2020ರ ಟೋಕಿಯೋ ಒಲಿಂಪಿಕ್ಸ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಇನ್ನೊಂದು ವರ್ಷದಲ್ಲಿ ಕ್ರೀಡಾ ಮಹಾಜಾತ್ರೆ ನಡೆಯಲಿದ್ದು, ಈಗಾಗಲೇ ಜಪಾನ್ ಸರ್ವಸನ್ನದ್ಧವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಟೋಕಿಯೋ(ಜು.25): ಬುಧವಾರ (ಜು.24)ಕ್ಕೆ ಸರಿಯಾಗಿ 1 ವರ್ಷದ ಬಳಿಕ ಟೋಕಿಯೋ ಒಲಿಂಪಿಕ್ಸ್‌ ಕೂಟ ಶುರುವಾಗಲಿದೆ. ಸರಿಯಾಗಿ 365 ದಿನಗಳ ನಂತರ ಅಂದರೆ 2020ರ ಜುಲೈ 24 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರತಿಷ್ಠಿತ ಒಲಿಂಪಿಕ್ಸ್‌ಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಜಪಾನ್‌ ಸರ್ವ ಸನ್ನದ್ಧವಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೂಟಿಂಗ್‌ ವಿಶ್ವಕಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು

ಆ ದಿನ 1976ರ ಒಲಿಂಪಿಕ್ಸ್‌ನ ಫೆನ್ಸಿಂಗ್‌ನಲ್ಲಿ ಚಿನ್ನ ಜಯಿಸಿದ್ದ, ಪ್ರಸಕ್ತ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌, ಶಾಲಾ ಮಕ್ಕಳೊಂದಿಗೆ ಆಗಮಿಸಿ ಅವರ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಹಾಗೇ ಜಪಾನ್‌ನ ಪ್ರಧಾನ ಮಂತ್ರಿ ಕೂಡ ಒಲಿಂಪಿಕ್‌ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.

ಇ-ತ್ಯಾಜ್ಯದಿಂದ ಸಿದ್ಧಗೊಳ್ಳುತ್ತಿದೆ ಟೋಕಿಯೋ ಒಲಿಂಪಿಕ್ಸ್ ಪದಕ!

ಈ ಹಿನ್ನೆಲೆಯಲ್ಲಿ ಬುಧವಾರ ಒಲಿಂಪಿಕ್ಸ್‌ ಆಯೋಜಕರು ಕೂಟದಲ್ಲಿ ವಿಜೇತರಿಗೆ ನೀಡುವ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದ ಅನಾವರಣ ಮಾಡಿದ್ದಾರೆ. ಟೋಕಿಯೋದಲ್ಲಿ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಈಗಾಗಲೇ 20 ಬಿಲಿಯನ್‌ ಅಮೆರಿಕ ಡಾಲರ್‌ (1.4 ಲಕ್ಷ ಕೋಟಿ ರುಪಾಯಿ) ಹಣವನ್ನು ಖರ್ಚು ಮಾಡಲಾಗಿದೆ. 5 ರಿಂದ 8 ಹೊಸ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. 1.25 ಬಿಲಿಯನ್‌ ಅಮೆರಿಕ ಡಾಲರ್‌ ವೆಚ್ಚದಲ್ಲಿ ರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ವರ್ಷದ ಅಂತ್ಯಕ್ಕೆ ಇದರ ಉದ್ಘಾಟನೆ ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ.