Asianet Suvarna News Asianet Suvarna News

ಸತ್ಯ ಅಡಗಿಸಲಾಗದು: ಡಿವೋರ್ಸ್ ರೂಮರ್ ಮಧ್ಯೆ ಸಾನಿಯಾ ಪೋಸ್ಟ್ ವೈರಲ್

ಹಲವು ಖ್ಯಾತ ಸೆಲೆಬ್ರಿಟಿ ಜೋಡಿಗಳು ಬ್ರೇಕಪ್ ಆದರೆ ಮತ್ತೆ ಕೆಲವು ಜೋಡಿಗಳು ವಿಚ್ಛೇದನಕ್ಕೆ ಒಳಗಾದ ಘಟನೆಗಳು 2022ರಲ್ಲಿ ನಡೆದಿದ್ದವು. ಇದರ ಜೊತೆಗೆ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ಥಾನದ ಖ್ಯಾತ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ವಿಚ್ಛೇದನ ಪಡೆಯುತ್ತಾರೆ ಎಂಬ ವಿಚಾರಗಳು ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು.

The truth cannot be hidden, Sanias post goes viral again amid divorce rumours akb
Author
First Published Jan 3, 2023, 12:13 PM IST

ಹಲವು ಖ್ಯಾತ ಸೆಲೆಬ್ರಿಟಿ ಜೋಡಿಗಳು ಬ್ರೇಕಪ್ ಆದರೆ ಮತ್ತೆ ಕೆಲವು ಜೋಡಿಗಳು ವಿಚ್ಛೇದನಕ್ಕೆ ಒಳಗಾದ ಘಟನೆಗಳು 2022ರಲ್ಲಿ ನಡೆದಿದ್ದವು. ಇದರ ಜೊತೆಗೆ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ಥಾನದ ಖ್ಯಾತ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ವಿಚ್ಛೇದನ ಪಡೆಯುತ್ತಾರೆ ಎಂಬ ವಿಚಾರಗಳು ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು. ವಿಚ್ಛೇದನದ ವದಂತಿ ನಡುವೆಯೇ ಸಾನಿಯಾ ಮಿರ್ಜಾ ಹುಟ್ಟುಹಬ್ಬ ಬಂದಿತ್ತು. ಈ ವೇಳೆ ಶೋಯೆಬ್ ಅವರು ಮುದ್ದಾಗಿ ವಿಶ್ ಮಾಡಿದ್ದರು. ಇದಾದ ಬಳಿಕ ಈ ರೂಮರ್ಸ್‌ಗೆ ಸ್ವಲ್ಪ ಕಾಲ ತೆರೆ ಬಿದ್ದಿತ್ತು. ಈಗ ಮತ್ತೆ ಈ ದಂಪತಿ ಪ್ರತ್ಯೇಕಗೊಳ್ಳುತ್ತಿದ್ದಾರೆ ಎಂಬ ರೂಮರ್ಸ್ ಹೊರಬಿದ್ದಿದೆ. 

ಇತ್ತೀಚೆಗೆ ಫೋಟೋವೊಂದನ್ನು ಪೋಸ್ಟ್ ಮಾಡಿದ ಸಾನಿಯಾ ಮಿರ್ಜಾ (Sania Mirza) 2022ರ ವರ್ಷಕ್ಕೆ ಗುಡ್‌ ಬಾಯ್ ಹೇಳಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದರು. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಮತ್ತೆ ಡಿವೋರ್ಸ್ ಊಹಾಪೋಹಾ (divorce speculations) ಕೇಳಿ ಬಂದಿದೆ. 2022ಕ್ಕೆ ನನ್ನ ಬಳಿ ಕ್ಯಾಪ್ಷನ್ ಇಲ್ಲ, ಆದರೆ ನನ್ನ ಬಳಿ ಕೆಲವು ಮುದ್ದಾದ ಸೆಲ್ಫಿಗಳಿವೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪಿಎಸ್: 2022 ನೀನು ನಿಜವಾಗಿಯೂ ನನ್ನ ಬುಡಕ್ಕೆ ಒದ್ದಿದ್ದೀಯಾ? ಆದರೆ ನಾನೀಗ ಕೃತಜ್ಞನಾಗಿರಬೇಕು ಎಂದು ಬರೆದು  #Youucanthandlethetruth ಎಂಬ ಹ್ಯಾಷ್ ಟ್ಯಾಗ್ ಜೊತೆ ಟ್ಯಾಗ್ ಮಾಡಿದ್ದಾರೆ. ನೋಡುಗರಲ್ಲಿ ಗೊಂದಲ ಮೂಡಿಸುವ ಈ ಪೋಸ್ಟ್‌ನಿಂದಾಗಿ ಮತ್ತೆ ಈ ಜೋಡಿ ವಿಚ್ಛೇದನಕ್ಕೊಳಗಾಗುತ್ತಿದ್ದಾರೆ ಎಂಬ ಊಹಾಪೋಹಾ ಮುನ್ನೆಲೆಗೆ ಬಂದಿದೆ. 

