ಸಿಡ್ನಿ(ಜ.02): ಮೆಲ್ಬರ್ನ್ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ರಿಲಾಕ್ಸ್ ಮೂಡ್‌ಗೆ ಜಾರಿದ್ದ ಟೀಂ ಇಂಡಿಯಾ ಹೊಸ ವರ್ಷದಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಭೇಟಿ ಮಾಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡವನ್ನ ಪ್ರಧಾನಿ ಮಾರಿಸನ್ ಆಹ್ವಾನಿಸಿದ್ದರು. ಆದರೆ ಈ ಭೇಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಭೇಟಿ ಮಾಡಿದ ಕೊಹ್ಲಿ ಬಾಯ್ಸ್!

ಟೀಂ ಇಂಡಿಯಾ ಕ್ರಿಕೆಟಿಗರನ್ನ ಹಸ್ತಲಾಘವದ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಆಸಿಸ್ ಪ್ರಧಾನಿ ಪತ್ನಿ ಜೊತೆಗಿನ ಫೋಟೋ ಇದೀಗ ವೈರಲ್ ಆಗಿದೆ.  

ಇದನ್ನೂ ಓದಿ: ಹೈಕಮಿಶನ್ ಕಚೇರಿಗೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ ಹೋಗಿದ್ದೇಕೆ?

ಟೀಂ ಇಂಡಿಯಾ ಕ್ರಿಕೆಟಿಗರ ಪ್ರವಾಸದಲ್ಲಿ ಅನುಷ್ಕಾ ಫೋಟೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಭಾರತೀಯ ಹೈಕಮೀಶನ್ ಕಚೇರಿಗೆ ಭೇಟಿ ನೀಡಿತ್ತು. ಈ ವೇಳೆ ನಾಯಕ ಕೊಹ್ಲಿ ಜೊತೆ ಅನುಷ್ಕಾ ಕೂಡ ತೆರಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಬಿಸಿಸಿಐಗೂ ಕೂಡ ಸ್ಪಷ್ಟನೆ ನೀಡಿತು.

ಇದನ್ನೂ ಓದಿ: ಟೀಂ ಇಂಡಿಯಾ ಜೊತೆಗಿನ ಫೋಟೋ ವಿವಾದ-ಮೌನ ಮುರಿದ ಅನುಷ್ಕಾ