ಬೆಂಗಳೂರು(ಸೆ.06): ವೆಸ್ಟ್ ಇಂಡೀಸ್ ವಿರುದ್ಧದ ಯಶಸ್ವಿ ಪ್ರವಾಸದ ಬಳಿಕ ಟೀಂ ಇಂಡಿಯಾ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಸಜ್ಜಾಗುತ್ತಿದೆ. ವಿಂಡೀಸ್ ಪ್ರವಾಸ ಹಲವು ಯುವ ಕ್ರಿಕಟಿಗರಿಗೆ ಅತ್ಯುತ್ತಮ ವೇದಿಕೆ ಕಲ್ವಿಸಿತ್ತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಯುವ ವೇಗಿ ದೀಪಕ್ ಚಹಾರ್ ಟೀಂ ಇಂಡಿಯಾದ ಭರವಸೆಯ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ವಿಂಡೀಸ್ ಟಿ20 ಸರಣಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ದೀಪಕ್ ಚಹಾರ್ ಇದೀಗ ಸೌತ್ ಆಫ್ರಿಕಾ ವಿರುದ್ಧವೂ ಅಬ್ಬರಿಸೋ ವಿಶ್ವಾಸದಲ್ಲಿದ್ದಾರೆ. ಹರಿಗಣಳ ವಿರುದ್ಧದ ಸರಣಿಗೂ ಮುನ್ನ ಸುವರ್ಣನ್ಯೂಸ್.ಕಾಂ ಸೋದರ ಸಂಸ್ಥೆ ಮೈನೇಶನ್.ಕಾಂ ದೀಪಕ್ ಚಹಾರ್ ಜೊತೆ ಸಂದರ್ಶನ ನಡೆಸಿತು. ಸಂದರ್ಶದ ಆಯ್ದ ಭಾಗ ಇಲ್ಲಿವೆ.

ಇದನ್ನೂ ಓದಿ: ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕೆ ಹೀಗೆ?

ಮೈನೇಶನ್(ಪ್ರಶ್ನೆ 1): ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ, ಅದರಲ್ಲೂ 3ನೇ ಪಂದ್ಯದಲ್ಲಿ 4ರನ್ ನೀಡಿ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದೀರಿ. ಈ ಅನುಭವ ಹೇಗಿತ್ತು?
ದೀಪಕ್: ಅನುಭವ ಅತ್ಯುತ್ತಮವಾಗಿತ್ತು. ಟೀಂ ಇಂಡಿಯಾ ಪರ ಆಡಬೇಕು, ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಳ್ಳಬೇಕು ಅನ್ನೋದು ಎಲ್ಲಾ ಯುವ ಕ್ರಿಕೆಟಿಗರ ಕನಸು. ನಾನು ಆಡಿದ 2ನೇ ಟಿ20 ಪಂದ್ಯದಲ್ಲೇ ನನಗೆ ಪ್ರಶಸ್ತಿ ಸಿಕ್ಕಿತ್ತು. ಅದು ನನ್ನ ಮೊದಲ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್. ನನ್ನ ಪಾಲಿಗೆ ಇದು ಅತೀ ದೊಡ್ಡ ಸಾಧನೆಯಾಗಿದೆ. ಇದೇ ಪ್ರದರ್ಶವನ್ನು ಮುಂದುವರಿಸುತ್ತೇನೆ. ಎಲ್ಲಾ ಪಂದ್ಯಗಳಲ್ಲಿ ಇದೇ ರೀತಿ ಪ್ರದರ್ಶನ ನೀಡುವುದು ಕಷ್ಟ. ಆದರೆ ಖಂಡಿತ ಪ್ರಯತ್ನ ಮಾಡುತ್ತೇನೆ.