Sania Mirza: ಡಿವೋರ್ಸ್ ರೂಮರ್ಸ್ ಮಧ್ಯೆ ಸಾನಿಯಾಗೆ ಮುದ್ದಾಗಿ ಬರ್ತ್‌ಡೇ ವಿಶ್ ಮಾಡಿದ ಮಲಿಕ್

ವಿಚ್ಛೇದನದ ವದಂತಿ

ಕಳೆದ ಕೆಲ ತಿಂಗಳಿನಿಂದ ಈ ಜೋಡಿ ವಿಚ್ಛೇದನಕ್ಕೊಳಗಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಸಾನಿಯಾ ಮತ್ತು ಶೋಯೆಬ್ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಅವರ ವಿಚ್ಛೇದನವನ್ನು ಮಾನ್ಯಗೊಳಿಸಲು ಕಾನೂನು ಮಾರ್ಗವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೇ ಶೋಯೇಬ್ ತಮ್ಮ ಸಂಬಂಧಕ್ಕೆ ಮೋಸ ಮಾಡುತ್ತಿರುವ ವಿಚಾರವನ್ನು ಸಾನಿಯಾ ಕಣ್ಣಾರೆ ಕಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿ ಆಗಿತ್ತು. ಇದಲ್ಲದೇ  ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಸ್ಟಾರ್ ಜೋಡಿ ಈಗಾಗಲೇ ವಿಚ್ಛೇದನ ಪಡೆದಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿರುವ ಶೋಯೆಬ್ ಅವರ ಮ್ಯಾನೇಜ್‌ಮೆಂಟ್ ತಂಡದ ನಿಕಟ ಮೂಲದಿಂದ ಈ ಸುದ್ದಿ ದೃಢಪಟ್ಟಿದೆ ಎಂದು ವರದಿ ಆಗಿತ್ತು.

ವಿಚ್ಛೇದನದ ಸುದ್ದಿಯ ನಡುವೆ, 'ಹೃದಯ ಭಾರವಾದಂತೆ ಅನಿಸಿದೆ...' ಎಂದು ಸಾನಿಯಾ ಪೋಸ್ಟ್‌!

ಆದರೆ ಸಾನಿಯಾ ಮತ್ತು ಶೋಯೆಬ್ (Shoaib) ಅವರ ಬೇರ್ಪಡಿಕೆಗೆ ನಿಜವಾದ ಕಾರಣ ತಿಳಿದಿಲ್ಲವಾದರೂ, ಶೋಯೆಬ್ ಮಲಿಕ್ ಪಾಕಿಸ್ತಾನದ ಖ್ಯಾತ ಮಾಡೆಲ್ ಮತ್ತು ನಟಿ ಆಯೇಶಾ (Ayesha) ಒಮರ್ ಅವರೊಂದಿಗೆ ಓಡಾಡುತ್ತಿರುವುದೇ ಇದಕ್ಕೆ ಕಾರಣ ಎಂದು ವರದಿಯಾಗಿದ್ದರು. ಇದರ ಜೊತೆ ಜೊತೆಗೆ ಆಯೇಷಾ ಮತ್ತು ಶೋಯೆಬ್ ಆಪ್ತರಾಗಿರುವ ಫೋಟೊಗಳು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದವು. ಆದರೆ ಈ ಕ್ರೀಢಾ ತಾರಾ ಜೋಡಿ ಮಾತ್ರ ತಮ್ಮ ಈ ವಿಚ್ಛೇದನದ ವರದಿಯನ್ನು ನಿರಾಕರಿಸಿಯೂ ಇಲ್ಲ, ಒಪ್ಪಿಕೊಂಡಿದ್ದು ಇಲ್ಲ. ಈ ಬಗ್ಗೆ ಸಾನಿಯಾ ಪತಿ ಶೋಯೆಬ್ ಮಾತ್ರ ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಇದು ನಮ್ಮ ವೈಯಕ್ತಿಕ ವಿಚಾರ. ಇದರಲ್ಲಿ ಮಾಧ್ಯಮಗಳ ಹಸ್ತಕ್ಷೇಪವನ್ನು ನಾವು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. 2010ರ ಏಪ್ರಿಲ್‌ನಲ್ಲಿ ಈ ತಾರಾ ಜೋಡಿ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು. 2018ರಲ್ಲಿ ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ವಿವಾಹ ವೈಯಕ್ತಿಕ ವಿಚಾರವಾದರೂ, ಶೋಯೆಬ್ ಮಲ್ಲಿಕ್ ಪಾಕಿಸ್ತಾನದವ ಎಂಬ ಕಾರಣ್ಕಕೆ ಇವರ ವಿವಾಹಕ್ಕೆ ಭಾರತದಲ್ಲಿ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

 
 
 
 
 
 
 
 
 
 
 
 
 
 
 

A post shared by Sania Mirza (@mirzasaniar)

 

 

Follow Us:
Download App:
  • android
  • ios