ಹ್ಯಾಮಿಲ್ಟನ್[ಫೆ.10]: ಭಾರತ ತಂಡವನ್ನು 4 ರನ್’ಗಳಿಂದ ರೋಚಕವಾಗಿ ಮಣಿಸಿದ ಆತಿಥೇಯ ನ್ಯೂಜಿಲೆಂಡ್ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಕಿವೀಸ್ ನೆಲದಲ್ಲಿ ಟಿ20 ಸರಣಿ ಗೆಲುವು ಮರೀಚಿಕೆ

ಕಾಲಿನ್ ಮನ್ರೊ ಸಿಡಿಲಬ್ಬರದ ಬ್ಯಾಟಿಂಗ್, ಬೌಲರ್’ಗಳ ಚಾಣಾಕ್ಷ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ನಿರ್ಣಾಯಕ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಕಿವೀಸ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ಕೊನೆ ಕ್ಷಣದವರೆಗೂ ಗೆಲುವಿಗಾಗಿ ಕಸರತ್ತು ನಡೆಸಿತಾದರೂ ಅಂತಿಮವಾಗಿ ರೋಚಕ ಸೋಲು ಕಂಡಿತು. ವಿಜಯ್ ಶಂಕರ್, ದಿನೇಶ್ ಕಾರ್ತಿಕ್ ಹಾಗೂ ಕೃನಾಲ್ ಪಾಂಡ್ಯ ಹೋರಾಟ ವ್ಯರ್ಥವಾಯಿತು.

ಧೋನಿ ಮಿಂಚಿನ ಸ್ಟಂಪಿಂಗ್’ಗೆ ಪೆವಿಲಿಯನ್ ಸೇರಿದ ಸೈಫರ್ಟ್

ಟೀಂ ಇಂಡಿಯಾದ ರೋಚಕ ಸೋಲಿನ ಬಗ್ಗೆ ಟ್ವಿಟರಿಗರು ಏನಂದ್ರು ನೀವೇ ನೋಡಿ...