ಮುಂಬೈ(ಆ.29): ಸೌತ್ ಆಫ್ರಿಕಾ ವಿರುದ್ಧ  ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಸೆಪ್ಟೆಂಬರ್ 15 ರಿಂದ ಆರಂಭಗೊಳ್ಳಲಿರುವ ಈ ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಭುವನೇಶ್ವರ್ ಕುಮಾರ್ ಬದಲು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಎಂ.ಎಸ್.ಧೋನಿ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

 

ಭಾರತ-ಸೌತ್ ಆಫ್ರಿಕಾ ಟಿ20 ಸರಣಿ:
ಸೆಪ್ಟೆಂಬರ್ 15; 1ನೇ ಟಿ20: ಧರ್ಮಶಾಲಾ
ಸೆಪ್ಟೆಂಬರ್ 18; 2ನೇ ಟಿ20: ಮೊಹಾಲಿ
ಸೆಪ್ಟೆಂಬರ್ 22; 3ನೇ ಟಿ20: ಬೆಂಗಳೂರು