ಮುಂಬೈ: 2019ರ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿವಿಸಿದೆ. ನ್ಯೂಜಿಲೆಂಡ್ ಈಗಾಗಲೇ 15 ಸದಸ್ಯರ ತಂಡ ಪ್ರಕಟಿಸಿದೆ.  ಏಪ್ರಿಲ್ 18ರೊಳಗೆ ಬಿಸಿಸಿಐ ಟೀಂ ಇಂಡಿಯವನ್ನು ಪ್ರಕಟಿಸಲಿದೆ. ಇದೀಗ ವಿಶ್ವಕಪ್ ಟೂರ್ನಿಗೆ ಭಾರತ ತಂಡದ 15 ಸದಸ್ಯರ ತಂಡ ಬಹುತೇಕ ಪೂರ್ಣಗೊಂಡಿದೆ. ಕೇವಲ ನಾಲ್ಕನೇ ಕ್ರಮಾಂಕದ ಆಯ್ಕೆಯಲ್ಲಿ ಬಿಸಿಸಿಐ ಕಾದು ನೋಡುವ ತಂತ್ರ ಅನುಸರಿಸಿದೆ. 

ಇದನ್ನೂ ಓದಿ: ವಿಶ್ವಕಪ್ 2019: ಟಿಕೆಟ್ ಮಾರಾಟ ದಿನಾಂಕ ಬಹಿರಂಗ ಪಡಿಸಿದ ICC

ನಾಲ್ಕನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಕಳಪೆ ಪ್ರದರ್ಶನ ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಕೆಎಲ್ ರಾಹುಲ್, ಮನೀಶ್ ಪಾಂಡೆ, ಅಜಿಂಕ್ಯ ರಹಾನೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅದೃಷ್ಠ ಯಾರಿಗಿದೆ ಅನ್ನೋದು ಶೀಘ್ರದಲ್ಲೇ  ಬಹಿರಂಗವಾಗಲಿದೆ. ಸದ್ಯ ವಿಶ್ವಕಪ್ ಟೂರ್ನಿಗಾಗಿ 15 ಸದಸ್ಯರ ಸಂಭವನೀಯ ಭಾರತ ತಂಡ ಇಲ್ಲಿದೆ.

ಇದನ್ನೂ ಓದಿ: ಅಂಬಾಟಿ ಇಲ್ಲ, ರಾಹುಲ್ ಅಲ್ಲ- 4ನೇ ಸ್ಥಾನಕ್ಕೆ ದಾದ ಸೂಚಿಸಿದ್ರು ಹೊಸ ಹೆಸ್ರು!

ಟೀಂ ಇಂಡಿಯಾ ಸಂಭವನೀಯ ತಂಡ:

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ವಿಜಯ್ ಶಂಕರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚೆಹಾಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