ಹೊಸ ವರ್ಷವನ್ನ ಟೀಂ ಇಂಡಿಯಾ ಕ್ರಿಕೆಟಿಗರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಜೊತೆ ಆಚರಿಸಿದ್ದಾರೆ. ಪ್ರಧಾನಿ ಅವರ ಕಿರಿಬಿಲ್ಲಿ ಹೌಸ್‌ನಲ್ಲಿ ಟೀಂ ಇಂಡಿಯಾ ಸಂಭ್ರಮಾಚರಣೆ ಹೇಗಿತ್ತು? ಇಲ್ಲಿದೆ. 

ಸಿಡ್ನಿ(ಜ.02): ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿರುವ ಟೀಂ ಇಂಡಿಯಾ, ಇದೀಗ 4ನೇ ಹಾಗೂ ಅಂತಿಮ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಹೊಸ ವರ್ಷ ಸಂಭ್ರಮಾಚರಣೆ ವೇಳೆ ರಿಲಾಕ್ಸ್ ಮೂಡ್‌ಗೆ ಜಾರಿದ್ದ ಕೊಹ್ಲಿ ಸೈನ್ಯ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರನ್ನ ಭೇಟಿ ಮಾಡಿತು.

ಇದನ್ನೂ ಓದಿ: ಟಿ20 ವಿಶ್ವಕಪ್ 2020: ಭಾರತ, ಪಾಕಿಸ್ತಾನ ಸೂಪರ್ 12ಗೆ ನೇರ ಎಂಟ್ರಿ!

ಪ್ರಧಾನಿ ಮಾರಿಸನ್ ಅವರ ಕಿರಿಬಿಲ್ಲಿ ಹೌಸ್‌ಗೆ ಭೇಟಿ ನೀಡಿದ ಟೀಂ ಇಂಡಿಯಾ ಹೊಸ ವರ್ಷ ಆಚರಿಸಿದರು. ಭಾರತ ಹಾಗೂ ಆಸ್ಟ್ರೇಲಿಯಾ ತಂಡವನ್ನ ಹೊಸ ವರ್ಷದ ಅಂಗವಾಗಿ ಮಾರಿಸನ್ ಅವರೇ ಆಹ್ವಾನಿಸಿದ್ದರು. 

Scroll to load tweet…

ಕೊಹ್ಲಿ ಮತ್ತು ಆಸಿಸ್ ನಾಯಕ ಟಿಮ್ ಪೈನ್, ಪ್ರಧಾನಿಯವರೊಂದಿಗೆ ಫೋಟೋ ತೆಗೆಸಿಕೊಂಡರು. ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಪತ್ನಿಯೊಂದಿಗೆ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಫೋಟೋ ಭಾರಿ ವೈರಲ್ ಆಗಿದೆ.