ಇದನ್ನೂ ಓದಿ: ಸೆ.15 ರಿಂದ ಭಾರತ-ಸೌತ್ಆಫ್ರಿಕಾ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಮೈನೇಶನ್(ಪ್ರಶ್ನೆ 2): ಭುವಿ ಜೊತೆ ಹೊಸ ಬಾಲ್‌ನಲ್ಲಿ ಪ್ರಭುತ್ವ ಸಾಧಿಸೋ ಕಲೆ ದೀಪಕ್‌ಗೆ ತಿಳಿದಿದೆ ಎಂದು  ನಾಯಕ ವಿರಾಟ್ ಕೊಹ್ಲಿ ನಿಮ್ಮ ಪ್ರದರ್ಶನವನ್ನು ಕೊಂಡಿದ್ದರು. ಕೊಹ್ಲಿ ಮಾತುಗಳು ನಿಮಗೆ ಯಾವ ರೀತಿ ಸ್ಫೂರ್ತಿ ನೀಡಿತು?
ದೀಪಕ್: ನಿಜಕ್ಕೂ ನಾಯಕ ನನ್ನ ಪ್ರದರ್ಶನವನ್ನು ಕೊಂಡಾಡಿರುವುದು ಸಂತಸವಾಗಿದೆ. ನನ್ನ ಬೆಂಬಲಕ್ಕೆ ನಾಯಕ ನಿಂತಿರುವುದು ಭಾಗ್ಯ. ಐಪಿಎಲ್‌ನಲ್ಲಿ ಧೋನಿ ನನ್ನನ್ನು ಬೆಂಬಲಿಸಿದ್ದಾರೆ. ಇದೀಗ ಕೊಹ್ಲಿ ಕೂಡ ಸಪೂರ್ಟ್‌ಗೆ ನಿಂತಿದ್ದಾರೆ. ಟೀಂ ಇಂಡಿಯಾಗಾಗಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲಿಸಿಕೊಟ್ಟರೆ, ಹೆಚ್ಚಿನ ಅವಕಾಶ ಸಿಗಲಿದೆ. ನಾಯಕ ಹಾಗೂ ತಂಡದ ವಿಶ್ವಾಸಗಳಿಸಲು ನಾನು ಉತ್ತಮ ಪ್ರದರ್ಶನ ನೀಡಬೇಕು. ಇದು ಒಂದೆರಡು ಪಂದ್ಯದಿಂದ ಸಾಧ್ಯವಿಲ್ಲ.

ಇದನ್ನೂ ಓದಿ:  ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ಯಾರಿಗೆ ಸ್ಥಾನ?

ಮೈನೇಶನ್(ಪ್ರಶ್ನೆ 3): ಹೊಸ ಬಾಲ್ ನೀಡುವುದಕ್ಕೂ ಮೊದಲು ನಾಯಕ ಕೊಹ್ಲಿ ನಿಮ್ಮಲ್ಲಿ ಹೇಳಿದ್ದೇನು?
ದೀಪಕ್: ನನಗೆ ಹೊಸ ಬಾಲ್ ನೀಡುತ್ತಾರೆ ಅನ್ನೋ ಕಲ್ಪನೆಯೇ ಇರಲಿಲ್ಲ. ಕಾರಣ ಅದಕ್ಕೂ ಹಿಂದಿನ ಪಂದ್ಯದಲ್ಲಿ ಸ್ಪಿನ್ ಮೂಲಕ(ವಾಶಿಂಗ್ಟನ್ ಸುಂದರ್) ಪಂದ್ಯ ಆರಂಭಿಸಿದ್ದೇವು. ಆದರೆ ಪಂದ್ಯದ 2ನೇ ಓವರ್ ಹಾಕಲು ಕೊಹ್ಲಿ ಹೇಳಿದಾಗ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಕಾರಣ ಕಂಡೀಷನ್ ನನ್ನ ಕೌಶಲ್ಯಕ್ಕೆ ಪೂರಕವಾಗಿತ್ತು. ಇದು ಪರಿಣಾಮಕಾರಿಯಾಯಿತು. ಇದರಿಂದ ನನಗೂ ತಂಡಕ್ಕೂ ಸಹಕಾರಿಯಾಯಿತು. 

ಮೈನೇಶನ್(ಪ್ರಶ್ನೆ 4): ಯಶಸ್ವಿ ವಿಂಡೀಸ್ ಸರಣಿ ಬಳಿಕ ಇದೀಗ ನೀವು ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿದ್ದೀರಿ. ನಿಮ್ಮ ಅಭ್ಯಾಸ, ತಯಾರಿ ಹೇಗಿದೆ?
ದೀಪಕ್:
ಸೌತ್ ಆಫ್ರಿಕಾ ವಿರುದ್ಧದ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ ನನಗೂ ಮಹತ್ವದ ಸರಣಿ. ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಹೀಗಾಗಿ ಅವಕಾಶಗಳು ಸಿಗಲಿದೆ ಅನ್ನೋ ವಿಶ್ವಾಸವಿತ್ತು. ನಾನು ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ನನ್ನ ಸ್ಥಾನ ಭದ್ರಪಡಿಸಿಬೇಕು. ನಾನು ಸೌತ್ ಆಫ್ರಿಕಾ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಸೌತ್ ಆಫ್ರಿಕಾ ವಿರುದ್ಧದ ನಾನು ಎ ಸರಣಿ ಆಡಿದ್ದೇನೆ.  ಸೌತ್ ಆಫ್ರಿಕಾ ಎ ತಂಡದಲ್ಲಿದ್ದ ಹಲವರು ಇದೀಗ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ನನಹೆ ಹೆಚ್ಚಿನ ಸಹಾಯವಾಗಲಿದೆ. ನಾನು ರಾಜಸ್ಥಾನ ಜೊತೆ ಅಭ್ಯಾಸ ಪಂದ್ಯ ಆಡುತ್ತೇನೆ. ಉತ್ತಮ ಅಭ್ಯಾಸ ಮಾಡಿದರೆ, ಪಂದ್ಯದಲ್ಲಿ ಯಶಸ್ಸು ಸಾಧಿಸಬಹುದು.

