Asianet Suvarna News Asianet Suvarna News

ಧೋನಿ ಭವಿಷ್ಯದ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬನ್ನಿ: ಕುಂಬ್ಳೆ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿಯ ಭವಿಷ್ಯದ ಬಗ್ಗೆ ಆಯ್ಕೆ ಸಮಿತಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು. ಹಾಗೆಯೇ ಒಂದು ವೇಳೆ ಧೋನಿ ನಿವೃತ್ತಿ ಬಯಸಿದರೆ, ಸೂಕ್ತ ಬೀಳ್ಕೊಡುಗೆ ನೀಡಬೇಕು ಎಂದು ಕನ್ನಡಿಗ ಅನಿಲ್ ಕುಂಬ್ಳೆ ಅಭಿಪ್ರಾಯಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Team India Selectors need to have discussion with MS Dhoni about his future says former Captain Anil Kumble
Author
New Delhi, First Published Sep 9, 2019, 1:32 PM IST

ನವದೆಹಲಿ[ಸೆ.09]: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ನಿವೃತ್ತಿ ವಿಚಾರದಲ್ಲಿ ರಾಷ್ಟ್ರೀಯ ಆಯ್ಕೆಗಾರರಿಗೆ ಅನಿಲ್ ಕುಂಬ್ಳೆ ಸಲಹೆ ನೀಡಿದ್ದು, ಅವರೊಂದಿಗೆ ಚರ್ಚಿಸಿ ಭವಿಷ್ಯದ ಬಗ್ಗೆ ಸರಿಯಾದ ನಿರ್ಧಾರಕ್ಕೆ ಬನ್ನಿ ಎಂದು ಹೇಳಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!

‘ಒಂದು ವೇಳೆ ಧೋನಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಬಯಸಿದ್ದಲ್ಲಿ, ಆಯ್ಕೆಗಾರರು ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲವೇ 2020ರ ಟಿ20 ಟೂರ್ನಿಯವರೆಗೂ ಧೋನಿ ಮುಂದುವರೆಯುತ್ತಾರೆ ಎನ್ನುವುದಾದರೆ, ಈಗಿನಿಂದಲೇ ಎಲ್ಲಾ ಪಂದ್ಯದಲ್ಲೂ ಧೋನಿಗೆ ಆಡಲು ಅವಕಾಶ ನೀಡಬೇಕು ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. 

ಇನ್ಸುಲಿನ್ ಶೃಂಗಸಭೆ : ಡಯಾಬಿಟೀಸ್ ಆರೈಕೆ ಬಗ್ಗೆ ಕುಂಬ್ಳೆ ಬ್ಯಾಟಿಂಗ್

ರಿಷಭ್ ಪಂತ್ ಟಿ20 ಕ್ರಿಕೆಟ್’ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೆಲವೊಮ್ಮೆ ಪಂತ್ ಅಸ್ಥಿರ ಪ್ರದರ್ಶನ ಕೂಡಾ ನೀಡುತ್ತಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಆಯ್ಕೆಗಾರರು ಸೂಕ್ತ ನಿರ್ಧಾರಕ್ಕೆ ಬರಬೇಕಿದೆ. ಒಂದು ವೇಳೆ ಧೋನಿ ನಿವೃತ್ತಿ ಪಡೆಯಲು ಬಯಸಿದರೆ, ಸೂಕ್ತ ಬೀಳ್ಕೊಡುಗೆ ನೀಡಿ ಎಂದು ಕುಂಬ್ಳೆ ಹೇಳಿದ್ದಾರೆ.

ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್’ಗಳ ಸರಣಿಯಿಂದ ವಿಶ್ರಾಂತಿ ಬಯಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೂ ಧೋನಿ ಹೊರಗುಳಿದ್ದಿದ್ದಾರೆ. ವಿಶ್ವಕಪ್ ಮುಗಿದ ಬಳಿಕ ಧೋನಿ ನಿವೃತ್ತಿ ಬಗ್ಗೆ ಹಲವಾರು ಗಾಳಿಸುದ್ದಿಗಳು ಹರಿದಾಡಿದ್ದವು. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು, ಧೋನಿ ಅಲ್ಲಿಯವರೆಗೂ ಟೀಂ ಇಂಡಿಯಾ ಪ್ರತಿನಿಧಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. 
 

Follow Us:
Download App:
  • android
  • ios