Asianet Suvarna News Asianet Suvarna News

ಇಂದು ಇಂಡೋ-ಆಫ್ರಿಕಾ ಮೊದಲ ಟಿ20 ಕದನ

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷದ ಟಿ20 ವಿಶ್ವ​ಕಪ್‌ಗೆ ಸಿದ್ಧತೆ ಆರಂಭಿ​ಸಿರುವ ಟೀಂ ಇಂಡಿಯಾ ಇಂದಿನ ಪಂದ್ಯದಿಂದಲೇ ಪ್ರಯೋಗಕ್ಕೆ ಮುಂದಾದರೂ ಅಚ್ಚರಿಯಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

India vs South Africa 1st T20I Cricket Match Preview
Author
Dharamshala, First Published Sep 15, 2019, 11:43 AM IST

ಧರ್ಮ​ಶಾ​ಲಾ(ಸೆ.15): ಬಹುನಿರೀ​ಕ್ಷಿ​ತ ಭಾರತ-ದಕ್ಷಿಣ ಆಫ್ರಿಕಾ ಟಿ20 ಸರ​ಣಿಗೆ ಭಾನು​ವಾರ ಚಾಲನೆ ಸಿಗ​ಲಿದೆ. ಎರಡೂ ತಂಡ​ಗಳು ಮುಂದಿನ ವರ್ಷದ ಟಿ20 ವಿಶ್ವ​ಕಪ್‌ಗೆ ಸಿದ್ಧತೆ ಆರಂಭಿ​ಸ​ಲಿವೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಜಸ್ಪ್ರೀತ್‌ ಬುಮ್ರಾ ಹಾಗೂ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, 2020ರ ಟಿ20 ವಿಶ್ವ​ಕಪ್‌ ತಂಡ​ದಲ್ಲಿ ಇರು​ವುದು ಬಹು​ತೇಕ ಖಚಿತ. ಹೀಗಾಗಿ ಇನ್ನು​ಳಿದ 7 ಸ್ಥಾನ​ಗ​ಳಿಗೆ ಹಾಗೂ 4 ಮೀಸಲು ಆಟ​ಗಾ​ರರ ಸ್ಥಾನಕ್ಕೆ ಭಾರೀ ಪೈಪೋಟಿ ಇದೆ. ಸೂಕ್ತ ಆಟ​ಗಾ​ರರಿಗಾಗಿ ಹುಡು​ಕಾಟ ಇತ್ತೀ​ಚಿನ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲೇ ಆರಂಭಗೊಂಡಿ​ದ್ದರೂ, ಈ ಸರಣಿಯಲ್ಲಿ ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹುಡು​ಕುವ ಯತ್ನ​ವನ್ನು ಭಾರತ ತಂಡದ ಆಡ​ಳಿತ ಮಾಡ​ಲಿದೆ.

ವಿಶ್ವ​ಕಪ್‌ ಸೆಮಿ​ಫೈ​ನಲ್‌ ಸೋಲಿನ ಬಳಿಕ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿ ಭರ್ಜರಿ ಪ್ರದ​ರ್ಶನ ತೋರಿದ ಟೀಂ ಇಂಡಿಯಾ, ತನ್ನ ಗೆಲು​ವಿನ ಓಟ ಮುಂದು​ವ​ರಿ​ಸಲು ಕಾತ​ರಿ​ಸು​ತ್ತಿದೆ. ಆದರೆ ಕಗಿಸೋ ರಬಾಡರ ಪ್ರಚಂಡ ಬೌಲಿಂಗ್‌ ದಾಳಿ, ಇಲ್ಲ​ವೇ ಡೇವಿಡ್‌ ಮಿಲ್ಲರ್‌ರ ವಿಸ್ಫೋ​ಟಕ ಇನ್ನಿಂಗ್ಸ್‌, ಭಾರ​ತೀ​ಯ​ರನ್ನು ಹಳಿ ತಪ್ಪಿ​ಸ​ಬ​ಹುದು. ಹೀಗಾಗಿ, ವಿಂಡೀಸ್‌ ಪ್ರವಾಸಕ್ಕಿಂತ ಕಠಿಣ ಹಾಗೂ ವಿಭಿನ್ನ ಸವಾ​ಲು ಕೊಹ್ಲಿ ಪಡೆಗೆ ಎದು​ರಾ​ಗ​ಲಿದೆ.

