ಅವರು ಮಾಡಿದ್ದು ಪ್ರಚಾರಕ್ಕಲ್ಲ: ವಿರುಷ್ಕಾ ಪರ ರಿಜಿಜು ಬ್ಯಾಟಿಂಗ್
ಯುವಕನೋರ್ವ ರಸ್ತೆಯಲ್ಲಿ ಕಸ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಅನುಷ್ಕಾ ಶರ್ಮಾ ಪಾಠ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಕುರಿತಂತೆ ಪರ-ವಿರೋಧಗಳು ವ್ಯಕ್ತವಾಗಿದ್ದವು.
ನವದೆಹಲಿ[ಜೂ.18]: ಯುವಕನೋರ್ವ ರಸ್ತೆಯಲ್ಲಿ ಕಸ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಅನುಷ್ಕಾ ಶರ್ಮಾ ಪಾಠ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಕುರಿತಂತೆ ಪರ-ವಿರೋಧಗಳು ವ್ಯಕ್ತವಾಗಿದ್ದವು. ಪ್ರಚಾರಕ್ಕಾಗಿ ವಿರುಷ್ಕಾ ಜೋಡಿ ಹೀಗೆ ಮಾಡಿದ್ದಾರೆ ಎಂಬ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದೀಗ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಕಿರಣ್ ರಿಜಿಜು ವಿರುಷ್ಕಾ ಬೆಂಬಲಕ್ಕೆ ನಿಂತಿದ್ದಾರೆ.
ವಿರಾಟ್ ಹಾಗೂ ಅನುಷ್ಕಾ ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ ಎಂಬ ಮಾತಿನಲ್ಲಿ ಹುರುಳಿಲ್ಲ. ಅವರಿಗೂ ಪ್ರಚಾರಕ್ಕಿಂತ ಖಾಸಗಿತನ ಮುಖ್ಯ. ಕೆಲವರ ಟೀಕೆ ಅವರ ಮನಸ್ಥಿತಿ ತೋರಿಸುತ್ತದೆ. ಸಾಮಾಜಿಕ ಪ್ರಜ್ಞೆ ಶಿಕ್ಷಣ ಅಥವಾ ಶ್ರೀಮಂತಿಕೆಯಿಂದ ಬರುವುದಿಲ್ಲ. ಸಾಮಾಜಿಕ ಕಳಕಳಿಯಿಂದ ವಿರುಷ್ಕಾ ಜೋಡಿ ಹೀಗೆ ಮಾಡಿದೆ. ಭಾರತವನ್ನು ಸ್ವಚ್ಚವಾಗಿಡೋಣ ಎಂದು ಟ್ವೀಟ್ ಮಾಡುವ ಮೂಲಕ ವಿರುಷ್ಕಾ ಬೆಂಬಲಕ್ಕೆ ನಿಂತಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ವಿರುಷ್ಕಾ ಜೋಡಿ ಕಾರಿನಲ್ಲಿ ಹೋಗುತ್ತಿರುವಾಗ ಮತ್ತೊಂದು ಕಾರಿನಲ್ಲಿದ್ದ ಯುವಕನೋರ್ವ ರಸ್ತೆಗೆ ಪ್ಲಾಸ್ಟಿಕ್’ನಂತಹ ತುಣುಕೊಂದನ್ನು ಎಸೆದಿದ್ದಾನೆ ಎನ್ನಲಾಗಿದ್ದು, ಆ ಯುವಕನಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸ್ವಚ್ಚ ಭಾರತದ ಪಾಠ ಮಾಡಿದ್ದಾರೆ. ಆ ಕ್ಷಣವನ್ನು ವಿರಾಟ್ ಕೊಹ್ಲಿ 17 ಸೆಕೆಂಡ್’ಗಳ ವಿಡಿಯೋ ಮಾಡಿ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದರು.
ಆ ನಂತರ ಏನಾಯ್ತು ಇಲ್ಲಿದೆ ಡೀಟೇಲ್ಸ್..
ವಿರಾಟ್ ಶೇರ್ ಮಾಡಿದ ಅನುಷ್ಕಾರ ವಿಡಿಯೋ ವೈರಲ್..!
ಟ್ವಿಟರಿಗರಿಗೆ ವಿರಾಟ್ ಕ್ಲಾಸ್, ಅನುಷ್ಕಾಗೆ ತಾಯಿ ಕ್ಲಾಸ್..!
‘ನಿಮ್ಮ ಬಾಯಿಂದ ಬಂದ ಮಾತು ಕಸಕ್ಕಿಂತ ಕೀಳು'..!