Asianet Suvarna News Asianet Suvarna News

ಆರ್‌ಸಿಬಿ ಅಂದ್ರೆನೇ ಫೈರು..'ದೃಶ್ಯ ಬದಲಾಯಿಸಿ' ಎಂದು ತಮಿಳಿನ ಜೈಲರ್‌ ಸಿನಿಮಾಗೆ ಸೂಚಿಸಿದ ಕೋರ್ಟ್‌!

ರಜನಿಕಾಂತ್ ಅವರ ಜೈಲರ್ ಸಿನಿಮಾ ನಿರ್ಮಾಣ ಮಾಡಿದ್ದ ಸನ್ ಪಿಕ್ಚರ್ಸ್ ಬ್ಯಾನರ್  ಸೆಪ್ಟೆಂಬರ್ 1 ರೊಳಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿಯನ್ನು ಹೊಂದಿದ್ದ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕುವುದಾಗಿ ಭರವಸೆ ನೀಡಿದೆ.

contract killer wearing a Royal Challengers Bangalore jersey Delhi High Court issues order to Rajinikanth Jailer to alter scene san
Author
First Published Aug 28, 2023, 9:26 PM IST

ನವದೆಹಲಿ (ಆ.28): ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿರುವ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾ ಹಾಗೂ ಬೆಂಗಳೂರಿನ ಹೆಮ್ಮೆಯ ಐಪಿಎಲ್‌ ಫ್ರಾಂಚೈಸಿ ಆರ್‌ಸಿಬಿ ನಡುವಿನ ಕಾನೂನು ಹೋರಾಟ ದೆಹಲಿ ಹೈಕೋರ್ಟ್‌ನಲ್ಲಿ ಮುಕ್ತಾಯ ಕಂಡಿದೆ. ಚಿತ್ರದಲ್ಲಿ ಆರ್‌ಸಿಬಿ ತಂಡದ ಜೆರ್ಸಿ ಧರಿಸಿರುವ ಅಭಿಮಾನಿಯೊಬ್ಬ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಚಾರದಲ್ಲಿ ಆರ್‌ಸಿಬಿ ತಂಡ ಜೈಲರ್‌ ಸಿನಿಮಾದ ನಿರ್ಮಾಪಕರ ವಿರುದ್ಧ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಜೈಲರ್‌ ಸಿನಿಮಾದ ನಿರ್ಮಾಪಕದು ವಿವಾದಕ್ಕೆ ಕಾರಣವಾಗಿರುವ ದೃಶ್ಯವನ್ನು ಸೆಪ್ಟೆಂಬರ್‌ 1 ರ ಒಳಗಾಗಿ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ ಬೆನ್ನಲ್ಲಿಯೇ ಪ್ರಕರಣ ಮುಕ್ತಾಯ ಕಂಡಿದೆ. ಜೈಲರ್‌ ಸಿನಿಮಾದ ನಿರ್ಮಾಪಕರಾಗಿರುವ ಸನ್‌ ಪಿಕ್ಚರ್ಸ್‌ನ ಮಾತೃಸಂಸ್ಥೆ ಸನ್‌ ಟಿವಿ ನೆಟ್‌ವರ್ಕ್‌ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಬಾದ್‌ ತಂಡದ ಮಾಲೀಕರಾಗಿದೆ. ಚಿತ್ರದಲ್ಲಿ ಆರ್‌ಸಿಬಿ ಜೆರ್ಸಿ ಧರಿಸಿದ್ದ ವ್ಯಕ್ತಿಯನ್ನು ಕಾಂಟ್ರ್ಯಾಕ್ಟ್‌ ಕಿಲ್ಲರ್‌ ಆಗಿ ತೋರಿಸಲಾಗಿತ್ತು. ಇದರ ವಿರುದ್ಧ ಆರ್‌ಸಿಬಿ ಕೋರ್ಟ್‌ ಮೆಟ್ಟಿಲೇರಿತ್ತು. ಅದಲ್ಲದೆ, ಜೆರ್ಸಿ ಧರಿಸಿದ್ದ ವ್ಯಕ್ತಿ ಮಹಿಳೆಯರ ಕುರಿತಾಗಿ ಸೆಕ್ಸಿಸ್ಟ್‌ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ. ಯಾವುದೇ ಅನುಮತಿಯಿಲ್ಲದೆ ಚಿತ್ರದಲ್ಲಿ ಆರ್‌ಸಿಬಿ ಜೆರ್ಸಿಯನ್ನು ಬಳಸಿಕೊಳ್ಳಲಾಗಿದೆ. ಇದು ಬ್ರ್ಯಾಂಡ್‌ನ ಮೇಲೆ ನೆಗೆಟವಿವ್‌ ಪರಿಣಾಮ ಬೀರುವುದು ಮಾತ್ರವಲ್ಲದೆ, ಸ್ಪಾನ್ಸರ್‌ಗಳ ಹಕ್ಕುಗಳ ಮೇಲೂ ಪರಿಣಾಮ ಬೀರುತ್ತದೆ.

