ಹರ್ಯಾಣ ಕ್ರೀಡಾ ವಿವಿಗೆ ಕಪಿಲ್ ದೇವ್ ಕುಲಪತಿ!
’ಹರ್ಯಾಣದ ಹರಿಕೇನ್’ ಖ್ಯಾತಿಯ ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹರ್ಯಾಣದ ಕ್ರೀಡಾ ವಿಶ್ವ ವಿದ್ಯಾಲಯದ ಮೊದಲ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಚಂಡೀಗಢ(ಸೆ.15): ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹರ್ಯಾಣ ಕ್ರೀಡಾ ವಿಶ್ವ ವಿದ್ಯಾಲಯದ ಮೊದಲ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಹರ್ಯಾಣದ ಕ್ರೀಡಾ ಸಚಿವ ಅನಿಲ್ ವಿಜ್ ಶನಿವಾರ ಟ್ವೀಟರ್‌ನಲ್ಲಿ ಈ ವಿಷಯ ಬಹಿರಂಗಗೊಳಿಸಿದ್ದಾರೆ.
ಕಪಿಲ್ ದೇವ್ ದಾಖಲೆ ಮುರಿಯಲು ಸಜ್ಜಾದ ಇಶಾಂತ್ ಶರ್ಮಾ!
ಸೋನೆಪತ್ನ ರಾಯ್‌ನಲ್ಲಿ ನೂತನ ಕ್ರೀಡಾ ವಿವಿ ಸ್ಥಾಪನೆ ಮಾಡಲಾಗುತ್ತಿದ್ದು, ಭಾರತದಲ್ಲಿ ರಾಜ್ಯ ಸರ್ಕಾರವೊಂದು ಆರಂಭಿಸುತ್ತಿರುವ 3ನೇ ಕ್ರೀಡಾ ವಿಶ್ವ ವಿದ್ಯಾಲಯ ಇದಾಗಿದೆ. ಗುಜರಾತ್ ಹಾಗೂ ತಮಿಳುನಾಡು ಸರ್ಕಾರಗಳು ಈಗಾಗಲೇ ವಿವಿ ಸ್ಥಾಪಿಸಿವೆ.
ಇಂದು ಇಂಡೋ-ಆಫ್ರಿಕಾ ಮೊದಲ ಟಿ20 ಕದನ
ದೈಹಿಕ ಶಿಕ್ಷಣ, ಕ್ರೀಡಾ ವಿಜ್ಞಾನ, ಕ್ರೀಡಾ ತಂತ್ರಜ್ಞಾನ, ಕ್ರೀಡಾ ಔಷಧ, ಕ್ರೀಡಾ ಪತ್ರಿಕೋದ್ಯಮ, ಕ್ರೀಡಾ ಆಡಳಿತ, ಕ್ರೀಡಾ ಮಾರ್ಕೆಂಟಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ ಎಂದು ಅನಿಲ್ ವಿಜ್ ತಿಳಿಸಿದ್ದಾರೆ.