ವಿರಾಟ್ ಶೇರ್ ಮಾಡಿದ ಅನುಷ್ಕಾರ ವಿಡಿಯೋ ವೈರಲ್ರಸ್ತೆಯಲ್ಲಿ ಕಸ ಚೆಲ್ಲಿದ ಯುವಕನಿಗೆ ತರಾಟೆಪ್ಲಾಸ್ಟಿಕ್ ವಸ್ತು ಚೆಲ್ಲಿದ ಯುವಕನಿಗೆ ಅನುಷ್ಕಾ ಪಾಠ
ಮುಂಬೈ(ಜೂ.16): ರಸ್ತೆಯಲ್ಲಿ ಕಸ ಚೆಲ್ಲಿದ ಸಹ ಪ್ರಯಾಣಿಕನೋರ್ವನನ್ನು ಬಾಲಿವುಡ್ ನಟಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಅನುಷ್ಕಾ ಯುವಕನೋರ್ವನನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ವಿರಾಟ್ ಶೇರ್ ಮಾಢಿದ್ದಾರೆ.
ಅನುಷ್ಕಾ ತಮ್ಮ ಕಾರಿನಲ್ಲಿ ಹೋಗುತ್ತಿರುವಾಗ ಯುವಕನೋರ್ವ ತನ್ನ ಕಾರಿನಿಂದ ಪ್ಲಾಸ್ಟಿಕ್ ವಸ್ತುವೊಂದನ್ನು ಹೊರ ಚೆಲ್ಲಿದ್ದಾನೆ. ಇದನ್ನು ಕಂಡ ಅನುಷ್ಕಾ, ತಮ್ಮ ಕಾರು ನಿಲ್ಲಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನುಷ್ಕಾ ಮಾತಿಗೆ ಬೆಚ್ಚಿ ಬಿದ್ದ ಯುವಕ ಏನೂ ಮಾತನಾಡದೇ ಹೊರಟು ಹೋಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಶೇರ್ ಮಾಡಿರುವ ವಿರಾಟ್, ಇಂತಹವರಿಂದ ಸ್ವಚ್ಛ ಭಾರತವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ವಿರಾಟ್ ಶೇರ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟಿಜನ್ಸ್ ಗಳು ಅನುಷ್ಕಾ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.