ಎರಡೂ ಕಡೆಯ ವಕೀಲರು ನ್ಯಾಯಾಲಯದ ಹೊರಗೆ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ಧಾರ ಮಾಡಿದೆ. ಸೂಚಿಸಿದ ದೃಶ್ಯವನ್ನು ಡಿಜಿಟಲ್ ಆಗಿ ಬದಲಾಯಿಸಲು ಒಪ್ಪಿಕೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸೆಪ್ಟೆಂಬರ್ 1 ರೊಳಗೆ ಥಿಯೇಟರ್‌ ಆವೃತ್ತಿಯಲ್ಲಿ ಹೇಳಲಾದ ಬದಲಾವಣೆಯನ್ನು ಮಾಡುವುದಾಗಿ ಸನ್ ಪಿಕ್ಚರ್ಸ್ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಅಲ್ಲದೆ, ಟಿವಿ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಆವೃತ್ತಿಗಳು ಸಹ ಹೇಳಿದ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸುತ್ತದೆ.

“ಪ್ರತಿವಾದಿಗಳು ಮತ್ತು ಅವರ ವಿತರಣಾ ಜಾಲ ಸೇರಿದಂತೆ ಅವರ ಪರವಾಗಿ ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸುವ ಎಲ್ಲಾ ಪಕ್ಷಗಳು ಮೇಲಿನ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರುತ್ತಾರೆ. ಸೆಪ್ಟೆಂಬರ್ 1, 2023 ರಿಂದ ಜಾರಿಗೆ ಬರುವಂತೆ, ಜೈಲರ್ ಚಿತ್ರದ ಥಿಯೇಟ್ರಿಕಲ್ ಚಿತ್ರಣದಲ್ಲಿ ಆರ್‌ಸಿಬಿ ತಂಡದ ಜೆರ್ಸಿಯನ್ನು ಬದಲಾಯಿಸಲಾಗುತ್ತದೆ. 1ನೇ ಸೆಪ್ಟೆಂಬರ್, 2023 ರ ನಂತರ ಯಾವುದೇ ಥಿಯೇಟರ್‌ಗಳು ಆರ್‌ಸಬಿ ಜರ್ಸಿಯನ್ನು ಯಾವುದೇ ರೂಪದಲ್ಲಿ ಪ್ರದರ್ಶಿಸುವುದಿಲ್ಲ ಎಂದು ಪ್ರತಿವಾದಿಗಳು ಖಚಿತಪಡಿಸಿಕೊಳ್ಳಬೇಕು. ಟಿವಿ, ಸ್ಯಾಟಲೈಟ್‌ ಅಥವಾ ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದಂತೆ, ಅದರ ಬಿಡುಗಡೆಯ ಮೊದಲು, ಚಲನಚಿತ್ರದ ಬದಲಾದ ಆವೃತ್ತಿಯನ್ನು ಪ್ರಸಾರ ಮಾಡಲಾಗುತ್ತದೆ' ಎಂದು ಕೋರ್ಟ್‌ ತಿಳಿಸಿದೆ.

ತಂಗಿಯ ಮದ್ವೆ ಮಾಡಿ ಕಳಿಸೋ ವೇಳೆ ಬಿಕ್ಕಿ ಬಿಕ್ಕಿ ಅತ್ತ ಆರ್‌ಸಿಬಿ ಆಟಗಾರ

ಜೈಲರ್ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ತಮಿಳು ಚಿತ್ರವಾಗಿದೆ. ಇದರಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ತಮನ್ನಾ ಭಾಟಿಯಾ ಕೂಡ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವು ಆಗಸ್ಟ್ 10 ರಂದು ಬಿಡುಗಡೆಯಾಗಿತ್ತು.  ಮತ್ತು ಅಂದಿನಿಂದ ವಿಶ್ವದಾದ್ಯಂತ ₹ 607.29 ಕೋಟಿ ಗಳಿಸಿದೆ. ಇದು ಈ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ.

ರಜನೀಕಾಂತ್​ ಜೈಲರ್​ಗೆ ಸಂಕಟ: ಚಿತ್ರದ ವಿರುದ್ಧ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ

Follow Us:
Download App:
  • android
  • ios