ಸೆ.15 ರಿಂದ ಭಾರತ-ಸೌತ್ಆಫ್ರಿಕಾ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಸೌತ್ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ. ಹರಿಣಗಳ ವಿರುದ್ಧ ಬೆಂಗಳೂರಿನಲ್ಲಿ ಟೀಂ ಇಂಡಿಯಾ ಪಂದ್ಯ ಆಡಲಿದೆ. ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಇಲ್ಲಿದೆ.
ಮುಂಬೈ(ಸೆ.05): ವೆಸ್ಟ್ ಇಂಡೀಸ್ ಪ್ರವಾಸ ಯಶಸ್ವಿಯಾಗಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಸಜ್ಜಾಗಲಿದೆ. ಸೆಪ್ಟೆಂಬರ್ 15 ರಿಂದ ಹರಿಣಗಳ ವಿರುದ್ಧ 3 ಟಿ20 ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆರಂಭವಾಗಲಿದೆ. ತವರಿನಲ್ಲಿ ನಡೆಯುತ್ತಿರುವ ಈ ಸರಣಿಗೆ ಸೌತ್ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ವಿಶೇಷ ಅಂದರೆ ಬೆಂಗಳೂರಿನಲ್ಲೂ ಟಿ20 ಪಂದ್ಯವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಕೆರಿಬಿಯನ್ ಶಿಕಾರಿ: ಕೊಹ್ಲಿ ಪಡೆಗೆ ದಿಗ್ಗಜರೆಲ್ಲರಿಂದ ಶಹಬ್ಬಾಸಗಿರಿ!
ವಿಂಡೀಸ್ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ ಇದೀಗ ಸೌತ್ ಆಫ್ರಿಕಾ ಮೇಲೂ ಸವಾರಿ ಮಾಡಲು ಸಜ್ಜಾಗಿದೆ. 3 ಟಿ20 ಪಂದ್ಯಗಳ ಪೈಕಿ ಸೆಪ್ಟೆಂಬರ್ 22 ರಂದು ನಡೆಯಲಿರುವ ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇನ್ನು ಟೆಸ್ಟ್ ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.
ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!
ಭಾರತ-ಸೌತ್ಆಫ್ರಿಕಾ ಸರಣಿ ವೇಳಾಪಟ್ಟಿ;
ಟಿ20 ಸರಣಿ:
ಸೆ.15: 1ನೇ ಟಿ20; ಧರ್ಮಶಾಲಾ
ಸೆ.18 : 2ನೇ ಟಿ20; ಮೊಹಾಲಿ
ಸೆ.22: 3ನೇ ಟಿ20; ಬೆಂಗಳೂರು
ಟೆಸ್ಟ್ ಸರಣಿ:
ಅ.02 ರಿಂದ ಅ.06: ಮೊದಲ ಟೆಸ್ಟ್ ವಿಶಾಖಪಟ್ಟಣಂ
ಅ.10 ರಿಂದ ಅ.14: ಎರಡನೇ ಟೆಸ್ಟ್; ಪುಣೆ
ಅ.19 ರಿಂದ ಅ.23 ಮೂರನೇ ಟೆಸ್ಟ್ : ರಾಂಚಿ