ಕಿಂಗ್ಸ್‌ಸ್ಟನ್(ಆ.29): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಅಂತಿಮ ಕಸರತ್ತು ನಡೆಯುತ್ತಿದೆ. ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲೂ ಗೆಲುವು ಸಾಧಿಸಿದೆ, ಸರಣಿ ವೈಟ್ ವಾಶ್ ಮಾಡೋ ಉತ್ಸಾಹದಲ್ಲಿದೆ. ಇಷ್ಟೇ ಅಲ್ಲ ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಹಲವು ದಾಖಲೆ ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ವೇಗಿ ಇಶಾಂತ್ ಶರ್ಮಾ, ದಿಗ್ಗಜ ವೇಗಿ ಕಪಿಲ್ ದೇವ್ ದಾಖಲೆ ಮುರಿಯಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಅಪ್ಪ ಕಾರ್ಗಿಲ್ ಯುದ್ಧ ಜಯಿಸಿದ ಸೈನಿಕ; ಮಗ ಟೀಂ ಇಂಡಿಯಾ ನಾಯಕ!

ಏಷ್ಯಾದಿಂದ ಹೊರಗಡೆ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಬರೆಯಲು ಇಶಾಂತ್ ಸಜ್ಜಾಗಿದ್ದಾರೆ. ಸದ್ಯ ಇಶಾಂತ್ ಔಟ್‌ಸೈಡ್ ಏಷ್ಯಾದಲ್ಲಿ 155 ವಿಕೆಟ್ ಕಬಳಿಸೋ ಮೂಲಕ ಕಪಿಲ್ ದೇವ್ ದಾಖಲೆ ಸರಿಗಟ್ಟಿದ್ದಾರೆ. 2ನೇ ಪಂದ್ಯದಲ್ಲಿ ಇಶಾಂತ್ 1 ವಿಕೆಟ್ ಕಬಳಿಸಿದರೆ, ಕಪಿಲ್ ದೇವ್ ದಾಖಲೆ ಮುರಿಯಲಿದ್ದಾರೆ. ಈ ಮೂಲಕ  ಏಷ್ಯಾದಿಂದ ಹೊರಗಡೆ ಗರಿಷ್ಠ ವಿಕೆಟ್ ಕಬಳಿಸಿದ ಭಾರತದ ವೇಗಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ: ಭಾರತ ಎ, ಅಂಡರ್-19 ಕೋಚ್ ಸ್ಥಾನಕ್ಕೆ ದ್ರಾವಿಡ್ ಗುಡ್‌ಬೈ; ಹೊಸಬರಿಗೆ ಮಣೆ!

ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಶಾಂತ್ 8 ವಿಕೆಟ್ ಕಬಳಿಸಿದ್ದರು. ಈ ಮೂಲಕ ಭಾರತ 318 ರನ್ ಗೆಲುವು ಸಾಧಿಸಿತ್ತು. ಇಶಾಂತ್ ಶರ್ಮಾ ಒಟ್ಟು 91 ಟೆಸ್ಟ್ ಪಂದ್ಯಗಳಿಂದ 275 ವಿಕೆಟ್ ಉರುಳಿಸಿದ್ದಾರೆ. ಗರಿಷ್ಠ ಟೆಸ್ಟ್ ವಿಕೆಟ್ ಕಬಸಿಸಿದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯ ಬೌಲರ್ಸ್:
ಅನಿಲ್ ಕುಂಬ್ಳೆ = 619 
ಕಪಿಲ್ ದೇವ್ = 434
ಹರ್ಭಜನ್ ಸಿಂಗ್ = 417
ಆರ್ ಅಶ್ವಿನ್ = 342
ಜಹೀರ್ ಖಾನ್ = 311