ಬಜರಂಗ್-ವಿನೇಶ್ ಎದುರು ಸಾಕ್ಷಿ ಮಲಿಕ್ ಗಂಭೀರ ಆರೋಪ: ತುಟಿಬಿಚ್ಚಿದ ಕಾಂಗ್ರೆಸ್ ಶಾಸಕಿ ಫೋಗಟ್!
ಭಾರತೀಯ ತಾರಾ ಕುಸ್ತಿಪಟುಗಳ ನಡುವೆಯೇ ಬಿರುಕು ಉಂಟಾಗಿದೆಯೇ ಎನ್ನುವ ಅನುಮಾನ ಶುರುವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಬ್ರಿಜ್‌ಭೂಷಣ್ ಸಿಂಗ್ ವಿರುದ್ದದ ಹೋರಾಟಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಜಿ ಕುಸ್ತಿಪಟು, ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ಸಾಕ್ಷಿ ಮಲಿಕ್ ಅವರ ಹೇಳಿಕೆ ವೈಯುಕ್ತಿಕವಾದದ್ದು ಎಂದು ಹೇಳಿದ್ದಾರೆ.
"ಸಾಕ್ಷಿ ಹೇಳಿಕೆಗೆ ನನ್ನ ಸಹಮತವಿಲ್ಲ. ನಾನು ದುರ್ಬಲವಾಗುವವರೆಗೂ, ನನ್ನ ಹೋರಾಟವೂ ಶಕ್ತಿ ಕಳೆದುಕೊಳ್ಳುವುದಿಲ್ಲ. ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾ ಬದುಕಿರುವವರೆಗೂ ಈ ಹೋರಾಟ ದುರ್ಬಲಗೊಳ್ಳುವುದಿಲ್ಲ. ಗೆಲ್ಲಬೇಕಿದ್ದವರು ಸೋಲಲ್ಲ. ಯಾವತ್ತೂ ಹೋರಾಡುತ್ತಾರೆ" ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.
ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಲು ಬಬಿತಾ ಫೋಗಟ್ ಬಯಸಿದ್ದರು: ಹೊಸ ಬಾಂಬ್ ಸಿಡಿಸಿದ ಸಾಕ್ಷಿ ಮಲಿಕ್!
ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಕಳೆದ ವರ್ಷ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಟ್ರಯಲ್ಸ್ ವಿನಾಯಿತಿ ಒಪ್ಪಿಕೊಳ್ಳುವ ಮೂಲಕ ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾ ತಮ್ಮ ಪ್ರತಿಭಟನೆಯನ್ನು ದುರ್ಬಲಗೊಳಿಸಿದರು. ಇದು ವಿನೇಶ್ ಹಾಗೂ ಬಜರಂಗ್ ಅವರ ಸ್ವಾರ್ಥದ ನಿರ್ಧಾರವಾಗಿತ್ತು. ಇದರಿಂದಾಗಿ ನಾವು ನಡೆಸುತ್ತಿದ್ದ ಪ್ರತಿಭಟನೆ ಸ್ವಾರ್ಥ ಸಾಧನೆಗಾಗಿ ನಡೆಯುತ್ತಿದೆ ಎನ್ನುವ ಭಾವನೆ ಜನರಲ್ಲಿ ಮೂಡಲಾರಂಭಿಸಿತು ಎಂದು ಸಾಕ್ಷಿ ಮಲಿಕ್, ತಮ್ಮ "ವಿಟ್ನೆಸ್" ಎನ್ನುವ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಯುವ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಜರಂಗ್ ಫೂನಿಯಾ, ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲಿಕ್ ನೇತೃತ್ವದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊನೆಗೆ ಬ್ರಿಜ್ ಭೂಷಣ್ ಸಿಂಗ್, ಭಾರತೀಯ ಕುಸ್ತಿ ಫೆಡರೇಷನ್‌ನಿಂದ ಕೆಳಗಿಳಿದ್ದರು.
ಮಹಿಳಾ ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು? ಭಾರತಕ್ಕೆ ಸಿಕ್ಕಿದ್ದೆಷ್ಟು?
11ನೇ ಪ್ರೊ ಕಬಡ್ಡಿ: ಬೆಂಗಳೂರಿಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ
ಹೈದರಾಬಾದ್: ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹ್ಯಾಟ್ರಿಕ್ ಸೋಲಿನ ಮುಖ ಭಂಗಕ್ಕೊಳಗಾಗಿದೆ. ಮಂಗಳವಾರ ಯುಪಿ ಯೋಧಾಸ್ ವಿರುದ್ಧ ಬುಲ್ಸ್ 36-57 ಅಂಕ ಗಳಿಂದಹೀನಾಯವಾಗಿಸೋಲನುಭವಿಸಿತು. ಯೋಧಾಸ್‌ಗೆ ಇದು ಸತತ 2ನೇ ಜಯ.
ಆರಂಭದಲ್ಲೇ ಬುಲ್ಸ್ ಮೇಲೆ ಹಿಡಿತ ಸಾಧಿಸಿದ ಯೋಧಾಸ್, ಮೊದಲಾರ್ಧದಲ್ಲಿ 33-15ರಲ್ಲಿ ಮುನ್ನಡೆಯಲ್ಲಿತ್ತು. ಬುಲ್ಸ್ 3 ಬಾರಿ ಆಲೌಟಾಯಿತು. ಸುರೇಂದರ್‌ಗಿಲ್ 17, ಬುಲ್ಸ್ ಮಾಜಿ ಆಟಗಾರ ಭರತ್ 14 ಅಂಕ ಗಳಿಸಿ ಯೋಧಾಸ್ ಗೆಲುವಿನ ರೂವಾರಿಗಳಾದರು. ಪ್ರದೀಪ್ ನರ್ವಾಲ್ (16) ಹೋರಾಟ ಫಲ ನೀಡಲಿಲ್ಲ.
ಮಂಗಳವಾರ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 52-22 ಅಂಕಗಳ ಭರ್ಜರಿ ಗೆಲುವು ಸಾಧಿಸಿತು.
ಇಂದಿನ ಪಂದ್ಯಗಳು
ಪುಣೇರಿ ಪಲ್ಟನ್ -ತಲೈವಾಸ್, ರಾತ್ರಿ 8ಕ್ಕೆ ಗುಜರಾತ್ - ಯು ಮುಂಬಾ, ರಾತ್ರಿ 9ಕ್ಕೆ