ಅಂಡರ್‌ 19 ಏಷ್ಯಾ ಕಪ್‌: ಟೀಂ ಇಂಡಿಯಾಗೆ ಏಷ್ಯಾಕಪ್ ಕಿರೀಟ

2020ರ ಟಿ20 ವಿಶ್ವ​ಕಪ್‌ಗೂ ಮುನ್ನ ಭಾರತಕ್ಕೆ ಅಭ್ಯಾಸ ನಡೆ​ಸಲು 20 ಪಂದ್ಯ​ಗಳು ಸಿಗಲಿವೆ. ಜತೆಗೆ ಐಪಿ​ಎಲ್‌ ಸಹ ಇರ​ಲಿದ್ದು, ಬಲಿಷ್ಠ ತಂಡ ಕಟ್ಟಿ​ಕೊ​ಳ್ಳಲು ಸಮಯವಿದೆ. ಈ ಕಾರಣದಿಂದಲೇ ತಂಡದ ಆಡ​ಳಿತ ಹಲವು ಪ್ರಯೋಗಗಳಿಗೆ ಮುಂದಾ​ಗು​ತ್ತಿದೆ. ಪ್ರಮು​ಖ​ವಾಗಿ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚು ಪ್ರಯೋಗವಾಗು​ತ್ತಿದ್ದು, ಬ್ಯಾಟಿಂಗ್‌ ವಿಭಾಗದಲ್ಲಿ ತಂಡ ಹಳೆ ಮುಖಗಳಿಗೇ ಮಣೆ ಹಾಕು​ತ್ತಿದೆ.

ಬ್ಯಾಟಿಂಗ್‌ ಪಡೆ ಹೇಗಿ​ರ​ಲಿದೆ?: ರೋಹಿತ್‌ ಶರ್ಮಾ ಜತೆ ಶಿಖರ್‌ ಧವನ್‌ ಇಲ್ಲವೇ ಕೆ.ಎಲ್‌.ರಾ​ಹುಲ್‌ಗೆ ಇನ್ನಿಂಗ್ಸ್‌ ಆರಂಭಿ​ಸುವ ಅವ​ಕಾಶ ಸಿಗ​ಲಿದೆ. ಧವನ್‌ ಹಾಗೂ ರಾಹುಲ್‌ ಇಬ್ಬರೂ ಲಯದ ಸಮಸ್ಯೆ ಎದು​ರಿ​ಸು​ತ್ತಿದ್ದು, ಮತ್ತೊಮ್ಮೆ ವೈಫಲ್ಯ ಕಂಡರೆ ಅವರ ಪಾಲಿಗೆ ಇದು ಬಹು​ತೇಕ ಕೊನೆ ಸರಣಿ ಆಗಲಿದೆ. 4ನೇ ಕ್ರಮಾಂಕಕ್ಕೆ ಮನೀಶ್‌ ಪಾಂಡೆ ಹಾಗೂ ಶ್ರೇಯಸ್‌ ಅಯ್ಯರ್‌ ನಡುವೆ ಪೈಪೋಟಿ ಇದೆ. ರಿಷಭ್‌ ಪಂತ್‌ ನಿರೀಕ್ಷೆ ಉಳಿ​ಸಿ​ಕೊ​ಳ್ಳು​ತ್ತಿಲ್ಲ. ಅವ​ರಿಗೆ ಹೆಚ್ಚಿನ ಅವ​ಕಾಶಗಳನ್ನು ನೀಡು​ತ್ತಿ​ರುವ ತಂಡ, ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ ಮೇಲೂ ಕಣ್ಣಿ​ಟ್ಟಿದೆ. ರಿಷಭ್‌ ಕಳಪೆ ಪ್ರದ​ರ್ಶನ ಮುಂದು​ವ​ರಿ​ಸಿ​ದರೆ ಮುಂದಿನ ಸರ​ಣಿಗೆ ಅವ​ರನ್ನು ಕೈಬಿ​ಡುವ ಸಾಧ್ಯತೆ ಇದೆ.

ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್; ಭಾರತ-ಆಫ್ರಿಕಾ ಕ್ರಿಕೆಟ್ ಸರಣಿ ಫ್ರೀ!

ಹಾರ್ದಿಕ್‌ ಹಾಗೂ ಕೃನಾಲ್‌ ಪಾಂಡ್ಯ ಆಲ್ರೌಂಡರ್‌ಗಳಾಗಿ ತಂಡ​ದ​ಲ್ಲಿ​ದ್ದಾರೆ. ಆಡುವ ಹನ್ನೊಂದ​ರಲ್ಲಿ ಇಬ್ಬ​ರಿಗೂ ಸ್ಥಾನ ಸಿಕ್ಕರೆ ಅಚ್ಚ​ರಿ​ಯಿಲ್ಲ. ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ಸಹ ರೇಸ್‌ನಲ್ಲಿ​ದ್ದಾರೆ.

ಅನ​ನು​ಭವಿ ಬೌಲಿಂಗ್‌ ಪಡೆ!: ಸ್ಪಿನ್ನರ್‌ಗಳಾದ ಯಜು​ವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ರನ್ನು ಸರ​ಣಿಗೆ ಆಯ್ಕೆ ಮಾಡಿಲ್ಲ. ಹೀಗಾಗಿ ರಾಜ​ಸ್ಥಾ​ನದ ರಾಹುಲ್‌ ಚಹಾರ್‌ಗೆ ಮತ್ತೊಮ್ಮೆ ಅವ​ಕಾಶ ಸಿಗ​ಲಿದೆ. ಜಸ್ಪ್ರೀತ್‌ ಬುಮ್ರಾ, ಭುವ​ನೇ​ಶ್ವರ್‌ ಕುಮಾರ್‌, ಮೊಹ​ಮದ್‌ ಶಮಿಗೆ ವಿಶ್ರಾಂತಿ ನೀಡ​ಲಾ​ಗಿದೆ. ಯುವ ವೇಗಿ​ಗ​ಳಾದ ನವ್‌ದೀಪ್‌ ಸೈನಿ, ದೀಪಕ್‌ ಚಹಾರ್‌, ಖಲೀಲ್‌ ಅಹ್ಮದ್‌ ಸಿಕ್ಕಿ​ರುವ ಅವ​ಕಾಶವನ್ನು ಬಳ​ಸಿ​ಕೊ​ಳ್ಳಲು ಕಾತ​ರಿ​ಸು​ತ್ತಿ​ದ್ದಾರೆ.

