ಧೋನಿ ಮಿಂಚಿನ ಸ್ಟಂಪಿಂಗ್’ಗೆ ಪೆವಿಲಿಯನ್ ಸೇರಿದ ಸೈಫರ್ಟ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ 7.4 ಓವರ್’ಗಳಲ್ಲಿ 80 ರನ್ ಬಾರಿಸಿತ್ತು. ಸೈಫರ್ಟ್ ತಲಾ 3 ಬೌಂಡರಿ ಹಾಗೂ ಸಿಕ್ಸರ್’ಗಳ ನೆರವಿನಿಂದ 43 ರನ್ ಸಿಡಿಸಿದ್ದರು. ಕುಲ್ದೀಪ್ ಬೌಲಿಂಗ್’ನಲ್ಲಿ ಮುನ್ನುಗ್ಗಿ ಆಡಲು ಯತ್ನಿಸಿ ಸ್ಟಂಪೌಟ್ ಆಗಿದ್ದಾರೆ.

Ind Vs NZ 3rd T20I Lightening quick work from MS Dhoni behind the stumps

ಹ್ಯಾಮಿಲ್ಟನ್[ಫೆ.10]: ಕಿವೀಸ್ ರನ್ ಅಬ್ಬರಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವಲ್ಲಿ ಮಹೇಂದ್ರ ಸಿಂಗ್ ಧೋನಿ ಯಶಸ್ವಿಯಾಗಿದ್ದಾರೆ. ಕುಲ್ದೀಪ್ ಬೌಲಿಂಗ್’ನಲ್ಲಿ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್’ಮನ್ ಟಿಮ್ ಸೈಫರ್ಟ್ ಸ್ಟಂಪಿಂಗ್ ಮಾಡುವಲ್ಲಿ ಧೋನಿ ಸಫಲವಾಗಿದ್ದಾರೆ.

ಧೋನಿ ಇರುವಾಗ ಗೆರೆ ದಾಟಬೇಡಿ: ಇದು ICC ನೀಡಿದ ಎಚ್ಚರಿಕೆ..!

ಕೆಲದಿನಗಳ ಹಿಂದಷ್ಟೇ ಐಸಿಸಿ ಕೂಡಾ ಧೋನಿ ವಿಕೆಟ್ ಹಿಂದಿರುವಾಗ ಗೆರೆ ದಾಟಬೇಡಿ ಎಂದು ಎಚ್ಚರಿಕೆ ನೀಡಿತ್ತು. ಐಸಿಸಿ ಮಾತಿನ ಬಗ್ಗೆ ಹೆಚ್ಚು ಗಮನ ಕೊಡದ ಸೈಫರ್ಟ್ ಕೊನೆಗೂ ಬೆಲೆತೆತ್ತಿದ್ದಾರೆ. ಕೇವಲ ಒಂದು ಸೆಕೆಂಡ್ ಒಳಗಾಗಿ[0.099 ಸೆಕೆಂಡ್ಸ್] ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ವಿಕೆಟ್ ಹಿಂದೆ ತಾವೇ ಕಿಂಗ್ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ವಿಶ್ವಕಪ್ ತಂಡದಲ್ಲಿ ಧೋನಿಗೆ ಸ್ಥಾನ: ಯುವಿ ಹೇಳೋದೇನು...?

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ 7.4 ಓವರ್’ಗಳಲ್ಲಿ 80 ರನ್ ಬಾರಿಸಿತ್ತು. ಸೈಫರ್ಟ್ ತಲಾ 3 ಬೌಂಡರಿ ಹಾಗೂ ಸಿಕ್ಸರ್’ಗಳ ನೆರವಿನಿಂದ 43 ರನ್ ಸಿಡಿಸಿದ್ದರು. ಕುಲ್ದೀಪ್ ಬೌಲಿಂಗ್’ನಲ್ಲಿ ಮುನ್ನುಗ್ಗಿ ಆಡಲು ಯತ್ನಿಸಿ ಸ್ಟಂಪೌಟ್ ಆಗಿದ್ದಾರೆ.

ಇದೀಗ ನ್ಯೂಜಿಲೆಂಡ್ 10 ಓವರ್ ಮುಕ್ತಾಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 96 ರನ್ ಬಾರಿಸಿದ್ದು, ಮನ್ರೋ 46 ಹಾಗೂ ವಿಲಿಯಮ್ಸನ್ 6 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. 

Latest Videos
Follow Us:
Download App:
  • android
  • ios