ಅಂಬಾಟಿ ಇಲ್ಲ, ರಾಹುಲ್ ಅಲ್ಲ- 4ನೇ ಸ್ಥಾನಕ್ಕೆ ದಾದ ಸೂಚಿಸಿದ್ರು ಹೊಸ ಹೆಸ್ರು!
ವಿಶ್ವಕಪ್ ಟೂರ್ನಿಗೆ ತಂಡ ಆಯ್ಕೆ ಮಾಡುತ್ತಿರುವ ಬಿಸಿಸಿಐಗೆ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ. ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ಹೊಸ ಆಟಗಾರನ ಹೆಸರು ಸೂಚಿಸಿದ್ದಾರೆ. ದಾದಾ ಸೂಚಿಸಿದ ಹೊಸ ಆಟಗಾರ ಯಾರು?
ದೆಹಲಿ(ಮಾ.17): 12ನೇ ಆವೃತ್ತಿ ಐಪಿಎಲ್ ತಯಾರಿ ನಡುವೆ ವಿಶ್ವಕಪ್ ಟೂರ್ನಿ ತಯಾರಿ ಕೂಡ ನಡೆಯುತ್ತಿದೆ. ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್ ತಂಡ ಆಯ್ಕೆ ಮಾಡಲು ಕಸರತ್ತು ನಡೆಸುತ್ತಿದ್ದರೆ, ಇತ್ತ ಕ್ರಿಕೆಟಿಗರು ಅಭ್ಯಾಸ ಶುರು ಮಾಡಿದ್ದಾರೆ. ಇದೀಗ ಮಾಜಿ ನಾಯಕ ಸೌರವ್ ಗಂಗೂಲಿ ಟೀಂ ಇಂಡಿಯಾದ 4ನೇ ಕ್ರಮಾಂಕಕ್ಕೆ ಹೊಸ ಹೆಸರು ಸೂಚಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಪ್ರಕಟಿಸಿದ ಅನಿಲ್ ಕುಂಬ್ಳೆ!
ಆಸ್ಟ್ರೇಲಿಯಾ ಸರಣಿ ಬಳಿಕ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಒಂದು ಸ್ಥಾನ ಖಾಲಿ ಇದೆ ಎಂದಿದ್ದರು. ಈ ಮೂಲಕ 4ನೇ ಕ್ರಮಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಸೂಚ್ಯವಾಗಿ ಹೇಳಿದ್ದರು. ಇದೀಗ ಈ ನಾಲ್ಕನೇ ಕ್ರಮಾಂಕ್ಕೆ ಗಂಗೂಲಿ, ಅಂಬಾಟಿ ರಾಯುಡು, ಕೆಎಲ್ ರಾಹುಲ್, ಮನೀಶ್ ಪಾಂಡೆ ಬದಲು ಚೇತೇಶ್ವರ್ ಪೂಜಾರ ಹೆಸರನ್ನು ಸೂಚಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ತಯಾರಿ ಬೆನ್ನಲ್ಲೇ ಭಾರತಕ್ಕೆ ಆಘಾತ- ಪ್ರಮುಖ ವೇಗಿ ಮೇಲೆ ಚಾರ್ಜ್‌ಶೀಟ್!
ನನ್ನ ಸಲಹೆ ಹಲವರಿಗೆ ನಗು ತರಿಸಬಹುದು. ಕೆಲವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗದೇ ಇರಬಹುದು. ಆದರೆ ನನ್ನ ಸಲಹೆ 4ನೇ ಕ್ರಮಾಂಕಕ್ಕೆ ಚೇತೇಶ್ವರ್ ಪೂಜಾರ ಉತ್ತಮ ಆಯ್ಕೆ ಎಂದಿದ್ದಾರೆ. ಚೇತೇಶ್ವರ್ ಪೂಜಾರ ಅಂತಿಮ ಏಕದಿನ ಪಂದ್ಯವಾಡಿದ್ದು 2014ರಲ್ಲಿ. ಇದುವರೆಗೆ 5 ಏಕದಿನ ಪಂದ್ಯ ಆಡಿರುವ ಪೂಜಾರ 51 ರನ್ ಕಲೆಹಾಕಿದ್ದಾರೆ.