ಆಫ್ರಿ​ಕಾಕ್ಕೂ ಅನು​ಭ​ವದ ಕೊರತೆ

ಕ್ವಿಂಟನ್‌ ಡಿ ಕಾಕ್‌ ನೇತೃ​ತ್ವದ ದಕ್ಷಿಣ ಆಫ್ರಿಕಾ ತಂಡಕ್ಕೂ ಅನು​ಭ​ವಿ​ಗಳ ಕೊರತೆ ಇದೆ. ಫಾಫ್‌ ಡು ಪ್ಲೆಸಿ, ಇಮ್ರಾನ್‌ ತಾಹಿ​ರ್‌ ಸೇರಿ​ದಂತೆ ಕೆಲ ಪ್ರಮುಖ ಹಿರಿಯ ಆಟ​ಗಾ​ರ​ರಿಗೆ ಸ್ಥಾನ ನೀಡ​ಲಾ​ಗಿಲ್ಲ. ಡೇವಿಡ್‌ ಮಿಲ್ಲರ್‌ ಮೇಲೆ ನಿರೀಕ್ಷೆ ಹೆಚ್ಚಿದ್ದು, ಕಗಿಸೋ ರಬಾಡ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿ​ದ್ದಾರೆ.

ಪಿಚ್‌ ರಿಪೋರ್ಟ್‌

ಧರ್ಮ​ಶಾಲಾ ಪಿಚ್‌ ಬ್ಯಾಟಿಂಗ್‌ ಸ್ನೇಹಿ​ಯಾ​ಗಿದ್ದು, ರನ್‌ ಹಬ್ಬ ನಿರೀಕ್ಷೆ ಮಾಡ​ಲಾ​ಗಿದೆ. ಸಂಜೆ ಮೇಲೆ ಇಬ್ಬನಿ ಬೀಳುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಮಾಡಲು ನಿರ್ಧ​ರಿ​ಸುವ ಸಾಧ್ಯತೆ ಹೆಚ್ಚು. ಕಳೆದ ಬಾರಿ ಉಭಯ ತಂಡ​ಗಳು ಇಲ್ಲಿ ಮುಖಾ​ಮುಖಿ​ಯಾ​ಗಿ​ದ್ದಾಗ ದ.ಆ​ಫ್ರಿಕಾ 200 ರನ್‌ ಗುರಿ ಬೆನ್ನತ್ತಿ ಗೆಲುವು ಸಾಧಿ​ಸಿತ್ತು.

ತಂಡ​ಗಳ ಪಟ್ಟಿ

ಭಾರತ: ವಿರಾಟ್‌ ಕೊಹ್ಲಿ​(​ನಾ​ಯ​ಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕೃನಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹಾರ್‌, ಖಲೀಲ್‌ ಅಹ್ಮದ್‌, ದೀಪಕ್‌ ಚಹಾರ್‌, ನವ್‌ದೀಪ್‌ ಸೈನಿ.

ದ.ಆ​ಫ್ರಿ​ಕಾ: ಕ್ವಿಂಟನ್‌ ಡಿ ಕಾಕ್‌ (ನಾ​ಯ​ಕ), ರಾಸ್ಸಿ ವಾನ್‌ ಡುಸ್ಸೆನ್‌, ತೆಂಬ ಬವುಮಾ, ಜೂನಿ​ಯರ್‌ ಡಾಲಾ, ಬೊರ್ನ್‌ ಫೆäಟ್ರ್ಯುನ್‌, ಬ್ಯೂರನ್‌ ಹೆಂಡ್ರಿಕ್ಸ್‌, ರೀಜಾ ಹೆಂಡ್ರಿಕ್ಸ್‌, ಡೇವಿಡ್‌ ಮಿಲ್ಲರ್‌, ಏಂರಿಚ್‌ ನಾರ್ಟೆ, ಆ್ಯಂಡಿಲೆ ಫೆಲು​ಕ್ವಾಯೋ, ಡ್ವೇನ್‌ ಪ್ರಿಟೋ​ರಿ​ಯಸ್‌, ಕಗಿಸೋ ರಬಾಡ, ತಬ್ರೇಜ್‌ ಶಮ್ಸಿ, ಜಾಜ್‌ರ್‍ ಲಿಂಡೆ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

Follow Us:
Download App:
  • android
  • ios