ಇದನ್ನೂ ಓದಿ:  ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

ಮೈನೇಶನ್(ಪ್ರಶ್ನೆ 5): ಸೌತ್ ಆಫ್ರಿಕಾ ಟಿ20 ತಂಡಕ್ಕೀಗ ಕ್ವಿಂಟನ್ ಡಿಕಾಕ್ ನಾಯಕ. ಇನ್ನಿಂಗ್ಸ್ ಆರಂಭದಲ್ಲೇ ಡಿಕಾಕ್‌ಗೆ ಬೌಲಿಂಗ್ ಮಾಡುದು  ಎಷ್ಟರ ಮಟ್ಟಿಗೆ ಸವಾಲು?
ದೀಪಕ್:
ಕ್ವಿಂಟನ್ ಡಿಕಾಕ್ ಸ್ಫೋಟಕ ಬ್ಯಾಟ್ಸ್‌ಮನ್, ಇದೀಗ ನಾಯಕರಾಗಿ ಬಡ್ತಿ ಪಡೆದಿದ್ದಾರೆ. ಈಗ ಡಿಕಾಕ್ ಹೆಚ್ಚು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾಗುತ್ತಾರೆ. ಐಪಿಎಲ್ ಟೂರ್ನಿಯಲ್ಲಿ 7 ರಿಂದ 8 ಪಂದ್ಯದಲ್ಲಿ ಡಿಕಾಕ್‌ಗೆ ಬೌಲಿಂಗ್ ಮಾಡಿದ್ದೇನೆ. ನನ್ನ ಅನುಭವಗಳನ್ನು ಉಪಯೋಗಿ ಬೌಲಿಂಗ್  ಮಾಡುತ್ತೇನೆ.

ಮೈನೇಶನ್(ಪ್ರಶ್ನೆ 6): ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡೋ ಗುರಿ ಇಟ್ಟುಕೊಂಡಿದ್ದೀರಾ?
ದೀಪಕ್:
ಪ್ರತಿಯೊಬ್ಬ ಆಟಗಾರನಿಗೂ ವಿಶ್ವಕಪ್ ಆಡೋ ಗುರಿ ಇಟ್ಟುಕೊಂಡಿರುತ್ತಾರೆ. ಸದ್ಯ ನನ್ನ ಗುರಿ ಪ್ರತಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವುದು. ಟಿ20 ವಿಶ್ವಕಪ್ ಹಾಗೂ ಐಪಿಎಲ್ ಟೂರ್ನಿಗೂ ಮುನ್ನ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಸಂಪಾದಿಸಲು ಕನಿಷ್ಠ ಒಂದು ವರ್ಷ ಉತ್ತಮ ಪ್ರದರ್ಶನ ನೀಡಬೇಕು. ವಿಶ್ವಕಪ್ ಕುರಿತು ಚಿಂತಿಸಿದರೆ ಒತ್ತಡ ಹೆಚ್ಚಾಗಲಿದೆ. ನಾನೀಗ ಒಂದೊಂದು ಪಂದ್ಯದ ಬಗ್ಗೆ ಗಮನಹರಿಸುತ್ತೇನೆ. ಪ್ರತಿ ಪಂದ್ಯದಲ್ಲಿ ಶಕ್ತಿ  ಮೀರಿ ಪ್ರಯತ್ನ ಮಾಡುತ್ತೇನೆ. ಸದ್ಯ ನನ್ನ ಗುರಿ ಸೌತ್ ಆಫ್ರಿಕಾ ವಿರುದ್ದದ ಸರಣಿ.

ದೀಪಕ್ ಚಹಾರ್ ಜೊತೆಗಿನ ಸಂದರ್ಶನ ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: