Sania Mirza: ಡಿವೋರ್ಸ್ ರೂಮರ್ಸ್ ಮಧ್ಯೆ ಸಾನಿಯಾಗೆ ಮುದ್ದಾಗಿ ಬರ್ತ್‌ಡೇ ವಿಶ್ ಮಾಡಿದ ಮಲಿಕ್
Sania Mirza, Shoaib Malik: ಸಾನಿಯಾ ಮಿರ್ಜಾ ಇಂದು ತಮ್ಮ 36ನೇ ವರ್ಷಕ್ಕೆ ಕಾಲಿರಿಸಿದ್ದು, ಪತಿ ಶೋಯೆಬ್ ಪತ್ನಿಗೆ ಮುದ್ದಾಗಿ ವಿಶ್ ಮಾಡುವ ಮೂಲಕ ವಿಚ್ಛೇದನದ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ.
ಕ್ರೀಡಾತಾರಾ ಜೋಡಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಮಧ್ಯೆ ಎಲ್ಲವೂ ಚೆನ್ನಾಗಿಲ್ಲ. ಇಬ್ಬರ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಕಾನೂನು ಪ್ರಕ್ರಿಯೆಯ ನಂತರ ಇಬ್ಬರೂ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂಬ ಸಾಕಷ್ಟು ಊಹಾಪೋಹಾಗಳು ಹರಿದಾಡಿದ್ದವು. ಈ ಮಧ್ಯೆ ಸಾನಿಯಾ ಮಿರ್ಜಾ ಇಂದು ತಮ್ಮ 36ನೇ ವರ್ಷಕ್ಕೆ ಕಾಲಿರಿಸಿದ್ದು, ಪತಿ ಶೋಯೆಬ್ ಪತ್ನಿಗೆ ಮುದ್ದಾಗಿ ವಿಶ್ ಮಾಡುವ ಮೂಲಕ ವಿಚ್ಛೇದನದ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ(Sania Mirza), ಆರೋಗ್ಯ ಹಾಗೂ ಸಂತೋಷದಿಂದ ಕೂಡಿದ ಜೀವನ ನಿಮ್ಮದಾಗಲಿ. ಈ ದಿನವನ್ನು ಸುಂದರವಾಗಿ ಆಚರಿಸಿ ಎಂದು ಬರೆದು ತಾನು ಹಾಗೂ ಪತ್ನಿ ಸಾನಿಯಾ ಜೊತೆ ಇರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿ ಕ್ರಿಕೆಟಿಗ ಶೋಯೆಬ್ ಮಲಿಕ್ ಪತ್ನಿ ಸಾನಿಯಾಗೆ ಹುಟ್ಟುಹಬ್ಬದ ಶುಭಾಶಯ (Birthday wish)ತಿಳಿಸಿದ್ದಾರೆ.
ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಪತಿ ಕಳುಹಿಸಿರುವ ಈ ವಿಶೇಷ ಸಂದೇಶದಿಂದ ಇಬ್ಬರು ಪ್ರತ್ಯೇಕವಾಗುತ್ತಿದ್ದಾರೆ ಎಂದು ಹಬ್ಬಿದ ಊಹಾಪೋಹಾಕ್ಕೆ ತೆರೆ ಬಿದ್ದಂತಾಗಿದೆ. ಸಾನಿಯಾ ಹಾಗೂ ಶೋಯೆಬ್ ಮಲೀಕ್ 2010ರ ಏಪ್ರಿಲ್ 12 ರಂದು ಹೈದರಾಬಾದ್‌ನಲ್ಲಿ (Hyderabad) ವಿವಾಹವಾಗಿದ್ದರು. ಏಪ್ರಿಲ್ 15 ರಂದು ಲಾಹೋರ್‌ನಲ್ಲಿ (Lahore) ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಕೂಡ ನಡೆದಿತ್ತು. ವಿವಾಹದ ನಂತರ ದುಬೈನಲ್ಲಿ ನೆಲೆಸಿದ್ದರು. 2018ರಲ್ಲಿ ದಂಪತಿ ಮೊದಲ ಮಗು ಇಜಾನ್ ಮಿರ್ಜಾ ಮಲಿಕ್‌ನನ್ನು ಬರಮಾಡಿಕೊಂಡಿದ್ದರು. ಈ ಮಧ್ಯೆ ದಂಪತಿಯ ಮಧ್ಯೆ ಎಲ್ಲವೂ ಸರಿ ಇಲ್ಲ. ಹೀಗಾಗಿ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ಸಾನಿಯಾ ತಾನು ಹಾಗೂ ಪುತ್ರ ಮಾತ್ರ ಇರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಕಷ್ಟದ ದಿನಗಳಿಂದ ಆಚೆ ಬರಲು ಸಹಕರಿಸಿದ ಸಂದರ್ಭ ಎಂದು ಬರೆದುಕೊಂಡಿದ್ದರು.
