Asianet Suvarna News Asianet Suvarna News

ವಿಶ್ವಕಪ್ 2019: ಟಿಕೆಟ್ ಮಾರಾಟ ದಿನಾಂಕ ಬಹಿರಂಗ ಪಡಿಸಿದ ICC

ವಿಶ್ವಕಪ್ ಟೂರ್ನಿ ಮಾರ್ಚ್ 30 ರಿಂದ ಆರಂಭಗೊಳ್ಳಲಿದೆ. ಇದೀಗ ಐಸಿಸಿ ಟಿಕೆಟ್ ಮಾರಾಟ ದಿನಾಂಕ ಬಹಿರಂಗ ಪಡಿಸಿದೆ. ವಿಶೇಷ ಅಂದರೆ ಜೂನ್ 16 ರ ಇಂಡೋ-ಪಾಕ್ ಪಂದ್ಯಕ್ಕೆ ಗರಿಷ್ಠ ಬೇಡಿಕೆ ಇದೆ.

ICC Confirm World cup 2019 ticket will go on sale from 21 march
Author
Bengaluru, First Published Mar 19, 2019, 9:44 PM IST

ದುಬೈ(ಮಾ.19): 12ನೇ ಆವೃತ್ತಿ ಐಪಿಎಲ್ ಕ್ರಿಕೆಟ್ ಮುಗಿದ ಬೆನ್ನಲ್ಲೇ, ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಮಾ.30 ರಿಂದ ವಿಶ್ವಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಯಲಿದೆ. ಇದೀಗ ಐಸಿಸಿ, ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ದಿನಾಂಕವನ್ನು ಬಹಿರಂಗ ಪಡಿಸಿದೆ.  

ಇದನ್ನೂ ಓದಿ: ಅಂಬಾಟಿ ಇಲ್ಲ, ರಾಹುಲ್ ಅಲ್ಲ- 4ನೇ ಸ್ಥಾನಕ್ಕೆ ದಾದ ಸೂಚಿಸಿದ್ರು ಹೊಸ ಹೆಸ್ರು!

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿ ಪಂದ್ಯ ಟಿಕೆಟ್ ಮಾರಾಟ ಮಾರ್ಚ್ 21 ರಿಂದ ಆರಂಭವಾಗಲಿದೆ ಎಂದು ಐಸಿಸಿ ಹೇಳಿದೆ. ಲೀಗ್‌ನಿಂದ ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳ ಟಿಕೆಟ್ ಮಾರಾಟ ಆರಂಭಗೊಳ್ಳಲಿದೆ. ಎಲ್ಲಾ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಒಟ್ಟು 8 ಲಕ್ಷ ಟಿಕೆಟ್‌ಗಾಗಿ 30 ಲಕ್ಷ ಕ್ರಿಕೆಟ್ ಅಭಿಮಾನಿಗಳು ಬೇಡಿಕೆ ಸಲ್ಲಿಸಿದ್ದಾರೆ ಎಂದು ಐಸಿಸಿ ಹೇಳಿದೆ. 

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಪ್ರಕಟಿಸಿದ ಅನಿಲ್ ಕುಂಬ್ಳೆ!

ಜೂನ್ 16 ರ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ಟಿಕೆಟ್‌ಗಾಗಿ ಭಾರಿ ಬೇಡಿಕೆ ಇದೆ. ಮ್ಯಾಂಚೆಸ್ಟ್‌ನಲ್ಲಿ ನಡೆಯಲಿರುವ ಈ ಪಂದ್ಯ ವೀಕ್ಷಿಸಲು 25,000 ಸೀಟಿನ ವ್ಯವಸ್ಥೆ ಇದೆ. ಆದರೆ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಟಿಕೆಟ್ ಬೇಡಿಕೆ ಸಲ್ಲಿಸಿದ್ದಾರೆ ಎಂದು ಐಸಿಸಿ ಹೇಳಿದೆ.  

Follow Us:
Download App:
  • android
  • ios