ಕಿಂಗ್ಸ್‌ಸ್ಟನ್(ಸೆ.02): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ರಿಷಬ್ ಪಂತ್, ವಿಂಡೀಸ್‌ನ ಕ್ರೈಗ್ ಬ್ರಾಥ್ವೈಟ್ ಕ್ಯಾಚ್ ಹಿಡಿಯೋ ಮೂಲಕ 50 ಬ್ಯಾಟ್ಸ್‌ಮನ್ ಬಲಿ ಪಡೆದ ಸಾಧನೆ ಮಾಡಿದರು. ಈ ಮೂಲಕ ಮಾಜಿ ಕ್ರಿಕೆಟಿಗ, ಎಂ.ಎಸ್.ಧೋನಿ ದಾಖಲೆಯನ್ನು ಮುರಿದರು.

ಇದನ್ನೂ ಓದಿ: ಕಿಂಗ್ಸ್‌ಟನ್ ಟೆಸ್ಟ್: ಭಾರತದ ಬಿಗಿ ಹಿಡಿತದಲ್ಲಿ ಕೆರಿಬಿಯನ್ನರು

ರಿಷಬ್ ಪಂತ್ ಅತೀ ವೇಗವಾಗಿ  11 ಟೆಸ್ಟ್ ಪಂದ್ಯಗಳಲ್ಲಿ 50 ಬ್ಯಾಟ್ಸ್‌ಮನ್‌ಗಳನ್ನು ಬಲಿಪಡೆದ ಭಾರತದ ಕೀಪರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಎಂ.ಎಸ್.ಧೋನಿ 15 ಟೆಸ್ಟ್ ಪಂದ್ಯದಳಲ್ಲಿ ಈ ಸಾಧನೆ ಮಾಡಿದ್ದರು. ಭಾರತದ ಪರ ಕಡಿಮೆ ಪಂದ್ಯಗಳಲ್ಲಿ 50 ವಿಕೆಟ್ ಕಬಳಿಸಿದ ವಿಕೆಟ್ ಕೀಪರ್ ಅನ್ನೋ ದಾಖಲೆಗೆ ರಿಷಬ್ ಪಂತ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಭಜ್ಜಿ to ಬುಮ್ರಾ; 3 ಭಾರತೀಯರ ಹ್ಯಾಟ್ರಿಕ್ ವಿಕೆಟ್ ವಿಡಿಯೋ!

ವೆಸ್ಟ್ ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಹಿಗಿ ಹಿಡಿತ ಸಾಧಿಸಿದೆ. ವೆಸ್ಟ್ ಇಂಡೀಸ್ ಗೆಲುವಿಗೆ 468 ರನ್ ಟಾರ್ಗೆಟ್ ನೀಡಿದೆ. ಬೃಹತ್ ಗುರಿ ಪಡೆದಿರುವ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 45 ರನ್ ಸಿಡಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ, ಇದೀಗ 2ನೇ ಪಂದ್ಯಲ್ಲೂ ಗೆದ್ದು ಸರಣಿ ವೈಟ್ ವಾಶ್ ಮಾಡಲು ಮುಂದಾಗಿದೆ.