ಶೋಯೆಬ್ ಮಲಿಕ್‌ಗೂ ಮೊದಲು ಸಾನಿಯಾ ಮಿರ್ಜಾ ಜತೆ ಥಳಕು ಹಾಕಿಕೊಂಡಿದ್ದ ಅಚ್ಚರಿಯ ಹೆಸರುಗಳಿವು..!
ಈ ವಿಚಾರ ಸಾನಿಯಾ ಹಾಗೂ ಶೋಯೆಬ್ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತ್ತು. ಈ ಊಹಾಪೋಹಾಗಳ ಮಧ್ಯೆಯೇ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ಪಾಕಿಸ್ತಾನದ ಓಟಿಟಿ ಪ್ಲಾಟ್‌ಪಾರ್ಮ್ ಉರ್ದುಫ್ಲಿಕ್ಸ್‌ಗೆ ಶೋವೊಂದನ್ನು ಜೊತೆಯಾಗಿ ನಡೆಸಿಕೊಡುತ್ತಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿತ್ತು. ಸ್ವತಃ ಉರ್ದುಫ್ಲಿಕ್ಸ್ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಉರ್ದುಫ್ಲಿಕ್ಸ್ (Urduflix) ಸಂಸ್ಥೆ ಈ ವಿಚಾರವನ್ನು ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ. ಈ ಶೋಗೆ ದ ಮಿರ್ಜಾ ಮಲಿಕ್ ಶೋ (The Mirza Malik Show) ಎಂದು ಹೆಸರಿಡಲಾಗಿದೆ. ಉರ್ದುಫ್ಲಿಕ್ಸ್ ಇನ್ಸ್ಟಾ ಪೋಸ್ಟ್‌ನಲ್ಲಿ ಶೋಯೆಬ್ ಕೈ ಕಟ್ಟಿ ನಿಂತಿದ್ದರೆ, ಶೋಯೆಬ್ ಹೆಗಲ ಮೇಲೆ ಸಾನಿಯಾ ಮಿರ್ಜಾ ಕೈ ಇಟ್ಟಿದ್ದಾರೆ. ಆದಷ್ಟು ಶೀಘ್ರದಲ್ಲೇ ದ ಮಿರ್ಜ್ ಮಲಿಕ್ ಶೋ ಕೇವಲ ಉರ್ದುಫ್ಲಿಕ್ಸ್‌ನಲ್ಲಿ ಮಾತ್ರ ಎಂದು ಈ ಪೋಟೋ ಪೋಸ್ಟ್ ಮಾಡಿ ಬರೆಯಲಾಗಿತ್ತು.
ವಿಚ್ಛೇದನ ಸುದ್ದಿಗೆ ಬ್ರೇಕ್: ಜೊತೆಯಾಗಿ ಟಿವಿ ಶೋ ನಡೆಸಲು ಮುಂದಾದ ಮಿರ್ಜಾ, ಮಲಿಕ್
ಈ ಕಾರಣದಿಂದಾಗಿ ಈ ಕ್ರೀಡಾಲೋಕದ ಫೇವರಿಟ್ ಜೋಡಿ ಸಾನಿಯಾ ಮಿರ್ಜಾ (Sania Mirza) ಹಾಗೂ ಶೋಯೇಬ್ ಮಲಿಕ್ ವಿಚ್ಛೇದನ ಊಹಾಪೋಹಾಕ್ಕೆ ಬ್ರೇಕ್ ಬಿದ್ದಂತಾಗಿದೆ. ಈ ಶೋ ಬಗ್ಗೆ ಅನೇಕ ಸಾಮಾಜಿಕ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದು, ಶೋ ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಮತ್ತೆ ಕೆಲವರು ಅವರು ಜೊತೆಯಾಗಿ ಇದ್ದಾರೆ ಎಂಬುದನ್ನು ಕೇಳಿ ಖುಷಿಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಳೆಯದೆಲ್ಲವನ್ನು ಮರೆತು ಜೊತೆಯಾಗಿ ಇರಿ. ನೀವಿಬ್ಬರು ಜೊತೆ ಇದ್ದಾರೆ ಚೆಂದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾನಿಯಾ ಹಾಗೂ ಶೋಯೆಬ್ ಮಧ್ಯೆ ಬಿರುಕು ಮೂಡಲು ಪಾಕಿಸ್ತಾನದ ನಟಿ ಆಯೇಷಾ ಖಮರ್ ಹಿಂದೆ ಶೋಯೆಬ್ ಸುತ್ತಾಡುತ್ತಿರುವುದೇ ಕಾರಣ ಎಂಬ ವರದಿಗಳು ಹಬ್ಬಿದ್ದವು.
ಸಾನಿಯಾ ಮಿರ್ಜಾ-ಮಲಿಕ್ ದಾಂಪತ್ಯ ಅಂತ್ಯ: ವಿಚ್ಛೇದನ ಆಗಿದೆ, ಅಧಿಕೃತ ಘೋಷಣೆ ಬಾಕಿ?