೆ ಸೂಚಿಸಿದ ಕೋರ್ಟ್‌!

ಪ್ರಜ್ಞಾನಂದ ಪೋಷಕರಿಗೆ ಮಹೀಂದ್ರಾ ಕಾರು ಗಿಫ್ಟ್‌!

ಚೆನ್ನೈ: ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಆಗಿ ಎಲ್ಲರ ಗಮನ ಸೆಳೆದಿರುವ ಭಾರತದ 18ರ ಆರ್‌.ಪ್ರಜ್ಞಾನಂದ ಅವರ ಪೋಷಕರಿಗೆ ಪ್ರಸಿದ್ಧ ಕಾರು ತಯಾರಕಾ ಕಂಪೆನಿ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ಎಲೆಕ್ಟ್ರಿಕ್‌ ಕಾರು ನೀಡುವುದಾಗಿ ಘೋಷಿಸಿದ್ದಾರೆ. ಪ್ರಜ್ಞಾನಂದ ಸಾಧನೆ ಬಗ್ಗೆ ಟ್ವೀಟರ್‌ನಲ್ಲಿ ಕೊಂಡಾಡಿರುವ ಆನಂದ್‌ ಅವರು, ‘ಪ್ರಜ್ಞಾನಂದರನ್ನು ವಿಶ್ವ ಮಟ್ಟದಲ್ಲಿ ಸಾಧನೆ ಮಾಡುವಂತೆ ಬೆಳೆಸಿದ ಪೋಷಕರಾದ ನಾಗಲಕ್ಷ್ಮೀ-ರಮೇಶ್‌ಬಾಬುಗೆ XUV4OO EV ಕಾರು ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ವಿಶ್ವ ಕುಸ್ತಿ ಟ್ರಯಲ್ಸ್‌ಗೆ ಭಜರಂಗ್‌ ಗೈರು

ನವದೆಹಲಿ: ಒಲಿಂಪಿಕ್‌ ಪದಕ ವಿಜೇತ ಭಜರಂಗ್‌ ಪೂನಿಯಾ ಏಷ್ಯನ್‌ ಗೇಮ್ಸ್‌ ಸಿದ್ಧತೆಗಾಗಿ ಕಿರ್ಗಿಸ್ತಾನಕ್ಕೆ ತೆರಳಲಿದ್ದು, ಭಾನುವಾರ ಪಟಿಯಾಲಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ ಆಯ್ಕೆ ಟ್ರಯಲ್ಸ್‌ಗೆ ಗೈರಾದರು. ವಿಶ್ವ ಚಾಂಪಿಯನ್‌ ಸೆ.16ರಿಂದ ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ನಡೆಯಲಿದೆ. ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದಾದರೆ ಫಿಟ್ನೆಸ್‌ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ಸೂಚಿಸಿತ್ತು. ಭಜರಂಗ್‌ ಪ್ರಮಾಣ ಪತ್ರ ಸಲ್ಲಿಸಿ, ಸಾಯ್‌ನಿಂದ ಅಗತ್ಯ ಅನುಮತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಏಷ್ಯನ್‌ ಗೇಮ್ಸ್‌ ಸೆ.23ರಿಂದ ಆರಂಭಗೊಳ್ಳಲಿದೆ.

Follow Us:
Download App:
  • android
  • ios