ಮುಂಬೈ(ಆ.13): ಲಾರ್ಡ್ಸ್ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಶುರುವಾದ ಟೀಕೆ ಪಂದ್ಯ ಮುಗಿದರೂ ನಿಂತಿಲ್ಲ. ಪಂದ್ಯಕ್ಕೂ ಮುನ್ನ ಅನುಷ್ಕಾ ಶರ್ಮಾ ಟೀಕೆಗೆ ಗುರಿಯಾದರೆ, ಪಂದ್ಯದ ಬಳಿಕ ಸಂಪೂರ್ಣ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಟೆಸ್ಟ್ ಆರಂಭಕ್ಕೂ ಟೀಂ ಇಂಡಿಯಾ ಜೊತೆ, ಭಾರತೀಯ ಹೈಕಮಿಶನ್ ಕಚೇರಿಗೆ ತೆರಳಿದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಹೈಕಮಿಶನ್ ಕಚೇರಿಗೆ ಟೀಂ ಇಂಡಿಯಾ ಭೇಟಿ ಅನ್ನೋ ಬರಹದಡಿ ಬಿಸಿಸಿಐ ಫೋಟೋ ಅಪ್‌ಲೋಡ್ ಮಾಡಿತ್ತು. 

ಈ ಫೋಟೋದಲ್ಲಿ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ ಕೂಡ ಕಾಣಿಸಿಕೊಂಡಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಇಷ್ಟು ದಿನ ಮೌನವಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೀಗ ವಿವಾದದ ಕುರಿತು ಮಾತನಾಡಿದ್ದಾರೆ.

ಫೋಟೋ ವಿವಾದ ಕುರಿತು  ಬಿಸಿಸಿಐ ಸ್ಪಷ್ಟನೆ ನೀಡಿದೆ. ಹೀಗಾಗಿ ಈ ಕುರಿತು ನಾನು ಪ್ರತಿಕ್ರಿಯೆ ನೀಡೋದಿಲ್ಲ. ಇಷ್ಟೇ ಅಲ್ಲ ಇದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವವರ ಕಾರ್ಯ. ಹೀಗಾಗಿ ನಾನು ಇಂತಹ ಟ್ರೋಲ್‌ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಸುಯಿ ಧಾಗ ಚಿತ್ರದ ಪ್ರಮೋಶನ್ ವೇಳೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.