Asianet Suvarna News

ಶೂಟಿಂಗ್‌ ವಿಶ್ವಕಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು

ಭಾರತದ ಯುವ ಶೂಟರ್ ಮನು ಭಾಕರ್ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಭಾರತದ 7 ಶೂಟರ್‌ಗಳು ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ISSF Shooting Manu Bhaker guns down seventh Tokyo spot
Author
Munich, First Published May 30, 2019, 8:12 PM IST
  • Facebook
  • Twitter
  • Whatsapp

ಮ್ಯೂನಿಕ್‌(ಜರ್ಮನಿ): ಯುವ ಶೂಟರ್‌ ಮನು ಭಾಕರ್‌, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಮಹಿಳೆಯರ 10ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. 

ಭರ್ಜರಿ ಬೇಟೆ - ವಿಶ್ವದಾಖಲೆಯೊಂದಿಗೆ ಸೌರಭ್‌ಗೆ ಚಿನ್ನ

ಪದಕ ಜಯಿಸದೆ ಇದ್ದರೂ 17 ವರ್ಷದ ಮನು ಭಾಕರ್‌ 201.0 ಅಂಕಗಳಿಸಿ ಒಲಿಂಪಿಕ್ಸ್‌ ಸ್ಥಾನ ಖಚಿತಪಡಿಸಿಕೊಂಡರು. ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಪಂದ್ಯಾವಳಿಗಳಲ್ಲಿ ಮನು ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಈವರೆಗೂ ಭಾರತದಿಂದ 2020ರ ಒಲಿಂಪಿಕ್ಸ್‌ಗೆ ಒಟ್ಟು 7 ಶೂಟರ್‌ಗಳು ಅರ್ಹತೆ ಪಡೆದಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಮನು 582 ಅಂಕಗಳಿಸಿ 3ನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದರು. ಇದೇ ಸ್ಪರ್ಧೆಯಲ್ಲಿ ಜೂನಿಯರ್‌ ವಿಶ್ವಕಪ್‌ ಪ್ರಶಸ್ತಿ ವಿಜೇತೆ ಯಶಸ್ವಿನಿ 22ನೇ ಸ್ಥಾನ ಹಾಗೂ ಹೀನಾ ಸಿಧು 45ನೇ ಸ್ಥಾನ ಪಡೆದು ಫೈನಲ್‌ಗೇರುವಲ್ಲಿ ವಿಫಲರಾದರು.

Follow Us:
Download App:
  • android
  • ios